ಅಬುಧಾಬಿ: ಅಮೋಘ ಚಾಲನ ಕೌಶಲ ಮೆರೆದ ಬ್ರಿಟನ್ನ ಲೂಯಿಸ್ ಹ್ಯಾಮಿಲ್ಟನ್ ಅವರು ಅಬುಧಾಬಿ ಗ್ರ್ಯಾನ್ ಪ್ರಿಕ್ಸ್ ಫಾರ್ಮುಲಾ–1 ರೇಸ್ನಲ್ಲಿ ಚಾಂಪಿಯನ್ ಆಗಿದ್ದಾರೆ.

ಯಾಸ್ ಮರಿನಾ ಸರ್ಕ್ಯೂಟ್ನಲ್ಲಿ ಭಾನುವಾರ ನಡೆದ ರೇಸ್ನಲ್ಲಿ ಮರ್ಸಿಡೀಸ್ ತಂಡದ ಹ್ಯಾಮಿಲ್ಟನ್ ಮೋಡಿ ಮಾಡಿದರು. 305 ಕಿ.ಮೀ. ದೂರವನ್ನು 1 ಗಂಟೆ 39 ನಿಮಿಷ 40.382 ಸೆಕೆಂಡುಗಳಲ್ಲಿ ಕ್ರಮಿಸಿದರು.

ಈ ಗೆಲುವಿನೊಂದಿಗೆ ಹ್ಯಾಮಿಲ್ಟನ್, ಒಟ್ಟು ಪಾಯಿಂಟ್ಸ್ ಅನ್ನು 408ಕ್ಕೆ ಹೆಚ್ಚಿಸಿಕೊಂಡು ವಿಶ್ವ ಚಾಂಪಿಯನ್ಷಿಪ್ನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡರು. 33 ವರ್ಷ ವಯಸ್ಸಿನ ಹ್ಯಾಮಿಲ್ಟನ್, ಈ ಋತುವಿನಲ್ಲಿ ಗೆದ್ದ 11ನೇ ಪ್ರಶಸ್ತಿ ಇದಾಗಿದೆ.

ಫೆರಾರಿ ತಂಡದ ಸೆಬಾಸ್ಟಿಯನ್ ವೆಟಲ್ ಎರಡನೇಯವರಾಗಿ ಗುರಿ ಮುಟ್ಟಿದರು. ರೆಡ್ಬುಲ್ ತಂಡದ ಚಾಲಕ, ನೆದರ್ಲೆಂಡ್ಸ್ನ ಮ್ಯಾಕ್ಸ್ ವರ್ಸ್ಟಾಪನ್ ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ಡೇನಿಯಲ್ ರಿಕಿಯಾರ್ಡೊ(ರೆಡ್ಬುಲ್), ವಲಟ್ಟೆರಿ ಬೊಟ್ಟಾಸ್ (ಮರ್ಸಿಡೀಸ್), ಕಾರ್ಲೋಸ್ ಸೇಂಜ್ ಜೂನಿಯರ್ (ರೆನಾಲ್ಟ್), ಚಾರ್ಲಸ್ ಲೆಕ್ಲರ್ಕ್ (ಸಬರ್), ಸರ್ಜಿಯೊ ಪೆರೆಜ್ (ಫೋರ್ಸ್ ಇಂಡಿಯಾ), ರೋಮೆನ್ ಗ್ರೋಸ್ಜೀನ್ (ಹಾಸ್) ಮತ್ತು ಕೆವಿನ್ ಮ್ಯಾಗ್ನಸನ್ (ಹಾಸ್) ಅವರು ಕ್ರಮವಾಗಿ ನಾಲ್ಕರಿಂದ 10ನೇ ಸ್ಥಾನಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.