ಲಂಡನ್: ಭಾರತದ ಬ್ಯಾಂಕುಗಳಿಂದ ಬೃಹತ್ ಮೊತ್ತದ ಸಾಲ ಮಾಡಿ ಪಂಗನಾಮ ಹಾಕಿರುವ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.

ದ ಓವಲ್ನಲ್ಲಿ ನಡೆದ ಪಂದ್ಯವನ್ನು ಅವರು ವೀಕ್ಷಿಸಿದರು. ಅವರು ಕ್ರೀಡಾಂಗಣಕ್ಕೆ ಪ್ರವೇಶಿಸುವ ಮುನ್ನವೇ ಸುದ್ದಿಗಾರರು ಸುತ್ತುವರಿದರು.

‘ನಾನು ಇಲ್ಲಿ ಬಂದಿರುವುದು ಪಂದ್ಯ ನೋಡಲು. ಬೇರೆ ಏನೂ ಕೇಳಬೇಡಿ. ನಾನು ಮಾತನಾಡುವುದಿಲ್ಲ’ ಎಂದು ಮಲ್ಯ ಪ್ರತಿಕ್ರಿಯಿಸಿದರು.

ತಮ್ಮ ಮಗ ಸಿದ್ಧಾರ್ಥ್ ಮಲ್ಯ ಕೂಡ ಈ ಸಂದರ್ಭದಲ್ಲಿದ್ದರು. ಅವರು ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ಗಳಲ್ಲಿ ಚಿತ್ರಗಳನ್ನು ಪ್ರಕಟಿಸಿದ್ದಾರೆ.

‘ಇಲ್ಲಿಯ ಸ್ಪೋರ್ಟ್ಸ್ ಬಾರ್ ಅದ್ಭುತವಾಗಿದೆ. ದಕ್ಷಿಣ ಭಾರತದ ತಿನಿಸುಗಳನ್ನು ಸವಿದೆ. ಬಹಳ ಖುಷಿಪಟ್ಟೆ’ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.