ಬೆಂಗಳೂರು: 2019 ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದೆ ಎಂಬ ಸಂದೇಶವೊಂದು ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ ಎಂದು ಬೂಮ್ ಲೈವ್ ವರದಿ ಮಾಡಿದೆ.

Election 2019 For All India ಎಂಬ ಶೀರ್ಷಿಕೆಯೊಂದಿಗೆ ಆರಂಭವಾಗುವ ಈ ಸಂದೇಶದಲ್ಲಿ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆ ಯಾವ ದಿನಾಂಕದಂದು ನಡೆಯಲಿದೆ ಎಂಬ ಪಟ್ಟಿಯಿದೆ.

ಆದರೆ ಚುನಾವಣೆ ದಿನಾಂಕ ನಿಗದಿಯಾಗಿಲ್ಲ ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಅವಿನಾಶ್ ಸನಸ್ ಹೇಳಿರುವುದಾಗಿ ಬೂಮ್ ಲೈವ್ ವರದಿ ಮಾಡಿದೆ.

ಇದೇ ಸಂದೇಶವನ್ನು ಕೆಲವರು ಫೇಸ್‍ಬುಕ್, ಟ್ವಿಟರ್‌ನಲ್ಲಿಯೂ ಶೇರ್ ಮಾಡಿದ್ದಾರೆ.

ಅಂದಹಾಗೆ ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್‍ಲ್ಲಿ ಚುನಾವಣಾ ದಿನಾಂಕ ಪ್ರಕಟವಾಗಿಲ್ಲ.

ಅಷ್ಟೇ ಅಲ್ಲದೆ ಈ ಸಂದೇಶದಲ್ಲಿ ಹಲವು ತಪ್ಪುಗಳನ್ನು ಗಮನಿಸಬಹುದು.

ಮೊದಲನೆಯದ್ದು: ಈ ಪಟ್ಟಿಯಲ್ಲಿ 25 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಿವೆ. ಆದರೆ ಭಾರತದಲ್ಲಿ 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿವೆ. ಆ ಪಟ್ಟಿಯಲ್ಲಿ ಉತ್ತರ ಪ್ರದೇಶ, ತೆಲಂಗಾಣ, ಪುದುಚ್ಚೇರಿ, ದಾಮನ್ ಮತ್ತು ದಿಯೂ, ಪಂಜಾಬ್ ರಾಜ್ಯದ ಹೆಸರೇ ಇಲ್ಲ.

ಎರಡನೇಯದ್ದು: ಇದರಲ್ಲಿ Badranagar Habeli ಮತ್ತು ‘Simon’ ಹೆಸರು ಇದೆ. ಇಂಥಾ ರಾಜ್ಯ ಭಾರತದಲ್ಲಿ ಇಲ್ಲ. ಒಂದು ವೇಳೆ ಇದು ಅಕ್ಷರ ತಪ್ಪಾಗಿದಾದ್ರಾ ಮತ್ತು ನಾಗರ್ ಹವೇಲಿ, ಸಿಕ್ಕಿಂ ಹೆಸರು ಆಗಿರಬಹುದು ಎಂದು ಊಹಿಸಬಹುದು. ಯಾಕೆಂದರೆ ಈ ಎರಡು ರಾಜ್ಯಗಳ ಹೆಸರು ಇಲ್ಲಲ್ಲ.

ಮೂರನೆಯದ್ದು: ಈ ದಿನಾಂಕಗಳನ್ನು ಗಮನಿಸಿದರೆ 2014ರ ಸಾರ್ವತ್ರಿಕ ಚುನಾವಣೆಯ ದಿನಾಂಕಗಳಿಗೆ ಹೋಲಿಕೆ ಇದೆ ಎಂದು ನ್ಯೂಸ್ 18 ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.