ಗ್ವಾಲಿಯರ್: ಕರ್ನಾಟಕ ತಂಡ, ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ‘ಎ’ ಡಿವಿಷನ್‌ನ ತನ್ನ ಎರಡನೇ ಪಂದ್ಯದಲ್ಲಿ ಶುಕ್ರವಾರ ಕೆನರಾ ಬ್ಯಾಂಕ್ ಎದುರು ಗೆದ್ದಿತು.

‘ಡಿ’ ಗುಂಪಿನಲ್ಲಿರುವ ಕರ್ನಾಟಕ ಗುರುವಾರ ಸೋತಿತ್ತು. ಕರ್ನಾಟಕದವರೇ ಹೆಚ್ಚು ಇರುವ ಕೆನರಾ ಬ್ಯಾಂಕ್ ತಂಡಕ್ಕೆ ಎಸ್.ವಿ.ಸುನಿಲ್ ಬಳಗ ಪ್ರಬಲ ಪೈಪೋಟಿ ನೀಡಿತು.

ಡಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಏರ್ ಇಂಡಿಯಾ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ 12–1ರಿಂದ ನಾಮಧಾರಿ ಇಲೆವನ್ ತಂಡವನ್ನು ಮಣಿಸಿತು.

ಎ ಗುಂಪಿನ ಪಂದ್ಯದಲ್ಲಿ ಡ್ರ್ಯಾಗ್ ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ ಅವರ ಹ್ಯಾಟ್ರಿಕ್ ಬಲದಿಂದ ಹಾಲಿ ಚಾಂಪಿಯನ್, ಹಾಕಿ ಪಂಜಾಬ್ 6–0ಯಿಂದ ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟೀಸ್ ಎದುರು ಗೆದ್ದಿತು. ಮುಂಬೈ ಹಾಕಿ ಅಸೋಸಿಯೇಷನ್, ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಎದುರು 2–2ರ ಡ್ರಾ ಮಾಡಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.