ಬೆಂಗಳೂರು: ಮೂರನೇ ಶ್ರೇಯಾಂಕದ ಋತುಜಾ ಭೋಸಲೆ ಸೇರಿದಂತೆ ಭಾರತದ ಮೂವರು ಆಟ ಗಾರ್ತಿಯರು ಯಶಸ್ಸಿನ ಓಟ ಮುಂದುವರಿಸಿ ಬೌರಿಂಗ್ ಇನ್ಸ್ಟಿಟ್ಯೂಟ್ ಐಟಿಎಫ್ ಮಹಿಳಾ ವಿಶ್ವ ಟೆನಿಸ್ ಟೂರ್ನ ಸಿಂಗಲ್ಸ್ ಸೆಮಿಫೈನಲ್ಗೆ ಸ್ಥಾನ ಕಾದಿರಿಸಿದರು.

ಕಣದಲ್ಲಿ ಉಳಿದಿರುವ ಅತಿ ಹೆಚ್ಚಿನ ಶ್ರೇಯಾಂಕದ ಭಾರತೀಯ ಆಟಗಾರ್ತಿಯಾಗಿರುವ ಋತುಜಾ ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 7–6 (4), 1–6, 6–1 ರಿಂದ ತಮ್ಮ ಡಬಲ್ಸ್ ಜೊತೆಗಾರ್ತಿ ಹಾಗೂ ಐದನೇ ಶ್ರೇಯಾಂಕದ ಝಿಬೆಕ್ ಕುಲಂಬ ಯೇವಾ (ಕಜಕಸ್ತಾನ) ಅವರನ್ನು ಹಿಮ್ಮೆಟ್ಟಿಸಿದರು.

ವೈರಾಣು ಜ್ವರದಿಂದ ಬಳಲುತ್ತಿದ್ದರೂ, ಗಟ್ಟಿ ಮನೋಬಲದ ಪರಿಣಾಮ ಪಂದ್ಯ ಗೆಲ್ಲಲು ಸಾಧ್ಯವಾಯಿತು ಎಂದು ಮಹಾರಾಷ್ಟ್ರದ 27 ವರ್ಷದ ಆಟಗಾರ್ತಿ ಋತುಜಾ ಹೇಳಿದರು.

ಗುರುವಾರ ಅಗ್ರಶ್ರೆಯಾಂಕದ ಉಜ್ಬೇಕ್ ಆಟಗಾರ್ತಿ ನಿಗಿನಾ ಅಬ್ದುರೈಮೋವಾ ಅವರಿಗೆ ಆಘಾತ ನೀಡಿದ್ದ ಉತ್ಸಾಹದಲ್ಲಿರುವ ಗುಜರಾತ್ನ ಶ್ರೇಯಾಂಕರಹಿತ ಆಟಗಾರ್ತಿ ಝೀಲ್ ದೇಸಾಯಿ ಅವರ ಗೆಲುವಿನ ಓಟ ಮುಂದುವರಿಯಿತು. ಅವರು ಗೆಲುವಿಗೆ ಮೊದಲು ಒಂದು ಸೆಟ್ ಕಳೆದುಕೊಂಡರೂ ನಿರ್ಣಾಯಕ ಸಂದರ್ಭದಲ್ಲಿ ಚೇತರಿಸಿಕೊಂಡು 6–3, 6–7 (2), 6–4 ರಿಂದ ಜರ್ಮನಿಯ ಅಂಟೊನಿಯೊ ಶ್ಮಿಟ್ ಅವರನ್ನು ಮಣಿಸಿದರು.

ಎರಡನೇ ಶ್ರೇಯಾಂಕದ ಆಟಗಾರ್ತಿ ಲನ್ಲಾನಾ ತರಾರುದೀ ಅವರು ಹೆಚ್ಚಿನ ಪ್ರಯಾಸವಿಲ್ಲದೇ ಏಳನೇ ಶ್ರೇಯಾಂಕದ ಡಿಲೆಟ್ಟಾ ಚೆರುಬಿನಿ (ಇಟಲಿ) ಅವರನ್ನು 6–1, 6–2 ರಿಂದ ಸದೆಬಡಿದರು. ಉತ್ತಮ ಲಯದಲ್ಲಿರುವ ಭಾರತದ ಆಟಗಾರ್ತಿ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಅವರು 6–1, 6–4 ರಿಂದ ಸ್ವದೇಶದ ವೈಷ್ಣವಿ ಅಡ್ಕರ್ ಅವರನ್ನು ಮಣಿಸಲು ತೆಗೆದುಕೊಂಡಿದ್ದು 76 ನಿಮಿಷಗಳನ್ನಷ್ಟೇ.

ಐಟಿಎಫ್ ಕ್ರಮಾಂಕ ಪಟ್ಟಿಯಲ್ಲಿ 938ನೇ ಸ್ಥಾನ ದಲ್ಲಿರುವ ಝೀಲ್ ಈ ವರ್ಷ ಎರಡು ಐಟಿಎಫ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದುಕೊಂಡು ಉತ್ತಮ ಲಯದಲ್ಲಿದ್ದಾರೆ.

ಡಬಲ್ಸ್ ಸೆಮಿಫೈನಲ್ಸ್:

ಡಿಲೆಟ್ಟಾ ಚೆರುಬಿನಿ (ಇಟಲಿ) ಮತ್ತು ಅಂಟೊನಿಯಾ ಶ್ಮಿಟ್ (ಜರ್ಮನಿ) ಅವರಿಗೆ ಮೂರನೇ ಶ್ರೇಯಾಂಕದ ರಶ್ಮಿಕಾ ಭಮಿಡಿಪಾಟಿ/ ವೈದೇಹಿ ಚೌಧರಿ (ಭಾರತ) ವಿರುದ್ಧ 0–6, 6–0, 10–3ರಲ್ಲಿ ಜಯ. ಅಗ್ರ ಶ್ರೇಯಾಂಕದ ಋತುಜಾ ಭೋಸಲೆ/ ಝಿಬೆಕ್ ಕುಲಂಬಯೇವಾ (ಕಜಕಸ್ತಾನ) ಮತ್ತು ಪುನ್ನಿನ್ ಕೊವಾಪಿಟುಕ್ಟೆಡ್ (ಥಾಯ್ಲೆಂಡ್)/ ಅನ್ನಾ ಉರೆಕೆ (ರಷ್ಯಾ) ನಡುವಣ ಪಂದ್ಯ 2–6, 0–0 ಇದ್ದಾಗ ಮಂದ ಬೆಳಕಿನಿಂದಾಗಿ ಅಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.