ನವದೆಹಲಿ: ನವೆಂಬರ್ 19ರಂದು ಭಾರತ– ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ಆತಿಥ್ಯ ವಹಿಸಿದ್ದ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ‘ಸಾಧಾರಣ ಮಟ್ಟದ್ದು’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರೇಟಿಂಗ್ ನೀಡಿದೆ.

ಆದರೆ ಹೊರಾಂಗಣ (ಔಟ್‌ಫೀಲ್ಡ್) ‘ಅತ್ಯುತ್ತಮ’ವಾಗಿತ್ತು ಎಂದು ಐಸಿಸಿ ಮ್ಯಾಚ್‌ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ರೇಟಿಂಗ್ ನೀಡಿದ್ದಾರೆ. ಟ್ರಾವಿಸ್ ಹೆಡ್ ಶತಕದ (137) ಬಲದಿಂದ ಆಸ್ಟ್ರೇಲಿಯಾ ಫೈನಲ್ ನಲ್ಲಿ 6 ವಿಕೆಟ್‌ಗಳಿಂದ ಜಯಗಳಿಸಿತ್ತು.

ಭಾರತ ಲೀಗ್ ಪಂದ್ಯಗಳನ್ನು ಆಡಿದ್ದ ಕೋಲ್ಕತ್ತ, ಲಖನೌ, ಅಹಮದಾಬಾದ್ ಮತ್ತು ಚೆನ್ನೈ ಕ್ರೀಡಾಂಗಣದ ಪಿಚ್‌ಗಳೂ ‘ಸಾಧಾರಣ ಮಟ್ಟದ್ದು’ ಎಂದು ಐಸಿಸಿ ರೇಟಿಂಗ್ ನೀಡಿದೆ. ಆದರೆ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ತಾಣವಾದ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್‌ಗೆ ‘ಉತ್ತಮ’ ರೇಟಿಂಗ್ ನೀಡಲಾಗಿದೆ. ಆಸ್ಟ್ರೇಲಿಯಾ– ದಕ್ಷಿಣ ಆಫ್ರಿಕಾ ನಡುವೆ ಅಲ್ಪಸ್ಕೋರುಗಳನ್ನು ಕಂಡ ಎರಡನೇ ಸೆಮಿಫೈನಲ್ ಪಂದ್ಯ ನಡೆದ ಈಡನ್ ಗಾರ್ಡನ್ ಕ್ರೀಡಾಂಗಣಕ್ಕೂ ‘ಎವರೇಜ್’ ರೇಟಿಂಗ್ ನೀಡಲಾಗಿದೆ. ಆದರೆ ಈಡನ್ ಗಾರ್ಡನ್‌ನ ಹೊರಾಂಗಣ ‘ಅತ್ಯುತ್ತಮ ಮಟ್ಟದ್ದು’ ಎಂದು ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ರೇಟಿಂಗ್ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.