ಬೆಂಗಳೂರು: ಆಕರ್ಷಕ ಆಡಿಯೊ ಉತ್ಪನ್ನಗಳಿಗೆ ಖ್ಯಾತಿಯಾಗಿರುವ ನು ರಿಪಬ್ಲಿಕ್ (Nu Republic) ಕಂಪನಿಯು ಸೈಬರ್‌ಸ್ಟಡ್ X2 (Cyberstud X2) ಮತ್ತು ಸೈಬರ್‌ಸ್ಟಡ್ X4 ಫೈರ್‌ಫ್ಲೈ ಎಂಬ ಎರಡು ವೈರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಬಿಡುಗಡೆ ಮಾಡಿದೆ.

ಸೈಬರ್‌ಸ್ಟಡ್ X2 ವಿಭಿನ್ನ ರಚನೆಯಲ್ಲಿ ಬಿಡುಗಡೆಯಾಗಿದ್ದು ಇದು ಕೊರಳಲ್ಲಿ ಧರಿಸುವ ಲಾಕೆಟ್ ಮಾದರಿಯಲ್ಲಿದೆ. ಸೈಬರ್‌ಸ್ಟಡ್ X4 ಫೈರ್‌ಫ್ಲೈ ಸಾಧನ ಕೂಡ ಡೈನಾಮಿಕ್ ಲುಕ್‌ನಲ್ಲಿ ಮಾರಕಟ್ಟೆ ಪ್ರವೇಶ ಪಡೆದಿದೆ.

ಸೈಬರ್‌ಸ್ಟಡ್ X2...

ಲಾಕೆಟ್ ಮಾದರಿಯಲ್ಲಿರುವ ಈ ಸಾಧನ ನಯವಾದ ಲೋಹದ ಚೈನ್ ಹೊಂದಿದೆ. ಇದನ್ನು ಕೊರಳಲ್ಲಿ ಧರಿಸಬಹುದು.13mm ನಿಯೋಡೈಮಿಯಮ್ ಡ್ರೈವರ್‌ಗಳು, ENC ತಂತ್ರಜ್ಞಾನವಿದೆ. ಇದು ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ಹೊಂದಿದೆ. ಬಳಕೆದಾರರು 70 ಗಂಟೆಗಳವರೆಗೆ ಪ್ಲೇಟೈಮ್ ಪಡೆಯಬಹುದು.

ಇದರ ಬೆಲೆ: ₹ 2,499

ಸೈಬರ್‌ಸ್ಟಡ್ X4 ಫೈರ್‌ಫ್ಲೈ...

ಆಕರ್ಷಕ ವಿನ್ಯಾಸ ಹೊಂದಿರುವ ಸೈಬರ್‌ಸ್ಟಡ್ X4 ಅನ್ನು ಯುವ ಜನರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿದೆ. LED ಲೈಟಿಂಗ್, ಫೈರ್‌ಫ್ಲೈ-ಪ್ರೇರಿತ ವಿನ್ಯಾಸ ಹಾಗೂ X-Bass ತಂತ್ರಜ್ಞಾನ, ಬ್ಲೂಟೂತ್ V5.3 ಹಾಗೂ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬ್ಯಾಟರಿ ಭರ್ತಿಯಾಗಲು 15 ನಿಮಿಷಗಳು ಸಾಕು ಎಂದು ಕಂಪನಿ ಹೇಳಿದೆ.

ಇದರ ಬೆಲೆ: ₹ 1,799

ಗ್ರಾಹಕರು ಈ ಎರಡು ಸಾಧನಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ www.nurepublic.co ನಲ್ಲಿ ಖರೀದಿ ಮಾಡಬಹುದು. ಹಾಗೆಯೇ ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳ ಮೂಲಕ ಖರೀದಿ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.