ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೂಟ್ಯೂಬ್‌ ಚಾನಲ್ ಆರಂಭಿಸಿದ ರೊನಾಲ್ಡೊ: ಮೂರೇ ದಿನದಲ್ಲಿ 54 ಮಿಲಿಯನ್ ಚಂದಾದಾರರು!

ರೊನಾಲ್ಡೊ ಅವರು UR Cristiano ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ
Published : 30 ಆಗಸ್ಟ್ 2024, 10:09 IST
Last Updated : 30 ಆಗಸ್ಟ್ 2024, 10:09 IST
ಫಾಲೋ ಮಾಡಿ
Comments

ಬೆಂಗಳೂರು: ಜನಪ್ರಿಯ ಸ್ಟ್ರೀಮಿಂಗ್ ತಾಣ ಯೂಟ್ಯೂಬ್‌ನಲ್ಲಿ ಜಗತ್ತಿನ ವಿಖ್ಯಾತ ತಾರೆಗಳು ತಮ್ಮ ಅಧಿಕೃತ ಖಾತೆಗಳನ್ನು ತೆರೆದು ಅಭಿಮಾನಿಗಳ ಜೊತೆ ಹೆಚ್ಚು ಕನೆಕ್ಟ್‌ ಆಗುತ್ತಿದ್ದಾರೆ. ಏಕೆಂದರೆ ಜನರೂ ಯೂಟ್ಯೂಬ್‌ಗೆ ಅಷ್ಟೊಂದು ಕನೆಕ್ಟ್ ಆಗುತ್ತಿದ್ದಾರೆ.

ಈ ಸಾಲಿಗೆ ಈಗ ಹೊಸ ಸೇರ್ಪಡೆ ಖ್ಯಾತ್‌ ಫುಟ್‌ಬಾಲ್ ತಾರೆ, ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ. ರೊನಾಲ್ಡೊ ಅವರು UR Cristiano ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ.

ಹೌದು ಯುಟ್ಯೂಬ್‌ನಿಂದ ಇಷ್ಟು ದಿನ ದೂರ ಇದ್ದ ರೊನಾಲ್ಡೊ ಇದೀಗ ತಮ್ಮದೇಯಾದ ಹೊಸ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ವಿಶೇಷವೆಂದರೆ ಆಗಸ್ಟ್ 28ರಂದು ಆರಂಭವಾದ ಹೊಸ ಚಾನಲ್‌ಗೆ ಅಂದರೆ ಮೂರೇ ದಿನದಲ್ಲಿ 54 ಮಿಲಿಯನ್ ( 5.4 ಕೋಟಿ) ಚಂದಾದಾರರಾಗಿದ್ದಾರೆ.

ಇಷ್ಟು ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಏಕೈಕ್ ಚಾನೆಲ್ ಎಂದು UR Cristiano ಯೂಟ್ಯೂಬ್ ಚಾನಲ್ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಈ ಮೂರು ದಿನದಲ್ಲಿ 14 ವಿಡಿಯೊ ತುಣಕುಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಎಲ್ಲ ವಿಡಿಯೊಗಳು 40 ಕೋಟಿಗೂ ಅಧಿಕ ವೀಕ್ಷಣೆ ಕಂಡಿವೆ.

ರೊನಾಲ್ಡೊ ಅವರು ಇನ್‌ಸ್ಟಾಗ್ರಾಂನಲ್ಲಿ 638 ಮಿಲಿಯನ್ ಫಾಲೋವರ್‌ಗಳನ್ನು ಹೊಂದುವ ಮೂಲಕ ಆ ಸಾಮಾಜಿಕ ತಾಣದಲ್ಲಿ ಅತ್ಯಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಫಾಲೋವರ್‌ಗಳಿದ್ದಾರೆ. ಎಕ್ಸ್‌ (ಟ್ವಿಟರ್‌ನಲ್ಲಿ) ನಲ್ಲಿ 113 ಮಿಲಿಯನ್ ಫಾಲೋವರ್‌ಗಳಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ ಅವರು ಜಗತ್ತಿನ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಎಂದು ಖ್ಯಾತಿ ಗಳಿಸಿದ್ದಾರೆ. ಸದ್ಯ ಅವರು ಸೌದಿ ಅರೇಬಿಯಾದ ಅಲ್ ನಾಸರ್ ಫುಟ್‌ಬಾಲ್ ಕ್ಲಬ್‌ಗೆ ಆಡುತ್ತಿದ್ದಾರೆ. ಜೊತೆಗೆ ಪೋರ್ಚುಗಲ್ ನ್ಯಾಷನಲ್ ಟೀಂ ಪ್ರತಿನಿಧಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT