ದುಬೈ: ಪಾಕಿಸ್ತಾನದ ವಿಕೆಟ್‌ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮತ್ತು ಇಂಗ್ಲೆಂಡ್‌ನ ಟಾಮಿ ಬೆಮೊಂಟ್ ಅವರುಕ್ರಮವಾಗಿ ಐಸಿಸಿ 2021ರ ಟಿ20 ಆಟಗಾರ ಮತ್ತು ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.

2021ರಲ್ಲಿ ಉತ್ತಮ ಲಯದಲ್ಲಿದ್ದ ರಿಜ್ವಾನ್ ಅವರು 29 ಪಂದ್ಯಗಳನ್ನು ಆಡಿ 73.66ರ ಸರಾಸರಿಯಲ್ಲಿ 1,326 ರನ್ ಕಲೆಹಾಕಿದ್ದರು. ಅವರ ಸ್ಟ್ರೈಕ್ ರೇಟ್ 134.89 ಆಗಿತ್ತು.

ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲದೆ ವಿಕೆಟ್ ಕೀಪಿಂಗ್‌ನಲ್ಲೂ ಮಿಂಚಿದ್ದ ರಿಜ್ವಾನ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ವರೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರಲ್ಲಿ ಮೂರನೆಯವರಾಗಿದ್ದರು.

ಟಾಮಿ ಬೆಮೊಂಟ್ ಅವರು ಕಳೆದ ವರ್ಷ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ತಮ್ಮ ದೇಶದ ಪರ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ್ತಿಯಾಗಿದ್ದಾರೆ.

ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯ ಮೂರು ಪಂದ್ಯಗಳಲ್ಲಿ 102 ರನ್ ಗಳಿಸಿ, ಸರಣಿ ಶ್ರೇಷ್ಠ ಗೌರವ ಪಡೆದಿದ್ದರು. ಭಾರತದ ಎದುರಿನ ಸರಣಿಯ ಪಂದ್ಯವೊಂದರಲ್ಲಿ ಸೊಗಸಾದ ಅರ್ಧಶತಕ ದಾಖಿಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.