ನವದೆಹಲಿ: ಮಧ್ಯ ಅಂತರದ ಓಟಗಾರ್ತಿ ಶಾಲು ಚೌಧರಿ ಅವರ ಮೇಲೆ ವಿಧಿಸಲಾಗಿದ್ದ ನಾಲ್ಕು ವರ್ಷಗಳ ನಿಷೇಧವನ್ನು ರದ್ದುಪಡಿಸಲಾಗಿದೆ.

ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿದ್ದ ಆರೋಪದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಅವರು ಪರೀಕ್ಷೆಗೆ ನೀಡಿದ್ದ ಮೂತ್ರದ ಮಾದರಿಯಲ್ಲಿ ಕಲಬೆರಕೆ ಮಾಡಲಾಗಿದೆ. ಅದರಿಂದಾಗಿ ಹೊರಹೊಮ್ಮಿರುವ ಫಲಿತಾಂಶದ ನಿಖರತೆ ಅನುಮಾನಾಸ್ಪದವಾಗಿದೆ ಎಂದು ಡಿ.ಎನ್.ಎ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಇದರಿಂದಾಗಿ ತಮ್ಮ ಮೇಲಿನ ಆರೋಪ ಕೈಬಿಡಬೇಕೆಂದು ಶಾಲು ಚೌಧರಿಯವರು ಮಾಡಿದ್ದ ಮೇಲ್ಮನವಿ ಸಲ್ಲಿಸಿದ್ದರು ನಾಡಾ ಸ್ಪಂದಿಸಿದೆ.

30 ವರ್ಷದ ಶಾಲು ಅವರು ಸ್ಟಿಮ್ಯುಲೆಂಟ್ ಮತ್ತು ಪೆಪ್ಟೈಡ್ ಹಾರ್ಮೋನ್ ಮದ್ದು ಸೇವನೆ ಮಾಡಿದ್ದ ಆರೋಪದಲ್ಲಿ ಎದುರಿಸಿದ್ದರು.

ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಶಾಲು ಸ್ಪರ್ಧಿಸಿದ್ದರು. ಅವರ ಡಿಎನ್‌ಎ ಪರೀಕ್ಷೆಯನ್ನು ಲಂಡನ್ ಕಿಂಗ್ಸ್ ಕಾಲೇಜಿನ ಫೊರೆನ್ಸಿಕ್ ವಿಭಾಗವು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.