ಕಳೆದ ತಿಂಗಳು ಯುಪಿಐ ವಹಿವಾಟಿನಲ್ಲಿ ಎಷ್ಟು ಮೋಸದ ವಹಿವಾಟು ನಡೆದಿದೆ – ಎಂಬ ಅಂಕಿ–ಅಂಶವನ್ನು ಆರ್ಬಿಐ ಬಿಡುಗಡೆ ಮಾಡಿದಾಗ, ಯುಪಿಐನಲ್ಲಿ ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ – ಎಂಬುದು ಮತ್ತೊಮ್ಮೆ ಬಹಿರಂಗವಾಗಿತ್ತು. ಇದು, ನಮ್ಮ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಲ್ಲಿ ಏನೋ ಕೊರತೆಯಿದೆ ಎಂಬುದನ್ನು ಸೂಚಿಸುತ್ತದೆಯೇನೋ ಹೌದು. ಆದರೆ, ಇದೇ ಸಮಯದಲ್ಲಿ ಡಿಜಿಟಲ್ ಪೇಮೆಂಟ್ ಮೋಸದ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಈ ಸಮಸ್ಯೆ ಬರಿ ಭಾರತದ್ದಷ್ಟೇ ಅಲ್ಲ, ಇಡೀ ವಿಶ್ವ ಈ ಡಿಜಿಟಲ್ ಪೇಮೆಂಟ್ ಮೋಸವನ್ನು ತಡೆಯುವುದಕ್ಕೆ ಹೋರಾಡುತ್ತಿದೆ.

ದುರಾದೃಷ್ಟವಶಾತ್, ಯಾವ ದೇಶದಲ್ಲೂ ಇದಕ್ಕೊಂದು ಚಳವಳಿಯ ರೂಪವೋ, ಸರ್ಕಾರೇತರ ಸಂಸ್ಥೆಗಳ ಬೆಂಬಲವೋ, ಯಾವುದೂ ಸಿಕ್ಕಿಲ್ಲ. ಜನರೇ ಸ್ವಯಂಪ್ರೇರಿತವಾಗಿ, ನಿಯಂತ್ರಕ ಸಂಸ್ಥೆಗಳ ಕ್ರಮಗಳಿಂದಾಗಿ ಅಲ್ಪ ಸ್ವಲ್ಪ ಮಟ್ಟಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

ಭಾರತದಲ್ಲಿ, 2023ರಲ್ಲಿ ಒಟ್ಟು 95 ಸಾವಿರ ಡಿಜಿಟಲ್ ಮೋಸದ ಪ್ರಕರಣಗಳು ವರದಿಯಾಗಿವೆ. ಅದಕ್ಕೂ ಹಿಂದಿನ ವರ್ಷ ಸುಮಾರು 84 ಸಾವಿರ ಮೋಸದ ಪ್ರಕರಣಗಳು ವರದಿಯಾಗಿದ್ದವು. ಹಾಗೆಂದ ಮಾತ್ರಕ್ಕೆ, ಒಟ್ಟು 865 ಕೋಟಿ ವಹಿವಾಟುಗಳ ಪೈಕಿ ಇದು ಸುಮಾರು ಶೇ 10ರಷ್ಟು. ಸುಮಾರು ಇದೇ ಶೇಕಡಾವಾರು ಮೋಸದ ವಹಿವಾಟುಗಳು ಸಿಂಗಾಪುರದಲ್ಲೂ ನಡೆದಿವೆ. ಹಣಕಾಸುವ್ಯವಸ್ಥೆ ವಿಷಯದಲ್ಲಿ ಸಿಂಗಾಪುರದ ವ್ಯವಸ್ಥೆ ಅತ್ಯಂತ ಕಟ್ಟುನಿಟ್ಟು ಎಂದೇ ಹೇಳಲಾಗುತ್ತದೆ. ಆದರೆ, ಅಲ್ಲೂ ಮೋಸಗಾರರಿಗೇನೂ ಅಂಜಿಕೆ ಇಲ್ಲ. 2022ಕ್ಕೆ ಹೋಲಿಸಿದರೆ 2023ರಲ್ಲಿ ಮೋಸದ ಪ್ರಕರಣಗಳಲ್ಲಿ ಶೇ. 70ರಷ್ಟು ಹೆಚ್ಚಳವಾಗಿದೆ. ಮುಂದುವರಿದ ದೇಶಗಳಾದ ಅಮೆರಿಕ, ಯುರೋಪ್ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ.

ಇದಕ್ಕೆ ಎಲ್ಲ ದೇಶಗಳೂ ಪರಿಹಾರ ಹುಡುಕುತ್ತಿವೆ. ಆದರೆ, ಯಾವ ದೇಶದಲ್ಲೂ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿದ್ಧ ಪರಿಹಾರವಿಲ್ಲ. ಅಷ್ಟಕ್ಕೂ, ಈ ಯಾವುದೇ ಮೋಸದ ಪ್ರಕರಣಗಳು ಈ ವ್ಯವಸ್ಥೆಯನ್ನೋ ತಂತ್ರಜ್ಞಾನವನ್ನೋ ದುರ್ಬಳಕೆ ಮಾಡಿಕೊಂಡಿದ್ದಲ್ಲ. ಬದಲಿಗೆ, ಈ ತಂತ್ರಜ್ಞಾನದ ಬಗ್ಗೆ ಜನರಲ್ಲಿರುವ ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡಿದ್ದಷ್ಟೇ! ಯುಪಿಐ ವಿಷಯದಲ್ಲಂತೂ ಮೋಸದ ಥರಹೇವಾರಿ ಪ್ರಕರಣಗಳು ನಡೆದಿವೆ. ನಾವೀಗ ವ್ಯಾಪಕವಾಗಿ ಬಳಸುತ್ತಿರುವ ‘ಕ್ಯೂಆರ್ ಕೋಡ್’ ಕೂಡ ಆರಂಭದ ದಿನಗಳಲ್ಲಿ ಮೋಸದ ಪ್ರಕರಣಗಳಿಗೆ ಸಿಕ್ಕಿ ಹೆಸರು ಕೆಡಿಸಿಕೊಂಡಿತ್ತು. ಆದರೆ, ಅಂತಹ ಸಮಸ್ಯೆಗಿಂತ ಅದರ ಅನುಕೂಲವೇ ಹೆಚ್ಚಿದ್ದುದರಿಂದ ಜನರು ಬಳಸುವುದನ್ನು ಮುಂದುವರಿಸಿದರು.

ಎಲ್ಲ ದೇಶಗಳಲ್ಲೂ ಇದನ್ನು ತಡೆಯುವುದು ಹೇಗೆ ಎಂಬ ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ಇಂಟರ್ಪೋಲ್ ಕೂಡ ಈ ಸಂಬಂಧ ಮಾಹಿತಿ ಹಾಗೂ ತಿಳಿವಳಿಕೆಯ ವರದಿಯನ್ನು ಬಿಡುಗಡೆ ಮಾಡಿತ್ತು. ಆರ್ಬಿಐ ಅಂತೂ ಕಾಲಕಾಲಕ್ಕೆ ಯುಪಿಐ ಹಾಗೂ ಕಾರ್ಡ್ ಟ್ರಾನ್ಸಾಕ್ಷನ್ ಮಾಡುವಾಗ ಯಾವ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿ ಪ್ರಕಟಿಸುತ್ತಲೇ ಇರುತ್ತವೆ. ಅಲ್ಲದೆ, ವಹಿವಾಟು ನಡೆಯುವ ಕಾಲಾವಧಿಯ ಹೆಚ್ಚಳ ಮಾಡುವುದಕ್ಕೂ ಎನ್ಪಿಸಿಐ ಚರ್ಚೆ ನಡೆಸಿದ್ದು, ಅದು ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ. ಇದರಿಂದ, ಹಣ ಕಡಿತವಾದ ನಂತರ ಅದರಲ್ಲಿ ಮೋಸವಾಗಿದ್ದು ಗೊತ್ತಾದರೆ, ತಕ್ಷಣ ಕ್ರಮ ತೆಗೆದುಕೊಂಡು ಅದನ್ನು ಸರಿಪಡಿಸುವುದಕ್ಕೆ ಜನರ ಬಳಿ ಸಮಯ ಇರುತ್ತದೆ.

ಜೊತೆಗೆ, ಜನಸಾಮಾನ್ಯರಿಗೆ ಎಸ್ಎಂಎಸ್ ಮೂಲಕವೂ ಆರ್ಬಿಐ ಮಾಹಿತಿ ಕಳುಹಿಸುತ್ತಿರುತ್ತದೆ. ಈ ಮೋಸ ತಡೆಯುವ ಏಕೈಕ ಉಪಾಯವೆಂದರೆ, ಜನರೇ ಈ ಬಗ್ಗೆ ಜಾಗೃತರಾಗುವುದು!

ಈ ರೀತಿ ಹಠಾತ್ತನೆ ಮೋಸದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದಕ್ಕೆ ಮೂಲಕಾರಣವೇ ಡಿಜಿಟಲ್ ವಹಿವಾಟಿನಲ್ಲಿ ಆಗುತ್ತಿರುವ ಏರಿಕೆ! ಡಿಜಿಟಲ್ ಟ್ರಾನ್ಸಾಕ್ಷನ್ ಎಂದರೆ ಬರಿ ಯುಪಿಐ ಅಲ್ಲ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ವೆಬ್ಸೈಟ್ಗಳಲ್ಲಿ, ಇಕಾಮರ್ಸ್ ಸೈಟ್ಗಳಲ್ಲಿ ಮಾಡುವ ವಹಿವಾಟುಗಳೂ ಸೇರಿರುತ್ತವೆ. ಯುಪಿಐ ವ್ಯವಸ್ಥೆ ಬಂದಮೇಲೆ ಹಣಕಾಸಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿದ್ದವರೂ ಬಳಸುವುದಕ್ಕೆ ಶುರು ಮಾಡಿದರು. ಇದರಿಂದ ಆದ ಸಮಸ್ಯೆಯೇನೆಂದರೆ, ಅವರನ್ನು ಸುಲಭವಾಗಿ ಸುಳ್ಳು ಹೇಳಿ ಯಾಮಾರಿಸಬಹುದು.

ಒಂದು ವಿಧದ ಸುಳ್ಳು ಹೆಚ್ಚು ಪ್ರಚಾರವಾಗಿ ಅದು ಜನರಿಗೆ ತಿಳಿದುಹೋಯಿತು – ಎನ್ನುವ ಹೊತ್ತಿಗೆ ಮೋಸಗಾರರು ಹೊಸ ತಂತ್ರವನ್ನು ಹುಡುಕಿಕೊಳ್ಳುತ್ತಾರೆ.

ಉದಾಹರಣೆಗೆ, ಯುಪಿಐ ಬಂದ ಹೊಸತರಲ್ಲಿ ಹಣ ವಿನಂತಿ ಮಾಡುವುದಕ್ಕೆ ಸಂಬಂಧಿಸಿದಂತೆ ಎನ್ಪಿಸಿಐ ಒದಗಿಸಿದ್ದ ಅಷ್ಟೇನೂ ಜನಪ್ರಿಯವಾಗದಿದ್ದ ಒಂದು ಸೌಲಭ್ಯವನ್ನು ಬಳಸಿಕೊಂಡು ಮೋಸಗಾರರು ಜನರನ್ನು ಯಾಮಾರಿಸುತ್ತಿದ್ದರು. ಆದರೆ, ಈಗ ಜನರಿಗೆ ಆ ತಂತ್ರ ತಿಳಿದುಹೋಗಿದೆ. ಹೀಗಾಗಿ, ಬೇರೆ ಬೇರೆ ತಂತ್ರಗಳನ್ನು ಹುಡುಕಿಕೊಂಡಿದ್ದಾರೆ.

ಇದೆಲ್ಲದರಾಚೆ, ಕಳೆದೊಂದು ವರ್ಷದಿಂದ ಎನ್ಪಿಸಿಐ ತನ್ನ ಯುಪಿಐ ಸೌಲಭ್ಯದಲ್ಲಿ ಹಲವು ಹೊಸ ಹೊಸ ಸೌಲಭ್ಯಗಳನ್ನು ತರುತ್ತಿದೆ. ‘ಡೆಲಿಗೇಟ್ ಪೇಮೆಂಟ್’ ಎಂಬ ವ್ಯವಸ್ಥೆಯನ್ನು ಯುಪಿಐನಲ್ಲಿ ಪರಿಚಯಿಸುವುದಕ್ಕೆ ಎನ್ಪಿಸಿಐ ಸದ್ಯ ಚಿಂತನೆ ನಡೆಸಿದೆ. ಇದರಿಂದ ಬ್ಯಾಂಕ್ ಅಕೌಂಟ್ ಇಲ್ಲದವರೂ ಕೂಡ ಯುಪಿಐ ಬಳಕೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದು ಅನುಕೂಲವೇನೋ ಹೌದು. ಆದರೆ, ಸಮಸ್ಯೆ ಇರುವುದು ಈಗಾಗಲೇ ಯುಪಿಐನಲ್ಲಿ ಮೋಸದ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನೂ ಪರಿಚಯಿಸಿದರೆ, ಮೋಸಗಾರರಿಗೆ ಜನರನ್ನು ಮೋಸ ಮಾಡುವುದು ಇನ್ನಷ್ಟು ಸುಲಭವಾದೀತು ಎಂಬುದು ತಂತ್ರಜ್ಞಾನಪರಿಣತರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.