ಮೌಂಟ್ ಮಾಂಗನೂಯಿ: ಮೆಹಮುದುಲ್ ಹಸನ್ ಜಾಯ್ ಮತ್ತು ನಜಿಮುಲ್ ಹುಸೇನ್ ಶಾಂತೊ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ ಎದುರಿನ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪ್ರತ್ಯುತ್ತರ ನೀಡಿದೆ.

ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 108.1 ಓವರ್‌ಗಳಲ್ಲಿ 328 ರನ್ ಗಳಿಸಿ ಆಲೌಟ್ ಆಯಿತು. ಭಾನುವಾರ ಎರಡನೇ ದಿನದಾಟದ ಕೊನೆಗೆ ಬಾಂಗ್ಲಾ ತಂಡವು 67 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 ರನ್ ಗಳಿಸಿತು. ಮೆಹಮುದುಲ್ ಹಸನ್ (ಬ್ಯಾಟಿಂಗ್ 70; 211ಎ, 4X7) ಮತ್ತು ಮೊಮಿನುಲ್ ಹಕ್ (ಬ್ಯಾಟಿಂಗ್ 8; 27ಎ) ಕ್ರೀಸ್‌ನಲ್ಲಿದ್ದಾರೆ.

ಆತಿಥೇಯ ತಂಡದ ನೀಲ್ ವಾಗ್ನರ್ ದಾಳಿಗೆ ಆರಂಭಿಕ ಬ್ಯಾಟರ್ ಶಾದ್ಮನ್ ಇಸ್ಲಾಂ (22ರನ್) 19ನೇ ಓವರ್‌ನಲ್ಲಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಮೆಹಮುದುಲ್ ಮತ್ತು ನಜೀಮುಲ್ (64; 109ಎ, 4X7, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 104 ರನ್‌ಗಳನ್ನು ಸೇರಿಸಿ ತಂಡದ ಇನಿಂಗ್ಸ್‌ಗೆ ಬಲತುಂಬಿದರು.

ಈ ಜೊತೆಯಾಟವನ್ನೂ ವಾಗ್ನರ್ ಮುರಿದರು. 58ನೇ ಓವರ್‌ನಲ್ಲಿ ವಾಗ್ನರ್ ಅವರು ನಜಿಮುಲ್ ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್: 108.1 ಓವರ್‌ಗಳಲ್ಲಿ 328, ಬಾಂಗ್ಲಾದೇಶ: 67 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 (ಶಾದ್ಮನ್ ಇಸ್ಲಾಂ 22, ಮೆಹಮುದುಲ್ ಹಸನ್ ಜಾಯ್ ಬ್ಯಾಟಿಂಗ್ 70, ನಜಿಮುಲ್ ಹುಸೇನ್ ಶಾಂತೊ 64, ನೀಲ್ ವಾಗ್ನರ್ 27ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.