ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಭ್ರಷ್ಟಾಚಾರ ವಿರೋಧಿ ದಳದ(ಎಸಿಯು) ಸ್ವತಂತ್ರ ಅಧ್ಯಕ್ಷೆಯಾಗಿ ಶ್ರೀಲಂಕಾದ ಸುಮತಿ ಧರ್ಮವರ್ಧೆನಾ ಅವರನ್ನು ನೇಮಕ ಮಾಡಲಾಗಿದೆ.

14 ವರ್ಷಗಳ ಕಾಲ ಅಧ್ಯಕ್ಷೆಯಾಗಿದ್ದ ಸರ್ ರೋನಿ ಫ್ಲನಾಗನ್ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸುಮತಿ ಅವರನ್ನು ನೇಮಕ ಮಾಡಲಾಗಿದೆ.

‘ಐಸಿಸಿಯ ಭ್ರಷ್ಟಾಚಾರ ವಿರೋಧಿ ದಳದ(ಎಸಿಯು) ನೂತನ ಸ್ವತಂತ್ರ ಅಧ್ಯಕ್ಷೆಯಾಗಿ ಸುಮತಿ ಧರ್ಮವರ್ಧೆನಾ ಅವರನ್ನು ನೇಮಕ ಮಾಡಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆದೇಶಿಸಿದೆ’ಎಂದು ಪ್ರಕಟಣೆ ತಿಳಿಸಿದೆ.

ಶ್ರೀಲಂಕಾದ ಅಟಾರ್ನಿ ಜನರಲ್ ಇಲಾಖೆಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಸುಮತಿ, ಶ್ರೀಲಂಕಾ ಕ್ರೀಡಾ ಸಚಿವಾಲಯದ ಪರ ಹಲವು ಕಾನೂನು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

ಇಂಟರ್ಪೋಲ್ ಮತ್ತು ವಿಶ್ವಸಂಸ್ಥೆ ಜೊತೆಗೆ ಡ್ರಗ್ಸ್ ಆ್ಯಂಡ್ ಕ್ರೈಮ್, ಕ್ರೀಡಾ ಭ್ರಷ್ಟಾಚಾರದ ವಿಷಯಗಳ ತನಿಖೆ ಮತ್ತು ಕ್ರೀಡಾ ಕಾಯ್ದೆಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆ ಅಡಿಯಲ್ಲಿ ಕಾನೂನು ಕ್ರಮಗಳ ಕುರಿತಾದ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ.

‘ಐಸಿಸಿಯ ಭ್ರಷ್ಟಾಚಾರ-ವಿರೋಧಿ ಘಟಕದ ಸ್ವತಂತ್ರ ಅಧ್ಯಕ್ಷರು ಎಸಿಯು ಮೇಲ್ವಿಚಾರಣೆ ಮತ್ತು ಅದನ್ನು ಮುನ್ನಡೆಸುವ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾರೆ. ಧರ್ಮವರ್ಧೆನಾ ಅವರು ನವೆಂಬರ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ಎಂದು ಐಸಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.