ಪರ್ತ್: ನೇಥನ್ ಲಯನ್ ಸ್ಪಿನ್ ಮೋಡಿಯ ಮುಂದೆ ವೆಸ್ಟ್ ಇಂಡೀಸ್ ಬ್ಯಾಟರ್ಗಳ ಆಟ ನಡೆಯಲಿಲ್ಲ.

ಆರು ವಿಕೆಟ್ ಗಳಿಸಿದ ನೇಥನ್ ಬೌಲಿಂಗ್ನಿಂದಾಗಿ ಆಸ್ಟ್ರೇಲಿಯಾ ತಂಡವು 164 ರನ್ಗಳಿಂದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ನಲ್ಲಿ ಜಯಿಸಿತು. ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ವಿಂಡೀಸ್ ಆರಂಭಿಕ ಬ್ಯಾಟರ್, ನಾಯಕ ಕ್ರೇಗ್ ಬ್ರಾಥ್ವೇಟ್ (ಔಟಾಗದೆ 104; 110ಎ, 4X13, 6X2) ಶತಕ ವ್ಯರ್ಥವಾಯಿತು.

ಗೆಲುವಿಗಾಗಿ 497 ರನ್ಗಳ ಗುರಿ ಬೆನ್ನಟ್ಟಿದ್ದ ವಿಂಡೀಸ್ ತಂಡಕ್ಕೆ 110.5 ಓವರ್ಗಳಲ್ಲಿ 333 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಶನಿವಾರ ದಿನದಾಟದ ಮುಕ್ತಾಯಕ್ಕೆ ವಿಂಡೀಸ್ ತಂಡವು 3 ವಿಕೆಟ್ಗಳಿಗೆ 192 ರನ್ ಗಳಿಸಿತ್ತು. ಶತಕ ಗಳಿಸಿ ಕ್ರೀಸ್ನಲ್ಲಿದ್ದ ಬ್ರಾಥ್ವೇಟ್ ಹಾಗೂ ಕೈಲ್ ಮೇಯರ್ಸ್ ಅವರು ವಿಂಡೀಸ್ ಸೋಲು ತಪ್ಪಿಸುವ ನಿರೀಕ್ಷೆ ಮೂಡಿಸಿದ್ದರು.

ಆದರೆ ನೇಥನ್ ಲಯನ್ ಅವರಿಬ್ಬರ ವಿಕೆಟ್ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು. ಕೊನೆಯ ಹಂತದಲ್ಲಿ ರೋಸ್ಟನ್ ಚೇಸ್ (55; 85ಎ) ಮತ್ತು ಅಲ್ಜರಿ ಜೋಸೆಫ್ (43; 72) ಪಂದ್ಯವನ್ನು ಡ್ರಾದತ್ತ ಮುನ್ನಡೆಸುವ ನಿರೀಕ್ಷೆ ಮೂಡಿಸಿದ್ರು. ಟ್ರಾವಿಸ್ ಹೆಡ್ ಎಸೆತದಲ್ಲಿ ಜೋಸೆಫ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಆರು ಓವರ್ಗಳ ನಂತರ ನೇಥನ್ ತಮ್ಮ ಒಂದೇ ಓವರ್ನಲ್ಲಿ ರಾಸ್ಟನ್ ಹಾಗೂ ರೋಚ್ ವಿಕೆಟ್ಗಳನ್ನು ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 152.4 ಓವರ್ಗಳಲ್ಲಿ 4ಕ್ಕೆ598, ವೆಸ್ಟ್ ಇಂಡೀಸ್: 98.2 ಓವರ್ಗಳಲ್ಲಿ 283, ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 37 ಓವರ್ಗಳಲ್ಲಿ 2 ವಿಕೆಟ್ಗಳಿಗೆ 182 ಡಿಕ್ಲೇರ್ಡ್. ವೆಸ್ಟ್ ಇಂಡೀಸ್: 110.5 ಓವರ್ಗಳಲ್ಲಿ 333 (ಕ್ರೇಗ್ ಬ್ರಾಥ್ವೇಟ್ 110, ಕೈಲ್ ಮೇಯರ್ಸ್ 10, ರಾಸ್ಟನ್ ಚೇಸ್ 55, ಅಲ್ಜರಿ ಜೋಸೆಫ್ 43, ನೇಥನ್ ಲಯನ್ 128ಕ್ಕೆ6, ಟ್ರಾವಿಸ್ ಹೆಡ್ 25ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 164 ರನ್ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ. ಪಂದ್ಯಶ್ರೇಷ್ಠ: ಮಾರ್ನಸ್ ಲಾಬುಷೇನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.