ನವದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಪರಿಕರಗಳನ್ನು ತಯಾರಿಸುವ ಭಾರತೀಯ ಕಂಪನಿ ಅಂಬ್ರೇನ್ ಹೊಸ ಏರೋಸಿಂಕ್ ವೈರ್ಲೆಸ್ ಚಾರ್ಜರ್ ಸ್ಟ್ಯಾಂಡ್ (AeroSync Duo MagSafe 2-in-1 Wireless Charger Stand) ಅನ್ನು ಬಿಡುಗಡೆ ಮಾಡಿದೆ.

ಡ್ಯುಯಲ್ ಮ್ಯಾಗ್ನಟಿಕ್ 2-ಇನ್-1 ವೈರ್ಲೆಸ್ ಚಾರ್ಜರ್ ಸ್ಟ್ಯಾಂಡ್ 20 ವ್ಯಾಟ್ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಇದರ ಮೂಲಕ ಆ್ಯಪಲ್ ಏರ್ಪೋಡ್ ಹಾಗೂ ಐಫೋನ್ ಅನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದು. ಈ ವೈರ್ಲೆಸ್ ಚಾರ್ಜರ್ ಅಮೆಜಾನ್ ಮತ್ತು ಅಂಬ್ರೇನ್ ವೆಬ್ಸೈಟಿನಲ್ಲಿ ₹2999ಕ್ಕೆ ಲಭ್ಯವಿದೆ.

ಈ ಪೋರ್ಟಬಲ್ ವೈರ್ಲೆಸ್ ಚಾರ್ಜರ್ ಹಗುರವಾಗಿದ್ದು ಆರ್ಕಷಕ ವಿನ್ಯಾಸ ಹೊಂದಿದೆ. ಕಂಪನಿಯ ಬೂಸ್ಟೆಡ್ ಸ್ಪೀಡ್ ಟಿಎಂ ತಂತ್ರಜ್ಞಾನದೊಂದಿಗೆ ಇದನ್ನು ತಯಾರಿಸಲಾಗಿದೆ.

ಎಲ್ಇಡಿ ಲೈಟ್ ಸೂಚಕಗಳಿರುವ ಈ ಜಾರ್ಜರ್ ಮೂಲಕ ಮೊಬೈಲ್, ಇಯರ್ ಬಡ್ ಸೇರಿದಂತೆ ವಿವಿಧ ಗ್ಯಾಜೆಟ್ಗಳನ್ನು ಜಾರ್ಜ್ ಮಾಡಬಹುದು.

ಸೇಫ್ ಚಾರ್ಜ್ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದ್ದು ಓವರ್ ವೋಲ್ಟೇಜ್, ಓವರ್ ಹೀಟಿಂಗ್ ಮತ್ತು ಶಾರ್ಟ್-ಸರ್ಕ್ಯೂಟ್ ವಿರುದ್ಧ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಸುಧಾರಿತ ತಂತ್ರಜ್ಞಾನ ಸಂಯೋಜಿಸುವ ಮೂಲಕ ಬಳಕೆದಾರರಿಗೆ ಅನುಕೂಲತೆಯನ್ನು ಹೆಚ್ಚಿಸುವುದೇ ನಮ್ಮ ಗುರಿಯಾಗಿದೆ. ಚಾರ್ಜಿಂಗ್ ಸಮಸ್ಯೆಗಳಿಗೆ ಈ ವೈರ್ಲೆಸ್ ಚಾರ್ಜರ್ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಅಂಬ್ರೇನ್ ಇಂಡಿಯಾದ ಸಂಸ್ಥಾಪಕ ಅಶೋಕ್ ರಾಜ್ಪಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.