ಜಿ. ಎಸ್. ಎಲ್. ವಿ. ಎಂಬುದು ಭಾರತ ನಿರ್ಮಿಸಿರುವ ರಾಕೆಟ್ ವಾಹನಗಳಲ್ಲೇ ಅತಿ ಎತ್ತರವಾದುದು. ಒಂದಲ್ಲ, ಎರಡಲ್ಲ, ಹದಿನೇಳು ಮಹಡಿ (170 ಅಡಿ) ಎತ್ತರದ ಈ ದೈತ್ಯ ವಾಹನ ತನ್ನ ಹದಿನೈದನೇ ಯಾನದ (ಜಿ. ಎಸ್. ಎಲ್. ವಿ.-ಎಫ಼್12) ಅಂಗವಾಗಿ ಭೋರ್ಗರೆಯುತ್ತಾ ಶ್ರೀಹರಿಕೋಟಾದಲ್ಲಿನ ಎರಡನೇ ಉಡಾವಣಾ ವೇದಿಕೆಯ ಮೇಲಿಂದ ಈ ಸೋಮವಾರ (ಮೇ 29, 2023)ದಂದು 10:42ಕ್ಕೆ ಮೇಲೇರಿದ ದೃಶ್ಯ ಅದ್ಭುತವಾಗಿತ್ತು. ಉಡಾವಣೆಯಾದ ಸುಮಾರು 18 ನಿಮಿಷಗಳಲ್ಲೇ ಜಿ. ಎಸ್. ಎಲ್. ವಿ. ತಾನು ಹೊತ್ತ 2232 ಕಿಲೋಗ್ರಾಂ ತೂಕದ ‘ಎನ್ ವಿ ಎಸ್-01’ ಉಪಗ್ರಹವನ್ನು ಕೋಳಿಮೊಟ್ಟೆಯಾಕಾರದ ಭೂಕಕ್ಷೆಯೊಂದಕ್ಕೆ ಕರಾರುವಾಕ್ಕಾಗಿ ಸೇರಿಸಿತು. ಭಾರತದ ಯಾನ ನಿರ್ವಹಣಾ ಉಪಗ್ರಹಗಳ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯ ಆರಂಭವಾಯಿತು.

ಜಿ. ಎಸ್. ಎಲ್. ವಿ.ಯ ಈ ಯಶಸ್ಸು ಭಾರತೀಯ ಅಂತರಿಕ್ಷ ವಿಜ್ಞಾನಿಗಳಿಗೆ ಹರ್ಷ ನೆಮ್ಮದಿಗಳೆರಡನ್ನೂ ತಂದುಕೊಟ್ಟಿತು. ಕಾರಣ ಈ ಯಶಸ್ವೀಯಾನದ ಹಿಂದಿನ ಯಾನದಲ್ಲಿ ಇದೇ ವಾಹನವೈಪಲ್ಯವನ್ನು ಕಂಡಿತ್ತು. ಹೀಗಾಗಿ ಜಿ. ಎಸ್. ಎಲ್. ವಿ.ಯ ಇತ್ತೀಚಿನ ಯಾನ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾಬೀತುಮಾಡಿದೆ. ಮೂರು ರಾಕೆಟ್ ಹಂತಗಳುಳ್ಳ ಜಿ. ಎಸ್. ಎಲ್. ವಿ. ಅತ್ಯಂತ ಸಂಕೀರ್ಣವಾದ, ಆದರೆ ದಕ್ಷವಾದ ಒಂದು ಬಗೆಯ ‘ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನ’ವನ್ನು ಉಳ್ಳದ್ದಾಗಿದೆ ಎಂಬುದು ಇಲ್ಲಿ ಮುಖ್ಯ. ಇಂತಹ ತಂತ್ರಜ್ಞಾನವನ್ನು ಕರಗತಮಾಡಿಕೊಂಡಿರುವ ಇತರ ರಾಷ್ಟ್ರಗಳೆಂದರೆ ಅಮೆರಿಕಾ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ, ಅಷ್ಟೆ.

ಜಿ. ಎಸ್. ಎಲ್. ವಿ.ಯ ಯಶಸ್ಸಿನ ಮಾತು ಹಾಗಿರಲಿ, ಈಗ ಅದು ಉಡಾಯಿಸಿದ ಉಪಗ್ರಹದ ವಿಷಯಕ್ಕೆ ಬರೋಣ. ‘ಎನ್. ವಿ. ಎಸ್.-01’ ಎಂಬ ಹೆಸರಿನ ಆ ಉಪಗ್ರಹ ಒಂದು ಯಾನ ನಿರ್ವಹಣಾ (ನ್ಯಾವಿಗೇಶನ್) ಉಪಗ್ರಹ. ಇದು ನಮ್ಮ ಸ್ವದೇಶಿ ‘ನಾವಿಕ್’ ಕಾರ್ಯಕ್ರಮದಲ್ಲಿನ ಎರಡನೇ ಪೀಳಿಗೆಯ ಮೊದಲ ಉಪಗ್ರಹ. ಇದಕ್ಕೆ ಮೊದಲು ನಾವಿಕ್ ಕಾರ್ಯಕ್ರಮದ ಮೊದಲ ಪೀಳಿಗೆಯ ಉಪಗ್ರಹಗಳು ನಮ್ಮ ಪಿ. ಎಸ್. ಎಲ್. ವಿ. ರಾಕೆಟ್ ವಾಹನದಲ್ಲಿ ಕಕ್ಷೆಗೆ ತೆರಳಿದ್ದವು.

ಈ ‘ಸ್ಮಾರ್ಟ್ ಮೊಬೈಲ್ ಫೋನ್’ ಯುಗದಲ್ಲಿ ಜಿ. ಪಿ. ಎಸ್. ಎಂಬ ಪದ ಬಹುಮಟ್ಟಿಗೆ ಚಿರಪರಿಚಿತವಾಗಿದೆ. ನಾವ್ ಸ್ಟಾರ್ ಉಪಗ್ರಹಗಳನ್ನು ಉಳ್ಳ ‘ಜಿ. ಪಿ. ಎಸ್.’ ವ್ಯವಸ್ಥೆಯ ನೆರವಿನೊಡನೆ ಇಂದು ಜಗತ್ತಿನಾದ್ಯಂತ ಕೋಟ್ಯಂತರ ಜನರು ದಕ್ಷವಾಗಿ ನ್ಯಾವಿಗೇಟ್ ಮಾಡುತ್ತಾ ತಮ್ಮ ಹತ್ತಿರದ ಇಲ್ಲವೇ ದೂರದ ಉದ್ದೇಶಿತ ಸ್ಥಳಗಳನ್ನು ತಲುಪುತ್ತಿದ್ದಾರೆ. ಈ ಕಾರಣದಿಂದಾಗಿ ಅಮೆರಿಕಾದ ಒಡೆತನದ ಜಿ. ಪಿ. ಎಸ್. ವ್ಯವಸ್ತೆ ಜಗತ್ತಿನಾದ್ಯಂತ ಜನಪ್ರಿಯತೆಯನ್ನು ಪಡೆದಿದೆ. ಇದರೊಂದಿಗೇ ರಷ್ಯಾದ ಗ್ಲೋನಾಸ್, ಚೀನಾದ ಬೈಡೋ, ಯೂರೋಪ್ ನ ಗೆಲಿಲಿಯೋ, ಈ ಉಪಗ್ರಹಯಾನ ನಿರ್ವಹಣಾ ವ್ಯವಸ್ಥೆಗಳೂ ಇಂದು ಅಸ್ತಿತ್ವದಲ್ಲಿವೆ.

1999ರ ಕಾರ್ಗಿಲ್ ಯುದ್ಧದ ನಡುವೆ ನಿಖರವಾದ ಯಾನನಿರ್ವಹಣೆ ಹಾಗೂ ಗುರಿಯಾಗುವ ವೈರಿ ಪ್ರದೇಶಗಳ ಸ್ಥಾನ – ಇವುಗಳನ್ನು ಕುರಿತ ಮಾಹಿತಿಯನ್ನು ಹೊರದೇಶದಿಂದ ಪಡೆಯುವ ಸಂಬಂಧದಲ್ಲಿ ಆದ ಕಹಿ ಅನುಭವ ತನ್ನದೇ ಆದ ಯಾನ ನಿರ್ವಹಣಾ ಉಪಗ್ರಹ ವ್ಯವಸ್ಥೆಯನ್ನು ಭಾರತ ರೂಪಿಸುವುದಕ್ಕೆ ನಾಂದಿಯಾಯಿತು. ಅದರ ಅಂಗವಾಗಿ ಸಾಕಷ್ಟು ಅಧ್ಯಯನ ಹಾಗೂ ವಿಶ್ಲೇಷಣೆ ನಡೆದ ನಂತರ ‘ಭಾರತದ ಪ್ರಾದೇಶಿಕ ಯಾನ ನಿರ್ವಹಣಾ ಉಪಗ್ರಹ ವ್ಯವಸ್ಥೆ (ಐ. ಆರ್. ಎನ್. ಎಸ್. ಎಸ್.)’ಯನ್ನು ಹಮ್ಮಿಕೊಳ್ಳಲಾಯಿತು. ಇದರ ಮೊದಲ ಉಪಗ್ರಹವನ್ನು 2013ರಲ್ಲಿ ಉಡಾಯಿಸಲಾಯಿತು. ನಂತರ ಈ ಕಾರ್ಯವಾಹಿ (ಆಪರೇಷನಲ್) ವ್ಯವಸ್ಥೆಗೆ ‘ನಾವಿಕ್’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ನಾಮಕರಣ ಮಾಡಿದರು.

ಇತ್ತೀಚೆಗೆ ಉಡಾಯಿಸಲಾದ ‘ಎನ್. ವಿ. ಎಸ್.-01’ನ್ನು ಬಿಟ್ಟು ನಾವಿಕ್ ವ್ಯವಸ್ಥೆಯಲ್ಲಿ ಇಂದು ಇನ್ನೂ ಎಂಟು ಉಪಗ್ರಹಗಳಿವೆ. ಉಡಾವಣೆಯ ವೇಳೆಯಲ್ಲಿ 1425 ಕಿಲೋಗ್ರಾಂ ತೂಗುತ್ತಿದ್ದ ಈ ಉಪಗ್ರಹಗಳು ಮೂವತ್ತಾರು ಸಾವಿರ ಕಿಲೋಮೀಟರ್ ಎತ್ತರದ ‘ಭೂ ಮೇಳಯಕ ಕಕ್ಷೆ’ (ಜಿಯೋಸಿಂಕ್ರೊನಸ್ ಆರ್ಬಿಟ್)ಯಲ್ಲಿ ಭೂಮಿಯ ಸುತ್ತ 24 ಗಂಟೆಗಳಿಗೊಮ್ಮೆ ವಿಹರಿಸುತ್ತಿವೆ. ಆ ಪೈಕಿ ಕೆಲವದರ ಕಕ್ಷೆ ಭೂಮಧ್ಯರೇಖೆಗೆ (ಈಕ್ವೆಟರ್) ಒಂದು ಕೋನದಲ್ಲಿ ವಾಲಿಕೊಂಡಿದ್ದರೆ ಮತ್ತೆ ಕೆಲವದರ ಕಕ್ಷೆ ಭೂಮಧ್ಯರೇಖೆಯ ಮೇಲೇ ಇರುತ್ತದೆ.

'ನಾವಿಕ್" ಉಪಗ್ರಹಗಳು ಭಾರತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸದಾ ಕಾಲ ಗೋಚರಿಸುವುದರಿಂದ ಅವುಗಳು ಕಳುಹಿಸುವ ಎಲೆಕ್ಟ್ರಾನಿಕ್ ಸಂಕೇತಗಳನ್ನು ಗ್ರಹಿಸಿ ಸಂಸ್ಕರಿಸುವ ಮೂಲಕ ಇಲ್ಲಿನ ಗ್ರಾಹಕ ಸಾಧನಗಳು (ರಿಸೀವರ್ಸ್) ತಮ್ಮ ಸ್ಥಾನವನ್ನು, ವೇಗವನ್ನು ಹಾಗೂ ಭೂಮಿಯ ಮೇಲಿಂದ ತಾವಿರುವ ಎತ್ತರವನ್ನು ನಿಖರವಾಗಿ ಲೆಕ್ಕ ಹಾಕಬಹುದು.

ನಾವಿಕ್ ವ್ಯವಸ್ಥೆಯ ವ್ಯಾಪ್ತಿ ಭಾರತ ಹಾಗೂ ಅದರ ಗಡಿಯಾಚೆ 1500 ಕಿ.ಮೀ. ಆಚೀಚೆ ಇರುವ ಪ್ರದೇಶಗಳವರೆಗೂ ಇರುತ್ತದೆ. ಅದರ ನೆರವಿನೊಡನೆ ನಮ್ಮ ಸ್ಥಾನವನ್ನು ನಾವು ಸುಮಾರು 60 ಅಡಿಗಳಷ್ಟು ಸಮೀಪದಲ್ಲಿ ನಿಖರವಾಗಿ ಗ್ರಹಿಸಬಹುದು.

ನಾವಿಕ್ ಉಪಗ್ರಹಗಳ ಕಾರ್ಯನಿರ್ವಹಣೆಯ ಸಂಬಂಧದಲ್ಲಿ ಕಂಡುಬಂದ ಪ್ರಮುಖವಾದ ಸಮಸ್ಯೆ ಅದರ ‘ಗಡಿಯಾರ’ ಗಳಿಗೆ ಸಂಬಂಧಿಸಿದುದಾಗಿತ್ತು. ಭೂ, ಜಲ ಹಾಗೂ ವಾಯುಮಂಡಲಗಳಲ್ಲಿ ಸಾಗುವ ವಾಹನಗಳು ತಮ್ಮ ಸ್ಥಾನ, ವೇಗ ಹಾಗೂ ಎತ್ತರ, ಇವುಗಳನ್ನು ಗ್ರಹಿಸುವುದಕ್ಕೆ ಅನುವಾಗಲು ಯಾನ ನಿರ್ವಹಣಾ ಉಪಗ್ರಹಗಳು ಅತ್ಯಂತ ಸ್ಥಿರತೆಯನ್ನು ಹೊಂದಿರುವ ‘ಪರಮಾಣು ಗಡಿಯಾರ’(ಅಟಾಮಿಕ್ ಕ್ಲಾಕ್)ಗಳನ್ನು ಹೊಂದಿರಬೇಕಾಗುತ್ತದೆ. ನಾವಿಕ್ ಸರಣಿಯ ಮೊದಲ ಪೀಳಿಗೆಯ ಉಪಗ್ರಹಗಳಲ್ಲಿ ಹೊರದೇಶದಿಂದ ಕೊಳ್ಳಲಾದ ಅಂತಹ ಗಡಿಯಾರಗಳನ್ನು ಬಳಸಲಾಗಿತ್ತು. ಅವುಗಳಲ್ಲಿ ಕೆಲವು ಸರಿಯಾಗಿ ಕಾರ್ಯನಿರ್ವಹಿಸದೇ ನಾವಿಕ್ ಕಾರ್ಯಕ್ರಮಕ್ಕೆ ಕೆಲಮಟ್ಟಿಗೆ ಹಿನ್ನಡೆ ಉಂಟಾಗಿತ್ತು.

ಆದರೆ ಮೇ 29ರಂದು ಉಡಾಯಿಸಲಾದ ನಾವಿಕ್ ‘ಎನ್. ವಿ. ಎಸ್.-01’ ಉಪಗ್ರಹದಲ್ಲಿ ಅಹಮದಾಬಾದಿನಲ್ಲಿರುವ ಇಸ್ರೋ ಅಂತರಿಕ್ಷ ಅನ್ವಯಿಕ ಕೇಂದ್ರ ಅಭಿವೃದ್ಧಿಪಡಿಸಿರುವ ‘ರುಬಿಡಿಯಂ ಪರಮಾಣು ಗಡಿಯಾರ’ವನ್ನು ಅಳವಡಿಸಲಾಗಿದೆ. ಇಷ್ಟೇ ಅಲ್ಲದೇ ಆ ನಾವಿಕ್ ಉಪಗ್ರಹ ‘ಎಲ್–1’ ಎಂಬ ಹೆಚ್ಚುವರಿ ‘ರೇಡಿಯೋ ಆವರ್ತನಾಂಕ ಪಟ್ಟಿಯಲ್ಲೂ’ (ಬ್ಯಾಂಡ್) ಯಾನ ನಿರ್ವಹಣಾ ಸಂಕೇತಗಳನ್ನು ಕಳುಹಿಸುವ ಸಾಮರ್ಥ್ಯವಿರುವಂತೆ ಅದನ್ನು ರೂಪಿಸಲಾಗಿದ್ದು, ಇದರಿಂದಾಗಿ ಆ ಉಪಗ್ರಹದ ಸಾಮರ್ಥ್ಯ ಮತ್ತಷ್ಟು ಹೆಚ್ಚಿದೆ. ಉಪಗ್ರಹದ ಇತರ ಉಪವ್ಯವಸ್ಥೆಗಳಲ್ಲೂ ಸಾಕಷ್ಟು ಸುಧಾರಣೆಯನ್ನು ತರಲಾಗಿದೆ. ಮೊದಲ ಪೀಳಿಗೆಯ ನಾವಿಕ್ ಉಪಗ್ರಹಗಳಿಗೆ ಹೋಲಿಸಿದಲ್ಲಿ ಈ ಎರಡನೇ ಪೀಳಿಗೆಯ ಮೊದಲ ಉಪಗ್ರಹದ ತೂಕವೂ ಗಮನಾರ್ಹವಾಗಿ ಹೆಚ್ಚಿ ಇದರಿಂದ ಅದರ ಉಡಾವಣೆಯನ್ನು ಜಿ. ಎಸ್. ಎಲ್. ವಿ. ವಾಹನದಲ್ಲಿ ಮಾಡಲಾಗಿದೆ.

ಇದೀಗ ನಾವಿಕ್ ಉಪಗ್ರಹ ತನ್ನ ಅಂತಿಮ ಕಕ್ಷಾ ಗೃಹದತ್ತ ಸಾಗುವ ಕಾರ್ಯದಲ್ಲಿ ನಿರತವಾಗಿದೆ. ಹಾಸನದಲ್ಲಿರುವ ಮುಖ್ಯ ನಿಯಂತ್ರಣಾ ಕೇಂದ್ರದಿಂದ ವಿಜ್ಞಾನಿಗಳು ಅದರ ನಿಯಂತ್ರಣ ಹಾಗೂ ನಿರ್ವಹಣೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.