ಸಹ ಪ್ರಯಾಣಿಕರೊಂದಿಗೆ ಬಾಹ್ಯಾಕಾಶದಲ್ಲಿ ತೇಲುತ್ತಿರುವ ರೋಮಾಂಚನಕಾರಿ ವಿಡಿಯೊವನ್ನು ಅಮೆಜಾನ್ ಕಂಪನಿಯ ಸ್ಥಾಪಕ ಜೆಫ್ ಬೆಜೋಸ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಜೆಫ್ ಬೆಜೋಸ್ (57) ತಮ್ಮದೇ ಕಂಪನಿಯ 'ಬ್ಲೂ ಹೊರಿಜಿನ್' ಗಗನನೌಕೆಯಲ್ಲಿ ಸಹ ಪ್ರಯಾಣಿಕರೊಂದಿಗೆ ಮಂಗಳವಾರ ಬಾಹ್ಯಾಕಾಶ ಪ್ರಯಾಣ ಕೈಗೊಂಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿರುವ ವಿಡಿಯೊದಲ್ಲಿ ಬೆಜೋಸ್ ಅವರೊಂದಿಗೆ ಹಿರಿಯ ಪೈಲಟ್ ವಾಲಿ ಫಂಕ್ (82), ಬೆಜೋಸ್ ಸೋದರ ಮಾರ್ಕ್ ಹಾಗೂ ಖಾಸಗಿ ಪೈಲಟ್ ಪರವಾನಗಿ ಹೊಂದಿರುವ ಡಚ್ ಮೂಲದ ಓಲಿವರ್ ಡೀಮೆನ್ (18) ಇದ್ದಾರೆ.

ಉತ್ತರ ಅಮೆರಿಕದ ಸೆಂಟ್ರಲ್ ಟೈಮ್ ಜೋನ್ಗೆ ಅನ್ವಯವಾಗುವಂತೆ ನ್ಯೂ ಶೆಫರ್ಡ್ ಅಂತರಿಕ್ಷ ನೌಕೆಯು ಜುಲೈ 20ರಂದು ಬೆಳಿಗ್ಗೆ 8ಕ್ಕೆ ಉಡಾವಣೆಯಾಗಿದೆ. ಟೆಕ್ಸಾಸ್ ಪಶ್ಚಿಮ ಭಾಗದ ಮರುಭೂಮಿ ಪ್ರದೇಶದಲ್ಲಿರುವ ಲಾಂಚ್ ಸೈಟ್ ಒನ್ನಿಂದ ನ್ಯೂ ಶೆಫರ್ಡ್ ಪ್ರಯಾಣ ಆರಂಭಿಸಿದೆ.

ಇದನ್ನೂ ಓದಿ: ಅಮೆಜಾನ್ ಕಂಪನಿಯ ಸ್ಥಾಪಕ ಜೆಫ್ ಬೆಜೊಸ್ರಿಂದ ಬಾಹ್ಯಾಕಾಶ ಯಾತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.