ಗುರುವೊಬ್ಬ ಶಿಷ್ಯನಿಗೆ ಧ್ಯಾನದ ಬಗ್ಗೆ ಹೇಳುತ್ತಿದ್ದ. ಶಿಷ್ಯ ಅಸಡ್ಡೆಯಿಂದ, ‘ಧ್ಯಾನದಿಂದ ಊಟ, ಬಟ್ಟೆ ಏನು ಸಿಗುತ್ತೆ ಹೇಳಿ?’ ಎಂದ. ಗುರು ನಕ್ಕ. ‘ನೀನು ಏನನ್ನು ಧ್ಯಾನಿಸುತ್ತಿಯೋ ಅದು ಸಿಗುತ್ತೆ. ಆದರೆ ಅದಕ್ಕೆ ಕಪ್ಪೆಗಿರುವಂಥಾ ದೊಡ್ದ ನಿಷ್ಠೆ, ನಂಬಿಕೆ ಬೇಕು’ ಎಂದ. ಶಿಷ್ಯ, ‘ನಾನು ಮನುಷ್ಯ ಯಕಶ್ಚಿತ್ ಕಪ್ಪೆಯ ನಿಷ್ಠೆ ನನಗೆ ಬರಬೇಕಾ?’ ಎಂದು ಶಿಷ್ಯ ಅಸಮಾಧಾನಗೊಂಡ. ಅದಕ್ಕೆ ಗುರು, ‘ಆಯ್ತಪ್ಪಾ ಕಪ್ಪೆ ಯಕಶ್ಚಿತ್, ನೀನು ಅದಕ್ಕಿಂತ ದೊಡ್ಡವನು. ಈಗ ಹೇಳು ನಾಳೆ ಮಳೆ ಬರುತ್ತದಾ’ ಎಂದು ಕೇಳಿದ.

ಅದಕ್ಕೆ ಶಿಷ್ಯ, ‘ಅದನ್ನು ಹೇಗೆ ಹೇಳಲಿ? ಬಂದರೂ ಬರಬಹುದು, ಇಲ್ಲದಿದ್ದರೆ ಇಲ್ಲ’ ಎಂದ ಶಿಷ್ಯನ ಮಾತಿಗೆ, ‘ಸರಿ ಹಾಗಿದ್ದರೆ ಮಳೆಗಾಗಿ ನೀನು ಧ್ಯಾನಿಸು ಮಳೆ ಬರುತ್ತದೆ’ ಎಂದ ಗುರು. ‘ಇದೆಂಥಾ ತಮಾಶೆ ಮಳೆ ಬಾ ಎಂದರೆ ಬಂದುಬಿಡುತ್ತದಾ? ಅದೆಲ್ಲಾ ಆಗದ ಕೆಲಸ’ ಎಂದ ಶಿಷ್ಯ. ‘ನಿನ್ನಲ್ಲಿ ಅನುಮಾನವಿದೆ, ನಂಬಿಕೆಯಿಲ್ಲ. ಅದೇ ಕಪ್ಪೆಗಳನ್ನು ನೋಡು ಒಂದೇ ಮನಸ್ಸಿನಿಂದ ಮಳೆಗಾಗಿ ಧ್ಯಾನಿಸುತ್ತವೆ’ ಎಂದ ಗುರು.

ಶಿಷ್ಯನಿಗೆ ಇದು ಸೋಜಿಗ ಅನ್ನಿಸಿತು. ‘ಮಳೆ ಬಂದಾಗ ಕಪ್ಪೆಗಳು ಕೂಗುತ್ತಾ ಬರುವುದು ಸಹಜ ಅದಕ್ಕೆ ನೀವು ಕಥೆ ಕಟ್ಟುತ್ತಿದ್ದೀರಲ್ಲಾ’ ಎಂದ ಬೇಸರದಿಂದ. ಗುರುವೆಂದ, ‘ಕಥೆಯಲ್ಲ, ಸುಮ್ಮನೆ ಯೋಚನೆ ಮಾಡು ಒಂದು ಮಳೆ ಬರುವವರೆಗೂ ಅವು ಎಲ್ಲಿದ್ದವು? ಮಳೆ ನೆಲಕ್ಕೆ ಬಿದ್ದ ಗಳಿಗೆಯೇ ಅವು ಹೇಗೆ ಖುಷಿಯಿಂದ ಹೊರಗೆ ಬಂದವು ಅಂತ?’

ಶಿಷ್ಯನಲ್ಲಿ ಅದಕ್ಕೂ ಉತ್ತರವಿಲ್ಲ. ಹೌದಲ್ಲಾ! ಈ ಸೋಜಿನ ತನಗೆ ಯಾಕೆ ಗೊತ್ತಿಲ್ಲ? ಅವನು ಮೃದುವಾಗುತ್ತಾ ಆ ಕಪ್ಪೆಗಳು ಎಲ್ಲಿದ್ದವು ಹೇಳಿ ಗುರುಗಳೇ ಎಂದು ಕೇಳಿದ. ಗುರು ನಗುತ್ತಾ ಹೇಳಿದ, ‘ವರ್ಷ ಪೂರ್ತಿ ಮಳೆಗಾಗಿ ಧ್ಯಾನಿಸುತ್ತಾ, ಬಂದೇ ಬರುತ್ತೆ ಎನ್ನುವ ನಂಬಿಕೆಯಿಂದ ಭೂಮಿಯೊಳಗೆ ಕೋಶಾವಸ್ಥೆಯಲ್ಲಿದ್ದು ಕಾಯುತ್ತಿದ್ದವು. ಒಂದೇ ಮಳೆ ಅವುಗಳ ನಿರೀಕ್ಷೆಯನ್ನು ನಿಜಗೊಳಿಸಿಬಿಡುತ್ತದೆ. ಇದು ಪ್ರಕೃತಿ. ಇದೇ ಧ್ಯಾನ. ಯಾವುದನ್ನೇ ಆಗಲಿ ನಮಗೆ ದಕ್ಕುವವರೆಗೂ ಅತ್ಯಂತ ತಾಳ್ಮೆಯಿಂದ, ನಂಬಿಕೆಯಿಂದ ಕಾಯಬೇಕು. ಹೀಗೆ ಕಾಯುವುದೇ ಧ್ಯಾನ’ ಎಂದು ಗುರು ಧ್ಯಾನದ ಮಹತ್ವ ಹೇಳಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.