ಮುಂಬೈ: ಭಾರತೀಯ ಕ್ರಿಕೆಟ್‌ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ ಈಗ ಯೋ–ಯೋ ಪರೀಕ್ಷೆ ಕಡ್ಡಾಯ. ಈ ಸಾಧನೆಗೊಂದು ಸ್ಪಷ್ಟ ಉದಾಹರಣೆ ಕಿಂಗ್ ವಿರಾಟ್ ಕೊಹ್ಲಿ. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಫಿಟ್ ಇದ್ದಾರೆಯೇ ಎಂಬ ಪ್ರಶ್ನೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.

ಭಾರತ ತಂಡದ ಫಿಟ್‌ನೆಸ್ ತರಬೇತುದಾರ ಅಂಕಿತ್ ಕಲಿಯಾರ್ ಅವರ ಪ್ರಕಾರ, ‘ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿಯಷ್ಟೇ ಫಿಟ್ ಇದ್ದಾರೆ’ ಎಂದಿದ್ದಾರೆ.

‘ರೋಹಿತ್ ಒಬ್ಬ ಒಳ್ಳೆಯ ಆಟಗಾರ. ಅವರ ಫಿಟ್‌ನೆಸ್ ಕೂಡಾ ಅಷ್ಟೇ ಉತ್ತಮವಾಗಿದೆ. ನೋಡಲು ಸ್ವಲ್ಪ ದಪ್ಪ ಅನಿಸುತ್ತಾರೆ. ಆದರೆ ಯೋ–ಯೋ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕ್ರೀಡಾಂಗಣದಲ್ಲೂ ಅವರು ಕೊಹ್ಲಿಯಷ್ಟೇ ಚುರುಕಾಗಿರುತ್ತಾರೆ. ಆಟದಲ್ಲಿ ಅವರ ಚುರುಕುತನ ಹಾಗೂ ಚಲನಶೀಲತೆ ಉತ್ತಮವಾಗಿದೆ. ಅತ್ಯಂತ ಫಿಟ್ ಇರುವ ಕ್ರಿಕೆಟರ್‌ಗಳಲ್ಲಿ ರೋಹಿತ್ ಕೂಡಾ ಒಬ್ಬರು’ ಎಂದಿದ್ದಾರೆ.
.ಜಮ್ಮು–ಕಾಶ್ಮೀರ | 370ನೇ ವಿಧಿಯಡಿ ಸ್ಥಾನಮಾನ ರದ್ದು: ಓದಲೇಬೇಕಾದ 10 ಸುದ್ದಿಗಳು.ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?.
ಕೊಹ್ಲಿ ಕುರಿತು ಪ್ರತಿಕ್ರಿಯಿಸಿರುವ ಅಂಕಿತ್, ‘ಕೊಹ್ಲಿ ಸೂಪರ್‌ಸ್ಟಾರ್ ಬ್ಯಾಟರ್ ಎನ್ನುವುದಕ್ಕೆ ಎರಡು ಮಾತಿಲ್ಲ. ತಂಡದಲ್ಲಿ ಫಿಟ್‌ನೆಸ್ ಎಂಬುದರ ವ್ಯಾಖ್ಯಾನವನ್ನು ಬದಲಿಸಿದ್ದೇ ಕೊಹ್ಲಿ. ಫಿಟ್‌ನೆಸ್ ವಿಷಯ ಬಂದಾಗ ಮುಂಚೂಣಿಯಲ್ಲಿರುವ ಉದಾಹರಣೆ ಎಂದರೆ ಅದು ಕೊಹ್ಲಿ ಮಾತ್ರ’ ಎಂದಿದ್ದಾರೆ.

‘ತಂಡದ ಮುಂಚೂಣಿಯ ಆಟಗಾರರು ಫಿಟ್ ಇದ್ದಲ್ಲಿ, ಅದು ಇತರರನ್ನು ಉತ್ತೇಜಿಸುತ್ತದೆ. ಅಷ್ಟು ಮಾತ್ರವಲ್ಲ, ಇಡೀ ತಂಡದ ಆತ್ಮವಿಶ್ವಾಸವನ್ನೇ ಹೆಚ್ಚಿಸುತ್ತದೆ. ಅವರು ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ ಎಲ್ಲಾ ಆಟಗಾರರೂ ದೈಹಿಕವಾಗಿ ಸದೃಢರಾಗಿರಬೇಕು ಎಂದೇ ಬಯಸುತ್ತಿದ್ದರು. ಅದರ ಪರಿಣಾಮವೇ ಇಂದು ಭಾರತ ತಂಡದ ಎಲ್ಲಾ ಆಟಗಾರರೂ ಫಿಟ್ ಆಗಿದ್ದಾರೆ’ ಎಂದು ಹೇಳಿದ್ದಾರೆ.

ವಿರಾಟ್ ಅವರನ್ನೇ ತನ್ನ ಸ್ಫೂರ್ತಿ ಎಂದಿರುವ ಸ್ಪೋಟಕ ಬ್ಯಾಟರ್ ಶುಭಮನ್ ಗಿಲ್ ಅವರೂ ಫಿಟ್‌ನೆಟ್‌ಗೆ ಮಾತ್ರವಲ್ಲ, ಬ್ಯಾಟಿಂಗ್‌ನಲ್ಲಿ ಚತುರತೆಗೂ ಆದ್ಯತೆ ನೀಡುವ ಆಟಗಾರ. ಬರಲಿರುವ ವರ್ಷಗಳಲ್ಲಿ ಶುಭಮನ್ ಅವರು ಭಾರತ ತಂಡಕ್ಕೆ ಉತ್ತಮ ಹೆಸರು ತಂದುಕೊಡಲಿದ್ದಾರೆ’ ಎಂದು ಅಂಕಿತ್ ವಿಶ್ವಾಸ ವ್ಯಕ್ತಪಡಿಸಿದರು.
.ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕಾನೂನು ಮಾನ್ಯತೆಯೇ ಇಲ್ಲ ಎಂದ ಪಾಕಿಸ್ತಾನ.ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ 9 ಹೊಸ ವಿಮಾನ ನಿಲ್ದಾಣ: ಸಿಂಧಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.