ನಾಟಿಂಗಂ: ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಆಲ್ರೌಂಡರ್ ಶಕೀಬ್ ಅಲ್ ಹಸನ್ ತಂಡದಲ್ಲಿರುವ ಕಾರಣ ಬಾಂಗ್ಲಾದೇಶದ ಆತ್ಮವಿಶ್ವಾಸ ಹೆಚ್ಚಾಗಿದೆ. ಅನುಭವಿ ಆಟಗಾರರು ಇರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ಎದುರು ಬಾಂಗ್ಲಾ ತಂಡವು ಗೆದ್ದು ಬೀಗಲು ಶಕೀಬ್ ಆಟವೇ ಕಾರಣವಾಗಿತ್ತು. ಟೂರ್ನಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕ ಗಳಿಸಿರುವ ಹಸನ್ ಒಟ್ಟು 384 ರನ್ ಗಳಿಸಿದ್ಧಾರೆ. ಬ್ಯಾಟ್ಸ್ಮನ್ಗಳ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ವಿಂಡೀಸ್ ಎದುರಿನ ಪಂದ್ಯದಲ್ಲಿ ಅವರೊಂದಿಗೆ ಬ್ಯಾಟ್ಸ್ಮನ್ ಲಿಟನ್ ದಾಸ್ ಕೂಡ ಮಿಂಚಿದ್ದರು. ಅದೇ ಲಯವನ್ನು ಆ್ಯರನ್ ಫಿಂಚ್ ಬಳಗದ ಎದುರು ಮುಂದುವರಿಸುವ ಛಲದಲ್ಲಿ ತಂಡವಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ–ಬಾಂಗ್ಲಾದೇಶ ಹಣಾಹಣಿ ಇಂದು: ಉತ್ತಮ ಲಯದಲ್ಲಿ ಫಿಂಚ್, ವಾರ್ನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.