ನಾವು ನಮ್ಮ ರಾಶಿಯ ಮೇಲೆ ನಮ್ಮ ಭವಿಷ್ಯ ನಿರ್ಮಾಣ ಆಗತೈತಿ ಅಂತ ತಿಳಕೊಂಡೇವಿ. ರಾಶಿ ಮೇಲೆ ನಮ್ಮ ಭವಿಷ್ಯ ನಿರ್ಮಾಣ ಆಗಲ್ಲ, ನಾವು ಮಾಡುವ ಕಾರ್ಯಗಳ ಮೇಲೆ ನಮ್ಮ ಭವಿಷ್ಯ ನಿಂತೈತಿ. ಒಳ್ಳೆಯ ಕೆಲಸ ಮಾಡಿದ್ದರೆ ಒಳ್ಳೆಯ ಫಲ ಸಿಗತೈತಿ. ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫಲ ಸಿಗತೈತಿ. ರಾಶಿ ಮೇಲೆ ಭವಿಷ್ಯ ನಿರ್ಮಾಣ ಆಗೋದಾದರೆ ರಾಮನ ರಾಶಿಯೂ ಒಂದೇ ಆಗಿತ್ತು. ರಾವಣನ ರಾಶಿಯೂ ಅದೇ ಆಗಿತ್ತು. ಆದರೆ ರಾಮ ಹಿತನಾದ ರಾವಣ ಹತನಾದ. ವಿಶ್ವೇಶ್ವರಯ್ಯ ಮತ್ತು ವೀರಪ್ಪನ್ ಇಬ್ಬರ ರಾಶಿಯೂ ಒಂದೇ ಆಗಿತ್ತು. ವಿಶ್ವೇಶ್ವರಯ್ಯ ದಿವಾನ ಆದರು. ವೀರಪ್ಪನ್ ದಿವಾನಾ ಆದ. ವಿಶ್ವೇಶ್ವರಯ್ಯ ಚೇರ್ಮನ್ ಆದರು. ವೀರಪ್ಪನ್ ಚೋರ್ ಮನ್ ಆದ.

ಕೆಲವರು ಒಳ್ಳೆಯ ಕೆಲಸ ಯಾಕೆ ಮಾಡಬೇಕು? ನಾವು ನಮ್ಮ ಮನೆಯಲ್ಲಿ ಉಂಡು
ತಿಂದ್ಕೊಂಡು ಅರಾಂ ಇದೀವಿ. ಬೇರೆಯವರ ಉಸಾಬರಿ ನಮಗ್ಯಾಕೆ ಅಂತಾರ. ಒಮ್ಮೆ ಯೋಚನೆ ಮಾಡಿ. ಈ ದೇಹಕ್ಕೆ ಶಕ್ತಿ ಬಂದಿದ್ದು ಎಲ್ಲಿಂದ? ಅನ್ನದಿಂದ ಶಕ್ತಿ ಬಂದೈತಿ. ಗಾಳಿ, ಬೆಳಕು ಶಕ್ತಿ ಕೊಟ್ಟೈತಿ. ನಾವು ದಿನನಿತ್ಯ ಚೈತನ್ಯದಿಂದ ಬದುಕಲು ಶಕ್ತಿ ಬಂದಿದ್ದು ಭೂಮಿ ಬೆಳೆದು ಕೊಟ್ಟ ಅನ್ನದಿಂದ. ಸೂರ್ಯನ ಬೆಳಕಿನಿಂದ. ಗಾಳಿಯಿಂದ ಮತ್ತು ನದಿಯ ನೀರಿನಿಂದ. ಈ ನಿಸರ್ಗ ಅನ್ನ, ಗಾಳಿ, ಬೆಳಕು, ನೀರು ಎಲ್ಲವನ್ನೂ ಕೊಟ್ಟೈತಿ. ನಾವು ನಿಸರ್ಗಕ್ಕೆ ಏನು ಕೊಟ್ಟೇವಿ? ಭೂಮಿ ತಾಯಿ ಬೆಳೆದುಕೊಟ್ಟ ಹಣ್ಣನ್ನು ಮಾರಾಟ ಮಾಡಿ ನಾವು ಬದುಕತೀವಿ. ಆದರೆ ಹಣ್ಣುಕೊಟ್ಟ ಭೂಮಿತಾಯಿ ಏನಾದರೂ ತಗಳೋತಾಳೇನು? ಪುಕ್ಕಟೆಯಾಗಿ ಕೊಡತಾಳ ಅವಳು. ಅವಳಿಗೆ ನಾವು ಏನು ಕೊಟ್ಟೇವಿ? ಮನುಷ್ಯ ಯಾಕೆ ಒಳ್ಳೆಯ ಕೆಲಸ ಮಾಡಬೇಕು ಅಂದರ ನಾವೆಲ್ಲ ನೆಲೆಸಿರೋದು ಬಾಡಿಗೆ ಮನೆಯಲ್ಲಿ. ದೇವರ ಮನೆ ಇದು. ಜೀವಿಗಳೆಲ್ಲ ಬಾಡಿಗೆದಾರರು. ಒಳ್ಳೆಯ ಕೆಲಸ ಮಾಡೋದು ಅಂದರ ಬಾಡಿಗೆ ಕಟ್ಟೋದು ಅಷ್ಟೆ. ಸಂಪತ್ತು ಇದ್ದರೆ ಸಂಪತ್ತು ಹಂಚು.

ಬಂಗಾರದ ಬಳೆ, ವಾಚು ಕಟ್ಟಿಕೊಂಡ ಕೈಗಳಿಗಿಂತ ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡುವ ಕೈಗಳು ಬಹಳ ಶ್ರೇಷ್ಠ. ದುಡ್ಡಿದ್ದವರಷ್ಟೇ ದೊಡ್ಡವರಲ್ಲ. ದುಡ್ಡಿತ್ತು ದಾನ ಮಾಡು. ಶಕ್ತಿ ಇತ್ತು ಸೇವಾ ಮಾಡು. ದೇವರ ಗುಡಿಗೆ ಬಂಗಾರದ ಕಳಶ ನಿರ್ಮಿಸಿಕೊಟ್ಟವನಿಗಿಂತ ದೇವರ ಗುಡಿ ಮುಂದಿನ ಕಸ ಹೊಡೆದವನ ಭಕ್ತಿ ಬಹಳ ದೊಡ್ಡದು.

ಒಬ್ಬ ದಾರಿಯಲ್ಲಿ ಹೋಗುತ್ತಿದ್ದ. ಹತ್ತಿರದಲ್ಲೇ ಮಾವಿನ ಮರವೊಂದು ಆತನ ಕಣ್ಣಿಗೆ ಬಿತ್ತು. ಹೋಗಿ ಮಾವಿನ ಹಣ್ಣು ಹರಿದ. ಆ ಮರದ ಮಾಲೀಕ ಬಂದು ಈತನ ಬೆನ್ನಿಗೆ ಬಾರಿಸಿದ. ಹಣ್ಣನ್ನು ನೋಡಿದ್ದು ಕಣ್ಣು. ಮಾವಿನ ಮರದ ಹತ್ತಿರಕ್ಕೆ ಹೋಗಿದ್ದು ಕಾಲು. ಹಣ್ಣು ಹರಿದಿದ್ದು ಕೈಗಳು. ಏಟು ತಿಂದಿದ್ದು ಬೆನ್ನು. ಆದರೆ, ನೋವಾಗಿ ನೀರು ಬಂದಿದ್ದು ಕಣ್ಣಾಗ. ನೋಡಿದ ಕಣ್ಣಿಗೇ ಶಿಕ್ಷೆಯಾತು. ಅಂದರ ಇಲ್ಲಿ ನಾವು ಮಾಡಿದ ಕೆಲಸಕ್ಕೆ ಇಲ್ಲಿಯೇ ಫಲವೂ ಸಿಗುತೈತಿ. ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫಲ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.