ಕೃತಕ ಬುದ್ದಿಮತ್ತೆ ಅಥವಾ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (ಎಐ) ಎಂದರೆ, ದೃಶ್ಯಗ್ರಹಿಕೆ, ಮಾತನ್ನು ಗುರುತಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಭಾಷಾಂತರ ಮುಂತಾದ ಕೆಲಸಗಳನ್ನು ಮಾಡುವ ಯಂತ್ರಗಳು. ಇವನ್ನು ಅವು ಮನುಷ್ಯನಿಗಿರುವ ಬುದ್ಧಿವಂತಿಕೆಯಂತೆಯೇ ಬುದ್ಧಿಯನ್ನು ಬಳಸಿಕೊಂಡು ಮಾಡುತ್ತವೆ. ಇವುಗಳಲ್ಲಿ ನ್ಯಾರೋ, ಜನರಲ್, ಸೂಪರ್ ಎಐ ಎಂದು ಅನೇಕ ವಿಧಗಳಿವೆ. ಜನರೇಟಿವ್ ಎಐ ಕೂಡ ಒಂದು ವಿಧ. ‘ಜನರೇಟಿವ್ ಎಐ’ ಎಂದರೆ ಹಲವಾರು ವಿಧದ ಮಾಹಿತಿಗಳನ್ನು, ಅರ್ಥಾತ್ ಪಠ್ಯ, ಪ್ರತಿಮೆಗಳು, ಚಿತ್ರಣಗಳು, ಆಡಿಯೋಗಳು ಹಾಗೂ ಕೃತಕ ದತ್ತಾಂಶಗಳನ್ನು ಸಂಯೋಜಿಸಿ ಉತ್ಪಾದಿಸುವ ಒಂದು ತಂತ್ರಜ್ಞಾನ. ಇವು ನೀವು ಯಾವುದೇ ವಿಷಯವನ್ನು ನೀಡಿದರೂ ಕ್ಷಣಮಾತ್ರದಲ್ಲಿ ನಿಮ್ಮ ಮುಂದೆ ಉತ್ತರವನ್ನು ಪ್ರಸ್ತುತಪಡಿಸಿಬಿಡುತ್ತವೆ! ಕೆಲವೇ ದಿನಗಳಲ್ಲಿ ಜನಪ್ರಿಯವಾಗಿರುವ ಚಾಟ್ ಜಿಪಿಟಿ, ಚಾಟ್ ಬಾಟುಗಳೇ ಜನರೇಟಿವ್ ಎಐನ ಉತ್ತಮ ಉದಾಹರಣೆ. ನಾವು ಕಷ್ಟಪಟ್ಟೋ ಇಷ್ಟಪಟ್ಟೋ ನಮ್ಮ ಕ್ರಿಯಾಶೀಲತೆಯನ್ನು ಉಪಯೋಗಿಸಿ ಮಾಡಬಹುದಾದ ಕೆಲಸಗಳಿಗೆ ಇವು ಬ್ರೇಕ್ ಹಾಕಿಬಿಡುತ್ತವೆ ಎನ್ನುವ ಆರೋಪವೂ ಇವುಗಳ ಮೇಲಿದೆಯೆನ್ನಿ. ಇವು ಇದುವರೆಗೂ ನಮಗೆ ಮಾಹಿತಿಗಳನ್ನಷ್ಟೇ ನೀಡುತ್ತಿದ್ದವು. ಆದರೆ ಈಗ ಕೃತಕ ಬುದ್ದಿಮತ್ತೆಯ ಯಂತ್ರಗಳು ಔಷಧಗಳನ್ನೂ ತಯಾರಿಸಬಲ್ಲವಂತೆ! ಹಾಗೆಂದು ಸ್ಟ್ಯಾಂಡ್ ಫರ್ಡ್ ಮೆಡಿಸಿನ್ ಮತ್ತು ಮೆಕ್ಮಾಸ್ಟರ್ ವಿಶ್ವವಿದ್ಯಾನಿಲಯದ ಸಂಶೋಧಕರಾದ ಜೇಮ್ಸ್ ಜೌ ಮತ್ತು ಸಂಗಡಿಗರು ಮೊನ್ನೆ ‘ನೇಚರ್ ಮಷೀನ್ ಇಂಟೆಲಿಜೆನ್ಸ್’ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಹೌದು, ಆ್ಯಂಟಿಬಯಾಟಿಕ್ಕುಗಳಿಗೇ ನಿರೋಧವೊಡ್ಡಿ ಬೆಳೆಯುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಔಷಧವೊಂದನ್ನು ಎಐ ತಯಾರಿಸಿದೆಯಂತೆ!

ನಮಗೆ ಬ್ಯಾಕ್ಟೀರಿಯಾಗಳಿಂದ ಸೋಂಕು ತಗುಲಿದಾಗ, ಅವನ್ನು ಕೊಲ್ಲಲು ಅಥವಾ ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸಲು ನೀಡುವ ಔಷಧಗಳೇ ಆ್ಯಂಟಿಬಯಾಟಿಕ್ಕುಗಳು. ಆದರೆ ಇವುಗಳಿಗೂ ನಿರೋಧವೊಡ್ಡಿ ನಮ್ಮ ದೇಹದೊಳಗೆ ತಮ್ಮ ಸಂತತಿಯನ್ನು ಮುಂದುವರೆಸಬಲ್ಲ ಬ್ಯಾಕ್ಟೀರಿಯಾಗಳೂ ಇವೆ. ಅಂಥ ಬ್ಯಾಕ್ಟೀರಿಯಾಗಳಿದ್ದಾಗ ನಮಗೆ ನೀಡುವ ಔಷಧವೆಲ್ಲವೂ ವ್ಯರ್ಥ. ಜೊತೆಗೇ ಅನವಶ್ಯಕವಾದ ರಾಸಾಯನಿಕಗಳನ್ನೂ ನಾವು ಸೇವಿಸಬೇಕಾಗುತ್ತದೆ; ಕಾಯಿಲೆಯೂ ಗುಣವಾಗುವುದಿಲ್ಲ. ಇದರಿಂದಾಗಿಯೇ ಜಾಗತಿಕವಾಗಿ ವರ್ಷದಲ್ಲಿ ಸುಮಾರು ಐವತ್ತುಲಕ್ಷ ಜನರು ಸಾಯುತ್ತಿದ್ದಾರಂತೆ. ಹಾಗಾಗಿ ಇದನ್ನು ಬಗೆಹರಿಸುವ ಹೊಸ ಮಾರ್ಗಗಳ ಅವಶ್ಯಕತೆಯಿದೆ ಎನ್ನುತ್ತಾರೆ, ವಿಜ್ಞಾನಿಗಳು. ಅದಕ್ಕಾಗಿ ಸ್ಟ್ಯಾಂಡ್ ಫರ್ಡ್ ಮೆಡಿಸಿನ್ ಮತ್ತು ಮೆಕ್ ಮಾಸ್ಟರ್ ವಿಶ್ವವಿದ್ಯಾನಿಲಯದ ಸಂಶೋಧಕರು ಜನರೇಟಿವ್ ಎಐ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಇವರು ಸಿಂಥೇಮೋಲ್ ಎನ್ನುವ, ಔಷಧಗಳನ್ನು ತಯಾರಿಸುವ ಯಂತ್ರವೊಂದನ್ನು ರೂಪಿಸಿದ್ದಾರಂತೆ. ಇದು ಆಂಟಿಬಯಾಟಿಕ್ಕುಗಳಿಗೇ ನಿರೋಧವೊಡ್ಡಿ ಸೋಂಕಿತರನ್ನು ಕೊಲ್ಲುತ್ತಿದ್ದ ‘ಅಸಿನೆಟೋಬ್ಯಾಕ್ಟರ್ ಬೌಮನ್ನಿ’ (Acinetobacter baumanni) ಎನ್ನುವ ಮಾರಕ ಬ್ಯಾಕ್ಟೀರಿಯಾವನ್ನು ಹತ್ತಿಕ್ಕಲು ಸುಮಾರು ಆರು ಹೊಸ ಔಷಧಗಳನ್ನು ತಯಾರಿಸಿದೆಯಂತೆ. ಹೊಸ ಔಷಧಗಳನ್ನು ತಯಾರಿಸಬಹುದಾದಂತಹ ಲಕ್ಷಾಂತರ ರಾಸಾಯನಿಕ ಅಣುಗಳು ಲಭ್ಯವಿದ್ದರೂ ಇದುವರೆಗೂ ಅವೆಲ್ಲವನ್ನೂ ಬಳಸಿ, ಪರೀಕ್ಷಿಸಲಾಗಿರಲಿಲ್ಲ. ಅವೆಲ್ಲವೂ ಬಹಳಷ್ಟು ಸಮಯ ಹಾಗೂ ಶ್ರಮವನ್ನು ತೆಗೆದುಕೊಳ್ಳಬಹುದು. ಆದ್ದರಿಂದ ತುರ್ತಾಗಿ ಬೇಕಾಗಿದ್ದ ನಿಸರ್ಗದಲ್ಲಿ ನಮಗೆ ಕಾಣಿಸಿರದ ಹೊಸತಾದ ಔಷಧಕ್ಕಾಗಿ ನಾವು ಎಐ ಅನ್ನು ಬಳಸಿಕೊಂಡಿದ್ದೇವೆ ಎನ್ನುತ್ತಾರೆ, ಜೇಮ್ಸ್.

‘ಜನರೇಟಿವ್ ಎಐ’ ಬರುವ ಮೊದಲೇ ಸಂಶೋಧಕರು ಅದೇ ರೀತಿಯ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಆ್ಯಂಟಿಬಯಾಟಿಕ್ಕುಗಳನ್ನು ತಯಾರಿಸಲು ಪ್ರಯತ್ನಿಸಿದ್ದರಂತೆ. ಅರ್ಥಾತ್, ಈಗಾಗಲೇ ಲಭ್ಯವಿರುವ ಔಷಧಗಳ ಪಟ್ಟಿಯನ್ನು ಜಾಲಾಡಿ, ಯಾವ ಸಂಯುಕ್ತಗಳು ಅವರ ಉದ್ದೇಶಿತ ರೋಗಕಾರಕವನ್ನು ಕೊಲ್ಲಬಹುದು ಎಂದು ಅಂದಾಜಿಸಲು ಪ್ರಯತ್ನಿಸಿದ್ದರಂತೆ. ಆ ತಂತ್ರಜ್ಞಾನವು ಈಗಾಗಲೇ ತಿಳಿದಿರುವ ಸುಮಾರು ಹತ್ತು ಕೋಟಿ ಸಂಯುಕ್ತಗಳನ್ನು ಸೋಸಿಬಿಟ್ಟಿತ್ತಂತೆ! ಆದರೆ ‘ರಾಸಾಯನಿಕಗಳ ವ್ಯಾಪ್ತಿ ದೈತ್ಯವಾದದ್ದು’ ಎನ್ನುತ್ತಾರೆ, ಮತ್ತೊಬ್ಬ ಸಂಶೋಧಕರಾದ ಸ್ವಾನ್ ಸನ್. ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳಿರುವ ಸುಮಾರು 1060 ರಾಸಾಯನಿಕ ಸಂಯುಕ್ತಗಳನ್ನು ಇದರಿಂದ ಅಂದಾಜಿಸಲಾಗಿದೆಯಂತೆ. ಉತ್ತಮ ಔಷಧವನ್ನು ರೂಪಿಸಲು ಇನ್ನೂ ಎಷ್ಟು ಸಂಯುಕ್ತಗಳನ್ನು ಸಂಶೋಧಕರು ಪರೀಕ್ಷಿಸುವುದು ಬಾಕಿ ಇದೆ ಹಾಗೂ ಅದಕ್ಕೆ ಎಷ್ಟು ಸಮಯ ಬೇಕಾಗಬಹುದು ಊಹಿಸಿನೋಡಿ!

ಆದ್ದರಿಂದ ಜನರೇಟಿವ್ ಎಐನ ಕಲ್ಪಿಸಿಕೊಳ್ಳುವ ಪ್ರವೃತ್ತಿಯು ಔಷಧ ಪತ್ತೆಗೆ ಒಂದು ವರಪ್ರಸಾದವಾಗಬಹುದು ಎಂದು ಈ ತಂತ್ರಜ್ಞಾನವನ್ನು ಸಂಶೋಧಕರು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಹಿಂದಿನ ಪ್ರಯತ್ನಗಳಲ್ಲಿ ಎಐನ ಕಲ್ಪನಾಸಾಮರ್ಥ್ಯ ಅಪರಿಮಿತವಾದ್ದರಿಂದ, ಅವು ಕಲ್ಪಿಸಿದ ಔಷಧಗಳು ಪ್ರಯೋಗಶಾಲೆಗಳಲ್ಲಿ ಪ್ರಾಯೋಗಿಕವಾಗಿ ತಯಾರಿಸಲು ಅಸಾಧ್ಯವಾಗಿರುತ್ತಿದ್ದುವಂತೆ. ಹಾಗಾಗಿ ಅವುಗಳ ಕಲ್ಪನೆಗೆ ಕಾಪುಗಂಬಿಗಳನ್ನು ಹಾಕುವುದು ಅವಶ್ಯವಾಗಿತ್ತು. ಇವೆಲ್ಲವನ್ನೂ ಖಾತರಿಪಡಿಸಿಕೊಂಡು ಸಿಂಥೆಮೋಲ್ ಯಂತ್ರವನ್ನು ಹೊಸದಾಗಿ ರೂಪಿಸಲಾಗಿದೆಯಂತೆ. ಅದು ಎಂತಹುದೇ ಔಷಧವನ್ನು ಅಂದಾಜಿಸಿದರೂ ನಾವು ಅದನ್ನು ಪ್ರಯೋಗಶಾಲೆಗಳಲ್ಲಿ ತಯಾರಿಸಲು ಸಾಧ್ಯವಾಗುವಂತೆ ಮಾಡಬೇಕಿತ್ತು. ಇದಕ್ಕಾಗಿ ಸ್ವಾನ್ ಸನ್, ಗಣಕೀಕೃತ ಕೆಲಸ ಹಾಗೂ ಪ್ರಯೋಗಶಾಲೆಗಳ ಸಂಯೋಗವನ್ನು ಖಾತರಿಪಡಿಸಿಕೊಂಡಿದ್ದಾರೆ. ಸಿಂಥೆ ಮೋಲ್ ಮಾದರಿ ಯಂತ್ರಕ್ಕೆ 1,30,000ಕ್ಕೂ ಹೆಚ್ಚಿನ ಮಾಲಿಕ್ಯುಲಾರ್ ಬಿಲ್ಡಿಂಗ್ ಬ್ಲಾಕ್ ಹಾಗೂ ಪೂರ್ವದೃಢೀಕೃತ ರಾಸಾಯನಿಕ ಕ್ರಿಯೆಗಳನ್ನು ಬಳಸಿಕೊಂಡು ಔಷಧಗಳನ್ನು ರೂಪಿಸಲು ತರಬೇತಿ ನೀಡಲಾಗಿತ್ತಂತೆ. ಜೊತೆಗೆ, ಅಸಿನೆಟೋಬ್ಯಾಕ್ಟರ್ ಬೌಮನ್ನಿ ಬ್ಯಾಕ್ಟೀರಿಯಾ ನಿರೋಧಕತೆಗೆ ಲಭ್ಯವಿರುವ ಎಲ್ಲ ರಾಸಾಯನಿಕಗಳ ಚಟುವಟಿಕೆಗಳ ಬಗ್ಗೆಯೂ ತರಬೇತಿ ನೀಡಿದ್ದರಂತೆ. ಈ ಎಲ್ಲಾ ಮಾಹಿತಿ ಹಾಗೂ ಮಾರ್ಗಸೂಚಿಗಳನ್ನು ಪರಿಗಣಿಸಿ, ಸಿಂಥೇಮೋಲ್ ಸುಮಾರು 25000 ಆ್ಯಂಟಿಬಯಾಟಿಕ್ಕುಗಳು ಮತ್ತು ಅವನ್ನು ಒಂಬತ್ತು ಗಂಟೆಗಳೊಳಗೇ ತಯಾರಿಸುವ ವಿಧಾನಗಳನ್ನೂ ನೀಡಿಬಿಟ್ಟಿತ್ತಂತೆ! ಇವುಗಳಿಂದ ಈಗಾಗಲೇ ಲಭ್ಯವಿರುವ ಔಷಧಗಳಿಗೆ ಹೋಲುವಂಥವನ್ನು ತೆಗೆದು, ಭಿನ್ನವಾದವುಗಳನ್ನು ಮಾತ್ರ ಹೆಕ್ಕಿದ್ಧಾರೆ. ಈಗ ವಿಜ್ಞಾನಿಗಳ ಕೈಯಲ್ಲಿ ಹೊಸ ಔಷಧ ಮಾತ್ರವಲ್ಲದೇ, ಅವನ್ನು ತಯಾರಿಸುವ ಪ್ರತ್ಯೇಕ ಮಾರ್ಗಸೂಚಿಗಳೂ ಇವೆ ಎನ್ನುತ್ತಾರೆ, ಜೌ.

ಸಿಂಥೇಮೋಲ್ ನೀಡಿದ ಪಟ್ಟಿಯಿಂದ ಸಂಶೋಧಕರು ಉತ್ತಮವಾದ ರಾಸಾಯನಿಕಗಳನ್ನಷೇ ಆಯ್ದುಕೊಂಡು ಅವು ಹೇಗೆ ಅಸಿನೆಟೋಬ್ಯಾಕ್ಟರ್ ಬೌಮನ್ನಿ ಅನ್ನು ಕೊಲ್ಲುತ್ತವೆ ಎಂದು ಪರೀಕ್ಷಿಸಿದ್ದಾರೆ. ಅವುಗಳಲ್ಲಿ ಆರು ರಾಸಾಯನಿಕಗಳು ಅತ್ಯುತ್ತಮವಾಗಿ ಕೆಲಸ ಮಾಡಬಲ್ಲವಂತೆ. ಇವು ಅಸಿನೆಟೋಬ್ಯಾಕ್ಟರ್ ಬೌಮನ್ನಿ ಅಲ್ಲದೇ ಆ್ಯಂಟಿಬಯಾಟಿಕ್ಕುಗಳಿಗೇ ನಿರೋಧಕತೆ ಬೆಳೆಸಿಕೊಳ್ಳಬಲ್ಲ ಈ.ಕೋಲೈ, ನ್ಯುಮೋನಿಯಾದಂತಹ ಇತರೆ ಬ್ಯಾಕ್ಟೀರಿಯಾಗಳ ವಿರುದ್ದವೂ ಆ್ಯಂಟಿಬ್ಯಾಕ್ಟೀರಿಯಲ್ ಆಗಿ ಕೆಲಸ ಮಾಡಬಲ್ಲವಂತೆ. ಇವು ಒಂದಕ್ಕೊಂದು ಬಹಳ ಭಿನ್ನವಾಗಿವೆಯಂತೆ. ಮುಂದಿನ ಸಂಶೋಧನೆಗಳಲ್ಲಿ ಈ ಔಷಧಗಳು ರಾಚನಿಕ ಹಂತದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಪರೀಕ್ಷಿಸಲಿದ್ದಾರೆ. ಒಟ್ಟಾರೆ ಮನುಷ್ಯರು ಔಷಧಗಳ ವಿಷಯದಲ್ಲಿ ಇದುವರೆಗೂ ಕಂಡಿರದ ಹೊಸ ಸಾಧ್ಯತೆಗಳನ್ನು ಎಐ ತಂತ್ರಜ್ಞಾನವು ತೆರೆದಿಟ್ಟಿದೆ ಎನ್ನುತ್ತಾರೆ ಜೌ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.