ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 36 ತಾಸಿನ ಭಾರತ ಭೇಟಿ ಪೂರ್ಣಗೊಂಡಿದೆ. ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅವರು ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿ ಸಂಭ್ರಮಿಸಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಅಧ್ಯಕ್ಷರಲ್ಲಿ ಡ್ವೈಟ್ ಡಿ. ಐಷೆನ್ಹೋವರ್ ಮೊದಲಿಗರು. 1959ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅವರಿಗೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಬಹಳ ಆತ್ಮೀಯರಾಗಿದ್ದರು. ಐಷೆನ್ಹೋವರ್ ಅವರು ಗಾಂಧೀಜಿ ಸಮಾಧಿಗೆ ಗೌರವ ಸಲ್ಲಿಸಿದ್ದರು, ತಾಜ್ಮಹಲ್ಗೂ ಭೇಟಿ ನೀಡಿದ್ದರು. ರಾಮಲೀಲಾ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷ ಜನ ಭಾಗವಹಿಸಿದ್ದರು ಎಂದು ಆಗ ವರದಿಯಾಗಿತ್ತು. ‘ನಮ್ಮ ಹೃದಯದ ಒಂದು ಭಾಗವನ್ನು ಅವರು ಒಯ್ದಿದ್ದಾರೆ’ ಎಂದು ಐಷೆನ್ಹೋವರ್ ಅವರು ಅಮೆರಿಕಕ್ಕೆ ಹಿಂದಿರುಗಿದ ಬಳಿಕ ನೆಹರೂ ಹೇಳಿದ್ದರು.

ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆಯೂ ಅಂತಹುದೊಂದು ವೈಯಕ್ತಿಕ ನಂಟು ಇದೆ. ಈ ಇಬ್ಬರು ನಾಯಕರು ಹಲವು ಬಾರಿ ಭೇಟಿಯಾಗಿದ್ದಾರೆ. ಪ್ರತಿ ಭೇಟಿಯಲ್ಲಿಯೂ ಸೌಹಾರ್ದ ಎದ್ದು ಕಂಡಿದೆ. ‘ಭಾರತ ನಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲ. ಆದರೆ, ಮೋದಿ ಬಹಳ ಒಳ್ಳೆಯ ಗೆಳೆಯ, ಅವರು ಇಷ್ಟ’ ಎಂದು ಭಾರತಕ್ಕೆ ಬರುವ ಮೊದಲೇ ಟ್ರಂಪ್ ಹೇಳಿದ್ದರು. ವೈಯಕ್ತಿಕ ಗೆಳೆತನದ ಮೂಲಕವೇ ರಾಜತಾಂತ್ರಿಕ ಸಂಬಂಧ ವಿಸ್ತರಿಸುವುದು ಅವರ ರೂಢಿ. ವಿದೇಶಕ್ಕೆ ಭೇಟಿ ನೀಡಿದಾಗ ಸಾರ್ವಜನಿಕವಾಗಿ ಅದ್ಧೂರಿ ಸಮಾರಂಭ ನಡೆಸುವುದು ಮೋದಿ ಅವರಿಗೆ ಅಚ್ಚುಮೆಚ್ಚು. ಟ್ರಂಪ್ ಅವರು ಭಾರತಕ್ಕೆ ಬಂದಾಗ ಈ ಎರಡೂ ಮೇಳೈಸಿದವು. ಅಹಮದಾಬಾದ್ನ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ 1.25 ಲಕ್ಷ ಮಂದಿ ಹಾಜರಿದ್ದರು ಎಂದು ವರದಿಯಾಗಿದೆ. ನಾಯಕರ ನಡುವಣ ಸ್ನೇಹವು ದೇಶಗಳ ನಡುವಣ ಸಂಬಂಧವನ್ನು ಇನ್ನಷ್ಟು ಸೌಹಾರ್ದಗೊಳಿಸುವುದು ಸಕಾರಾತ್ಮಕ. ಆದರೆ, ದೇಶಗಳ ಹಿತಾಸಕ್ತಿಗಿಂತ ನಾಯಕರ ಇಷ್ಟಾನಿಷ್ಟಗಳು ಮೇಲುಗೈ ಪಡೆಯದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ಟ್ರಂಪ್ ಅವರ ಭೇಟಿಯು ಎಲ್ಲ ವಿಚಾರದಲ್ಲಿಯೂ ಸಕಾರಾತ್ಮಕ ಆಗಿರಲಿಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ನಲ್ಲಿ ನಡೆಯಲಿದೆ. ಟ್ರಂಪ್ ಅವರು ಪುನರಾಯ್ಕೆ ಬಯಸಿದ್ದಾರೆ. ಭಾರತ ಮೂಲದ ಅಮೆರಿಕನ್ನರ ಮತ ಸೆಳೆಯುವುದು ಈ ಭೇಟಿಯ ಉದ್ದೇಶ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಧಿಕಾರದ ಅವಧಿಯ ಕೊನೆಯಲ್ಲಿ ಭೇಟಿ ನೀಡಿರುವುದು ಇದನ್ನು ಪುಷ್ಟೀಕರಿಸುತ್ತದೆ. ಮೋದಿ ಅವರು ಕಳೆದ ವರ್ಷ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ‘ಹೌಡಿ ಮೋದಿ’ ಎಂಬ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ಜತೆಗೂಡಿದ್ದರು. ಟ್ರಂಪ್ಗೆ ಮತ ನೀಡುವಂತೆ ಮೋದಿ ಹೇಳಿದ್ದರು ಎಂಬುದು ಆಗ ದೊಡ್ಡ ಚರ್ಚೆಯ ವಿಷಯವಾಗಿತ್ತು.

ಚುನಾವಣೆಯ ಲಾಭ– ನಷ್ಟಕ್ಕೆ ದ್ವಿಪಕ್ಷೀಯ ಸಂಬಂಧವನ್ನು ಬಳಸಿಕೊಳ್ಳುವುದು ಆರೋಗ್ಯಕರ ರಾಜಕಾರಣ ಅಲ್ಲ. ದ್ವಿಪಕ್ಷೀಯ ಸಂಬಂಧ ಅಥವಾ ವಿದೇಶಾಂಗ ನೀತಿಗೆ ಸಂಬಂಧಿಸಿದ ದೊಡ್ಡ ಕಾರ್ಯಸೂಚಿಗಳೇನೂ ಟ್ರಂಪ್ ಭೇಟಿಗೆ ಇರಲಿಲ್ಲ. ವಾಣಿಜ್ಯಕ್ಕೆ ಸಂಬಂಧಿಸಿ ಎರಡು ದೇಶಗಳ ನಡುವೆ ಇತ್ತೀಚಿನ ದಿನಗಳಲ್ಲಿ ಗಂಭೀರವಾದ ತಿಕ್ಕಾಟ ನಡೆದಿದೆ. ಭಾರತಕ್ಕೆ ಇದ್ದ ಹಲವು ರಿಯಾಯಿತಿಗಳನ್ನು ಅಮೆರಿಕ ರದ್ದು ಮಾಡಿತ್ತು. ಅಮೆರಿಕದ ಹಲವು ಸರಕುಗಳ ಮೇಲೆ ಭಾರತ ಸುಂಕವನ್ನು ಹೆಚ್ಚಿಸಿತ್ತು. ‘ಭಾರತ ಸುಂಕಗಳ ರಾಜ’ ಎಂದು ಟ್ರಂಪ್ ಈ ಹಿಂದೆ ಹಂಗಿಸಿದ್ದರು. ಈ ರೀತಿಯ ಕಿರಿಕಿರಿಗಳಿಂದ ಮುಕ್ತಿ ಪಡೆಯಲು ವಾಣಿಜ್ಯ ಒಪ್ಪಂದದ ಅಗತ್ಯ ಇದೆ. ಟ್ರಂಪ್ ಅವರ ಈ ಭೇಟಿಯಲ್ಲಿ ಅದು ಆಗಿಲ್ಲ. ದೊಡ್ಡ ಮಟ್ಟದ ವಾಣಿಜ್ಯ ಒಪ್ಪಂದದ ಚರ್ಚೆ ಮುಂದೆ ನಡೆಯಲಿದೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿರುವುದು ಸ್ವಾಗತಾರ್ಹ.

ಅಮೆರಿಕದ ಜತೆ ವಹಿವಾಟಿನ ವಿಚಾರದಲ್ಲಿ ಭಾರತವು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ, ಭಾರತದ ರಫ್ತು ಮೌಲ್ಯವು ಅಮೆರಿಕದಿಂದ ಮಾಡಿಕೊಳ್ಳುತ್ತಿರುವ ಆಮದಿಗಿಂತ ಹೆಚ್ಚು. ಆದರೆ, ಕಳೆದ ಕೆಲ ವರ್ಷಗಳಲ್ಲಿ ಈ ಅಂತರ ಕುಸಿಯುತ್ತಲೇ ಇದೆ. ಎಚ್ಚರ ವಹಿಸದಿದ್ದರೆ ಇದು ಕೊರತೆಯತ್ತ ಸಾಗಬಹುದು. ಭಾರತದೆಲ್ಲೆಡೆ ‘ಮೇಡ್ ಇನ್ ಯುಎಸ್’ ಸರಕುಗಳು ರಾರಾಜಿಸಲಿವೆ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದನ್ನು ವಾಣಿಜ್ಯ ಒಪ್ಪಂದ ರೂಪುಗೊಳ್ಳುವಾಗ ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ, ‘ಭಾರತದಲ್ಲಿ ತಯಾರಿಸಿ’ ನೀತಿ ಅರ್ಥ ಕಳೆದುಕೊಳ್ಳಬಹುದು. ‘ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ಬೇಕು. ಈ ದಿಸೆಯಲ್ಲಿ ಬಹಳಷ್ಟು ಕೆಲಸ ಮಾಡಿದ್ದಾಗಿ ಮೋದಿ ಹೇಳಿದ್ದಾರೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಟ್ರಂಪ್ ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿರೋಧವು ಹಿಂಸೆಗೆ ಕಾರಣವಾಗು
ತ್ತಿರುವ ಈ ಸನ್ನಿವೇಶದಲ್ಲಿ ಪ್ರಧಾನಿ ಹೇಳಿರಬಹುದಾದ ಈ ಮಾತಿಗೆ ಹೆಚ್ಚು ಮಹತ್ವ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.