ಬೆಂಗಳೂರು: ಗೂಗಲ್ ಸರ್ಚ್ ತೆರೆದು ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂಬ ಉತ್ತರವನ್ನು ವೆಬ್ಸೈಟ್ ಒಂದು ನೀಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು.

ಇದರಿಂದ ಗೂಗಲ್ ಸರ್ಚ್ ಪೇಜ್ನಲ್ಲಿ ಕ್ಷಣಕಾಲ ಕೆಟ್ಟ ಭಾಷೆ ವಿಚಾರ ಟ್ರೆಂಡ್ ಕೂಡ ಆಗಿದ್ದು, ಸಾವಿರಾರು ಕನ್ನಡಿಗರು ಗೂಗಲ್ ಪೇಜ್ನಲ್ಲಿ ಪ್ರದರ್ಶಿತವಾಗಿದ್ದ ತಪ್ಪು ಮಾಹಿತಿ ನೀಡುತ್ತಿದ್ದ debtconsolidationsquad.com ವೆಬ್ ಪುಟವನ್ನು ರಿಪೋರ್ಟ್ ಮಾಡಿದ್ದು, ಕೆಲವೇ ಸಮಯದಲ್ಲಿ ಜನರ ಆಕ್ರೋಶಕ್ಕೆ ಮಣಿದ ಗೂಗಲ್, ಅಲ್ಲಿದ್ದ ಪುಟವನ್ನು ತೆಗೆದುಹಾಕಿದೆ.

ಗೂಗಲ್ ಸರ್ಚ್ನಲ್ಲಿ ಕಾಣಿಸುತ್ತಿದ್ದ ಈ ಅಸಂಬದ್ಧವನ್ನು ಜನರು ವಿವಿಧ ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ಖಂಡಿಸಿದ್ದು, ಪುಟವನ್ನು ರಿಪೋರ್ಟ್ ಮಾಡುವ ವಿಧಾನವನ್ನು ಕಿರು ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಇದರ ಪರಿಣಾಮ ಗೂಗಲ್, ತನ್ನ ಸರ್ಚ್ ಪುಟದಿಂದ debtconsolidationsquad ವೆಬ್ ತಾಣವನ್ನೇ ತೆಗೆದುಬಿಟ್ಟಿದೆ.

ನಂತರದಲ್ಲಿ ಕೋರಾ ಸಹಿತ ವಿವಿಧ ತಾಣಗಳಲ್ಲಿ ಕೂಡ ಈ ಸಂಗತಿ ಚರ್ಚೆಯಾಗಿದ್ದು, ಜಗತ್ತಿನಲ್ಲಿ ಕೆಟ್ಟ ಭಾಷೆಯೆಂಬುದಿಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೆಬ್ಪುಟಕ್ಕೆ ಹೆಚ್ಚಿನ ಜನರನ್ನು ಸೆಳೆಯುವ ತಂತ್ರ ಮತ್ತು ಟ್ರೆಂಡ್ ಆಗುವ ಉದ್ದೇಶದಿಂದ ಇಂತಹ ತಪ್ಪು ಮಾಹಿತಿ ನೀಡಿ ವಿವಾದ ಸೃಷ್ಟಿಸಿರುವ ಸಾಧ್ಯತೆಯಿದೆ.

ವಂಚನೆಗಿವೆ ನಾನಾ ಮುಖಗಳು: ಇರಲಿ ಎಚ್ಚರ!

ತಪ್ಪು ಮಾಹಿತಿ ಕಂಡರೆ ಹೀಗೆ ಮಾಡಿ..

ಗೂಗಲ್ ಸರ್ಚ್ನಲ್ಲಿ ಕಾಣಿಸುವ ಮಾಹಿತಿಯ ಕೆಳಗಿರುವ ಫೀಡ್ಬ್ಯಾಕ್ ಎಂಬ ಆಯ್ಕೆ ಕ್ಲಿಕ್ ಮಾಡಿ.

ನಂತರ ಕಾಣಿಸಿಕೊಳ್ಳುವ ಪಟ್ಟಿಯಲ್ಲಿ ಯಾವ ಕಾರಣಕ್ಕಾಗಿ ರಿಪೋರ್ಟ್ ಮಾಡುತ್ತಿರುವಿರಿ ಎಂದು ಆಯ್ಕೆ ಮಾಡಿ.

ಬಳಿಕ ಕಮೆಂಟ್ಸ್ ಅಥವಾ ಸೂಚನೆಗಳು ಎಂದಿರುವಲ್ಲಿ ನಿಮ್ಮ ಹೇಳಿಕೆ ದಾಖಲಿಸಿ, ಬಳಿಕ ಸಬ್ಮಿಟ್ ಕೊಡಿ.

ಕ್ಯಾಪ್ಚಾ ಎಂದರೇನು? ಇದನ್ನೇಕೆ ನಾವು ಬಳಸಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.