ಕ್ಯಾಲಿಫೋರ್ನಿಯ: ಐಫೋನ್, ಐಪ್ಯಾಡ್ ಸಹಿತ ತನ್ನ ವಿಭಿನ್ನ ಸಾಧನಗಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯಗಳು ಮತ್ತು ಸಾಫ್ಟ್‌ವೇರ್ ವರ್ಧನೆಗಳನ್ನು ಸೋಮವಾರ ಆ್ಯಪಲ್ ಘೋಷಿಸಿದೆ.

ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಾದ ಮೈಕ್ರೋಸಾಫ್ಟ್, ಆಲ್ಫಬೆಟ್ ಮುಂತಾದವು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿರುವುದರಿಂದ ಆ್ಯಪಲ್ ಕೂಡ ತನ್ನ ಹೂಡಿಕೆದಾರರಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಜಾಗತಿಕ ಡೆವಲಪರ್ಸ್ ಸಮಾವೇಶ (WWDC 2004)ದಲ್ಲಿ ಈ ಬಹುನಿರೀಕ್ಷಿತ ಘೋಷಣೆಗಳನ್ನು ಮಾಡಿದೆ.

ಪ್ರಮುಖ ಘೋಷಣೆಗಳು ಹೀಗಿವೆ:

ಆ್ಯಪಲ್ ಇಂಟೆಲಿಜೆನ್ಸ್: ಐಫೋನ್, ಮ್ಯಾಕ್ ಮತ್ತು ಐಪ್ಯಾಡ್‌ಗಳ ಇತ್ತೀಚಿನ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಜನರೇಟಿವ್ ಎಐ ವೈಶಿಷ್ಟ್ಯಗಳುಳ್ಳ ಆ್ಯಪಲ್ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.

ಚಾಟ್ ಜಿಪಿಟಿ ಎಂಬ ಈ ಕಾಲದ ಪ್ರಸಿದ್ಧ ತಂತ್ರಾಂಶವನ್ನು ಅಳವಡಿಸಿಕೊಂಡಿರುವ ಆ್ಯಪಲ್, ಚಿತ್ರಗಳು ಹಾಗೂ ಪಠ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡು, ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಮತ್ತು ಕೆಲವೊಂದು ಕಾರ್ಯಗಳನ್ನು ಮಾಡುವಲ್ಲಿ ನೆರವು ನೀಡುತ್ತದೆ. ಆ್ಯಪಲ್‌ನ ಧ್ವನಿ ಸಹಾಯಕ ತಂತ್ರಜ್ಞಾನವಾಗಿರುವ 'ಸಿರಿ' ಕೂಡ ಈಗಿನ ಜನರೇಟಿವ್ ತಂತ್ರಜ್ಞಾನಕ್ಕೆ ಪೂರಕವಾಗಿ, ತಮ್ಮದೇ ಆ್ಯಪ್‌ಗಳಷ್ಟೇ ಅಲ್ಲದೆ, ವೈವಿಧ್ಯಮಯವಾದ ಥರ್ಡ್ ಪಾರ್ಟಿ ಆ್ಯಪ್‌ಗಳನ್ನೂ ಬೆಂಬಲಿಸಲಿದೆ.

ಬಹುತೇಕ ಎಐ ಪ್ರಕ್ರಿಯೆಗಳನ್ನು ಆ್ಯಪಲ್ ಸಾಧನಗಳಲ್ಲೇ ನಿಭಾಯಿಸಬಹುದು. ಹೆಚ್ಚು ಸಂಕೀರ್ಣವಾದ ಕಾರ್ಯಗಳನ್ನು ಆ್ಯಪಲ್‌ನ ಸರ್ವರ್‌ಗಳ ಮೂಲಕ, ಪ್ರೈವೇಟ್ ಕ್ಲೌಡ್ ಕಂಪ್ಯೂಟ್ ಎಂಬ ವಿನೂತನ ವ್ಯವಸ್ಥೆಯ ಮೂಲಕ ಮಾಡಬಹುದಾಗಿದೆ.

ಆ್ಯಪಲ್ ಇಂಟೆಲಿಜೆನ್ಸ್ ಸದ್ಯಕ್ಕೆ ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್‌ನಲ್ಲಿ ಹಾಗೂ ಎಂ1 ಮತ್ತು ನಂತರದ ಚಿಪ್ ಬಳಸುವ ಐಪ್ಯಾಡ್ ಮತ್ತು ಮ್ಯಾಕ್‌ಗಳಲ್ಲಿ ಲಭ್ಯವಾಗಲಿದೆ.

ಕಾರ್ಯಾಚರಣಾ ವ್ಯವಸ್ಥೆಯ 18ನೇ ಆವೃತ್ತಿಯನ್ನೂ ಆ್ಯಪಲ್ ಘೋಷಿಸಿದ್ದು, ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಐಒಎಸ್ 18 ಮೂಲಕ ಐಫೋನ್‌ನ ಹೋಂ ಸ್ಕ್ರೀನ್‌ನ ಯಾವುದೇ ಖಾಲಿ ಸ್ಥಳದಲ್ಲಿ ಆ್ಯಪ್‌ಗಳನ್ನು ಮತ್ತು ವಿಜೆಟ್‌ಗಳನ್ನು ನಮಗೆ ಬೇಕಾದಂತೆ ಇರಿಸಬಹುದು, ಲಾಕ್ ಸ್ಕ್ರೀನ್ ಹಾಗೂ ಕಂಟ್ರೋಲ್ ಸೆಂಟರ್ ಅನ್ನು ಕಸ್ಟಮೈಸ್ (ಬೇಕಾದಂತೆ ಹೊಂದಿಸುವುದು) ಮಾಡಬಹುದು.

ಮ್ಯಾಕ್ ಕಂಪ್ಯೂಟರ್‌ಗಳಿಗೆ ಮ್ಯಾಕ್ಒಎಸ್ ಸಿಕ್ವೋಯಿಯಾ (Sequoia) ಘೋಷಿಸಲಾಗಿದ್ದು, ಫೋನ್‌ನ ಸ್ಕ್ರೀನ್ ಅನ್ನು ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ವೀಕ್ಷಿಸಬಹುದು ಮತ್ತು ನಿಭಾಯಿಸಬಹುದು.

ಐಪ್ಯಾಡ್ ಒಎಸ್ 18ರ ಮೂಲಕ, ಆ್ಯಪಲ್‌ನ ಟ್ಯಾಬ್ಲೆಟ್‌ಗೆ ಕೊನೆಗೂ ಕ್ಯಾಲ್ಕುಲೇಟರ್ ಆ್ಯಪ್ ಮತ್ತು ಇತರ ವೈಶಿಷ್ಟ್ಯಗಳನ್ನು ಒದಗಿಸಲಾಗುತ್ತದೆ. ಅದರ ಅನುಸಾರ, ಮ್ಯಾಥ್ ನೋಟ್ಸ್ ಕ್ಯಾಲ್ಕುಲೇಟರ್‌ನಲ್ಲಿ ಬಳಕೆದಾರರು ಗಣಿತದ ಸೂತ್ರಗಳನ್ನು ಟೈಪ್ ಮಾಡಬಹುದು ಅಥವಾ ಆ್ಯಪಲ್ ಪೆನ್ ಮೂಲಕ ಬರೆಯಬಹುದು ಮತ್ತು ತಕ್ಷಣ ಗಣಿತದ ಲೆಕ್ಕಗಳಿಗೆ ಉತ್ತರ ಪಡೆಯಬಹುದು.

ಇದಲ್ಲದೆ ಆ್ಯಪಲ್ ವಾಚ್‌ಗಳಿಗಾಗಿರುವ ವಾಚ್ಒಎಸ್ 11ರಲ್ಲಿ ಕೂಡ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದ್ದು, ಆರೋಗ್ಯದ ಬಗೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಶನ್ ಒಎಸ್ 2 ಮೂಲಕ ಸನ್ನೆಯ ಮೂಲಕ ನಿಯಂತ್ರಣಗಳನ್ನು ಸುಧಾರಿಸಲಾಗಿದೆ.

ಅದೇ ರೀತಿ, ಆ್ಯಪಲ್‌ನ ಪ್ರಮುಖ ಅಪ್ಲಿಕೇಶನ್‌ಗಳಿಗೂ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಮೆಸೇಜಸ್ ಆ್ಯಪ್ ಮೂಲಕ ಸೆಲ್ಯುಲಾರ್ ಅಥವಾ ವೈಫೈ ಸಂಪರ್ಕವಿಲ್ಲದಿದ್ದರೆ ಉಪಗ್ರಹದ ಮೂಲಕ ಸಂದೇಶ ರವಾನಿಸುವ ವ್ಯವಸ್ಥೆ ಇರುತ್ತದೆ.

ಮೇಲ್ (mail) ಆ್ಯಪ್ ಇನ್ನು ಮುಂದೆ ಇಮೇಲ್‌ಗಳನ್ನು ವೈಯಕ್ತಿಕ, ಮಾರುಕಟ್ಟೆ ಆಧಾರಿತ ಮತ್ತು ವಹಿವಾಟು ಆಧಾರಿತ ಎಂದು ವಿಂಗಡಿಸಲಿದೆ.

ಸಫಾರಿ ಬ್ರೌಸರ್ ಆ್ಯಪ್‌ಗೂ ಹೈಲೈಟ್ ಎಂಬ ವೈಶಿಷ್ಟ್ಯ ಅಳವಡಿಸಲಾಗಿದ್ದು, ನಿರ್ದಿಷ್ಟ ವೆಬ್ ಪುಟದ ಪ್ರಮುಖ ಮಾಹಿತಿಯನ್ನು ಎತ್ತಿ ತೋರಿಸುತ್ತದೆ ಮತ್ತು ಆಯಾ ಸ್ಥಳಕ್ಕೆ ಸಂಬಂಧಿಸಿದ ರೆಸ್ಟೋರೆಂಟ್ ಅಥವಾ ಸಂಬಂಧಿತ ಕಲಾವಿದರ ಹಾಡಿನ ಲಿಂಕನ್ನೂ ತೋರಿಸಬಹುದಾಗಿದೆ.

ನೋಟ್ಸ್ ಮತ್ತು ಫೋನ್ ಆ್ಯಪ್ ಮೂಲಕ ಬಳಕೆದಾರರು ಆಡಿಯೋವನ್ನು ರೆಕಾರ್ಡ್ ಮಾಡಬಹುದು, ಧ್ವನಿಯನ್ನು ಪಠ್ಯಕ್ಕೆ ಪರಿವರ್ತಿಸಬಹುದು ಮತ್ತು ಸಾರಾಂಶ ಪಡೆಯಬಹುದು. ಇದಲ್ಲದೆ, ಹೊಸದಾಗಿ ಚಿತ್ರ ರಚಿಸುವ 'ಇಮೇಜ್ ಪ್ಲೇಗ್ರೌಂಡ್' ಎಂಬ ಟೂಲ್ ಅನ್ನು ಘೋಷಿಸಲಾಗಿದೆ.

ಫೋಟೊಸ್ ಆ್ಯಪ್‌ನಲ್ಲಿ ಹುಡುಕಾಟ (ಸರ್ಚ್) ವ್ಯವಸ್ಥೆ ಸುಧಾರಿಸಲಾಗಿದೆ ಮತ್ತು ವಿಡಿಯೊ ಕ್ಲಿಪ್‌ಗಳ ನಿರ್ದಿಷ್ಟ ಕ್ಷಣಗಳನ್ನು ಹುಡುಕುವ ಸಾಮರ್ಥ್ಯವನ್ನೂ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.