ಬೌಲ್ಟ್ ಆಡಿಯೊ ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ‘ಬೌಲ್ಟ್ ಜೆಡ್60’ (Boult Z60 Earbuds) ಇಯರ್‌ಬಡ್ಸ್, ಬ್ಯಾಟರಿ ಬಾಳಿಕೆ, ಮನರಂಜನೆ ಮತ್ತು ಕರೆ... ಹೀಗೆ ಎಲ್ಲ ಆಯಾಮಗಳಲ್ಲಿಯೂ ಉತ್ತಮ ಆಲ್‌ರೌಂಡರ್ ಆಗಿದೆ.

ಇಯರ್‌ಬಡ್ಸ್ ಕೇಸ್ ರೆಕ್ಟ್ಯಾಂಗಲ್ ವಿನ್ಯಾಸದಲ್ಲಿದ್ದು, ಗುಣಮಟ್ಟ ಚೆನ್ನಾಗಿದೆ. ಬಡ್ಸ್‌ಗಳನ್ನು ಹೊರತೆಗೆಯುವಾಗ ಕೇಸ್‌ನ ಮುಚ್ಚಳ ಕೈಗೆ ತಾಗುವುದರಿಂದ ಸ್ವಲ್ಪ ರಗಳೆ ಆಗುತ್ತದೆ. ಕೇಸ್ ಆನ್/ಆಫ್ ಆಗುವುದು/ಕನೆಕ್ಟ್ ಆಗುವುದನ್ನು ಸೂಚಿಸಲು ಚಿಕ್ಕದಾದ ಒಂದು ಇಂಡಿಕೇಟಿಂಗ್ ಲೈಟ್ ನೀಡಲಾಗಿದೆ. ಬಡ್ಸ್‌ನಲ್ಲಿ ಇರುವುದಲ್ಲದೆ ಪ್ರತ್ಯೇಕವಾಗಿ ಎರಡು ಜೋಡಿ ಇಯರ್‌ಟಿಪ್‌ಗಳನ್ನು ನೀಡಲಾಗಿದೆ. ಹೀಗಾಗಿ ಕಿವಿಯ ಗಾತ್ರಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು.

ಬ್ಲೂಟೂತ್ 5.3 ಆವೃತ್ತಿ ಇದ್ದು, ಮೊಬೈಲ್ ಜೊತೆ ಬಹಳ ಸುಲಭವಾಗಿ ಸಂಪರ್ಕಿಸಬಹುದು. ಮೊಬೈಲ್‌ನಲ್ಲಿ ಬ್ಲೂಟೂತ್ ಆನ್ ಮಾಡಿದರೆ ‘ಬೌಲ್ಟ್ ಆಡಿಯೊ ಏರ್‌ಬಾಸ್’ ಹೆಸರು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಬಡ್ಸ್ ಜೊತೆ ಕನೆಕ್ಟ್ ಆಗುತ್ತದೆ. ಧ್ವನಿಯ ಮೂಲಕ ಪವರ್ ಆನ್/ಆಫ್, ಕನೆಕ್ಟ್, ಲೋ ಬ್ಯಾಟರಿ ಮಾಹಿತಿ ತಿಳಿಯುತ್ತದೆ. ಟಚ್ ಆಯ್ಕೆ ಸರಿಯಾಗಿ ಕೆಲಸ ಮಾಡುತ್ತದೆ. ಪ್ಲೇ/ಪಾಸ್, ನೆಕ್ಸ್ಟ್/ಬ್ಯಾಕ್. ವಾಲ್ಯುಂ ಹೆಚ್ಚಿಸುವ/ಕಡಿಮೆ ಮಾಡುವ, ಮ್ಯೂಸಿಕ್ ಮೋಡ್, ಕಾಲ್ ರಿಸೀವ್ ಆಯ್ಕೆಗಳನ್ನು ಟಚ್ ಮೂಲಕ ಸಕ್ರಿಯಗೊಳಿಸಬಹುದು. ವಾಯ್ಸ್ ಅಸಿಸ್ಟಂಟ್ ಸಕ್ರಿಯಗೊಳಿಸಲು ಲಾಂಗ್‌ಪ್ರೆಸ್ ಮಾಡಬೇಕು.

50ಮಿನಿಟ್ಸ್ ಅಲ್ಟ್ರಾ ಲೋ ಲೆಟೆನ್ಸಿ ಇರುವುದರಿಂದ ಗೇಮ್ ಆಡುವಾಗ ಯಾವುದೇ ಸಮಸ್ಯೆ ಆಗುವುದಿಲ್ಲ. ಜೆನ್ ಕ್ವಾಡ್ ಮೈಕ್ ಇದ್ದು, ಬ್ಯಾಕ್‌ಗ್ರೌಂಡ್ ಶಬ್ಧಗಳನ್ನು ಕಡಿಮೆ ಮಾಡುವ ಮೂಲಕ ಫೋನ್ ಕಾಲ್ ಮತ್ತು ವಾಯ್ಸ್ ರೆಕಾರ್ಡಿಂಗ್ ಸ್ಪಷ್ಟತೆಯನ್ನು ಸುಧಾರಿಸಲು ಇಎನ್‌ಸಿ ವ್ಯವಸ್ಥೆಯನ್ನು ಒಳಗೊಂಡಿದೆ. ಹೀಗಾಗಿ ಸಂಗೀತ ಆಲಿಸುವುದು, ವಿಡಿಯೊ ನೋಡುವುದು, ಗೇಮ್ ಆಡುವಾಗ ಯಾವುದೇ ಸಮಸ್ಯೆ ಆಗುವುದಿಲ್ಲ. ಫೋನ್ ಕಾಲ್ ಮಾಡುವಾಗ ಮನೆಯ ಒಳಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇದ್ದರೂ ಯಾವುದೇ ತೊಂದರೆ ಆಗಿಲ್ಲ. ಕರೆ ಮಾಡಿದಾಗ/ಸ್ವೀಕರಿಸಿದಾಗ ನನ್ನ ಧ್ವನಿಯು ಫೋನಿನ ಇನ್ನೊಂದು ತುದಿಯಲ್ಲಿ ಇರುವವರಿಗೆ ಸ್ಪಷ್ಟವಾಗಿ ಕೇಳಿಸಿದೆ.

ಐಪಿಎಕ್ಸ್5 ವಾಟರ್ ರೆಸಿಸ್ಟನ್ಸ್ ಸೌಲಭ್ಯ ಇದೆ. ಫೋನ್ ಇರುವಲ್ಲಿಂದ 10ಮೀಟರ್ ವ್ಯಾಪ್ತಿಯಲ್ಲಿ ಹಾಡು ಕೇಳಲು, ಕರೆ ಮಾಡಲು ಬಳಸಬಹುದು. ಟೈಪ್–ಸಿ ಫಾಸ್ಟ್ ಚಾರ್ಜರ್ ಒಳಗೊಂಡಿದೆ. 10 ನಿಮಿಷ ಚಾರ್ಜ್ ಮಾಡಿದರೆ 150 ನಿಮಿಷ ಬಳಸಬಹುದು. ಒಮ್ಮೆ ಪೂರ್ತಿ ಚಾರ್ಜ್ ಮಾಡಲು 40 ನಿಮಿಷ ಬೇಕು. ಪೂರ್ತಿ ಚಾರ್ಜ್ ಆದರೆ 8ಗಂಟೆ ಬಳಸಬಹುದು. 60 ಗಂಟೆ ಪ್ಲೇ ಬ್ಯಾಕ್ ಸಮಯ ಇದೆ. ಬಡ್ಸ್ ಅನ್ನು ಕಿವಿಯಿಂದ ಹೊರಗೆ ತೆಗೆದ ಕೆಲ ಕ್ಷಣಗಳ ಬಳಿಕ ತಾನಾಗಿಯೇ ಸ್ಚಿಚ್ ಆಫ್ ಆಗುತ್ತದೆ. ಮತ್ತೆ ಆನ್ ಮಾಡಬೇಕು ಎಂದಾದರೆ ಬಡ್ಸ್‌ನ ಮೇಲ್ಭಾಗದಲ್ಲಿ ಇರುವ ಬಟನ್ ಅನ್ನು ಒತ್ತಿ ಹಿಡಿಯಬೇಕು, ಆಗ ಪವರ್ ಆನ್ ಧ್ವನಿಯು ಬಡ್ಸ್ ಸಕ್ರಿಯ ಆಗಿರುವುದನ್ನು ತಿಳಿಸುತ್ತದೆ. ಬಡ್ಸ್‌ಗಳು ಹೀಗೆ ಆಟೊ ಆಫ್ ಆಗುವುದರಿಂದ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತದೆ. ಕಂಪನಿಯ ಜಾಲತಾಣದಲ್ಲಿ ಇದರ ಎಂಆರ್‌ಪಿ ₹2,999 ಇದ್ದು ಕಂಪನಿಯು ₹ 1,499ರ ಬೆಲೆಗೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.