ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21 ವರ್ಷದ ಅಮನ್ ಅವರು ಮಾಜಿ ವಿಶ್ವ ಚಾಂಪಿಯನ್ ಅಲ್ಬೇನಿಯಾದ ಜೆಲಿಮ್‌ಖಾನ್ ಅಬಕರೊವ್ ವಿರುದ್ಧ 12-0 ಅಂತರದ ಗೆಲುವು ಗಳಿಸಿದ್ದಾರೆ.

ಸೆಮಿಫೈನಲ್ ಮುಖಾಮುಖಿ ಇಂದು ರಾತ್ರಿ 9.45ಕ್ಕೆ (ಭಾರತೀಯ ಕಾಲಮಾನ) ನಡೆಯಲಿದ್ದು, ಅಗ್ರ ಶ್ರೇಯಾಂಕಿತ ಜಪಾನ್‌ನ ರೀ ಹಿಗುಚಿ ಸವಾಲನ್ನು ಎದುರಿಸಲಿದ್ದಾರೆ.

ಈ ಮೊದಲು, ಮೊದಲ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಅಮನ್ ಅವರು ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಗೆಲುವು ದಾಖಲಿಸಿದ್ದರು.

ಅಮನ್ ಸೆಹ್ರಾವತ್, ಪುರುಷರ ಕುಸ್ತಿ ವಿಭಾಗದಲ್ಲಿ ಭಾಗವಹಿಸುತ್ತಿರುವ ಭಾರತದ ಏಕಮಾತ್ರ ಸ್ಪರ್ಧಿ ಆಗಿದ್ದಾರೆ. ಈಗ ಇನ್ನೊಂದು ಪಂದ್ಯ ಗೆದ್ದರೆ ಫೈನಲ್‌ಗೆ ಪ್ರವೇಶಿಸುವುದರೊಂದಿಗೆ ಪದಕ ಖಾತ್ರಿಪಡಿಸಲಿದ್ದಾರೆ.
.Vinesh Phogat Retires: ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್.ತೀವ್ರ ಆಘಾತವಾಗಿದೆ; ವಿನೇಶಾಗೆ ವೈದ್ಯಕೀಯ, ಭಾವನಾತ್ಮಕ ಬೆಂಬಲ: ಪಿ.ಟಿ.ಉಷಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.