ಬೆಂಗಳೂರು: ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವ ಫೋಟೊಗಳ ಗುಣಮಟ್ಟ ಕಡಿಮೆಯಾಗುವುದು ಸಾಮಾನ್ಯ ಸಂಗತಿ. ಈ ಬಗ್ಗೆ ಬಳಕೆದಾರರು ಸದಾ ದೂರುತ್ತಲೇ ಇರುತ್ತಾರೆ. ಅಲ್ಲದೆ, ಫೋಟೊಗಳನ್ನು ಬೇಗನೆ ಹೆಚ್ಚು ಫೈಲ್ ಗಾತ್ರವಿಲ್ಲದೇ ಕಳುಹಿಸಬೇಕು ಎನ್ನುವ ಉದ್ದೇಶದಿಂದ ಈ ಕ್ರಮ ಬಳಕೆಯಲ್ಲಿದೆ.

ಆದರೆ, ಗುಣಮಟ್ಟದಲ್ಲಿ ವ್ಯತ್ಯಾಸವಾಗದೇ ಇರುವ ಫೋಟೊ ಕಳುಹಿಸಬೇಕು ಎಂದಾದರೆ, ಅದಕ್ಕೆ ಡಾಕ್ಯುಮೆಂಟ್ ಫೀಚರ್ ಬಳಸಿ, ಕಳುಹಿಸಬಹುದು.

ಅದ್ಯಾವುದರ ತೊಂದರೆ ಬೇಡ ಎನ್ನುವ ಉದ್ದೇಶದಿಂದ, ವಾಟ್ಸ್ಆ್ಯಪ್, ಮೂಲ ಫೋಟೊವನ್ನು, ಅದೇ ಫೈಲ್ ಸೈಜ್, ಗುಣಮಟ್ಟದೊಂದಿಗೆ ಕಳುಹಿಸುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ.

ಒಂದೇ ಫೋನ್ ಎರಡು ವಾಟ್ಸ್ಆ್ಯಪ್ ಬಳಸುವುದು ಹೇಗೆ?

ಈ ಬಗ್ಗೆ ವಾಟ್ಸ್ಆ್ಯಪ್ ಪರಿಶೀಲನೆ ನಡೆಸುತ್ತಿದ್ದು, ಆ್ಯಂಡ್ರಾಯ್ಡ್ ಬೀಟಾ ವಿ2.23.2.11 ರಲ್ಲಿ ಹೊಸ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆ. ಹೊಸ ಫೀಚರ್ ಮೂಲಕ, ಬಳಕೆದಾರರು ಫೋಟೊ ಕಳುಹಿಸುವಾಗ, ಅದರಲ್ಲಿ ಫೈಲ್ ಗಾತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಫೋಟೊ ಕ್ಲಾರಿಟಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಫೈಲ್ ಕಳುಹಿಸಲು ನೂತನ ಅಪ್‌ಡೇಟ್‌ನಲ್ಲಿ ಅವಕಾಶ ದೊರೆಯಲಿದೆ. ಪರೀಕ್ಷಾರ್ಥ ಬಳಕೆಯ ನಂತರ ಎಲ್ಲ ಬಳಕೆದಾರರಿಗೂ ಹೊಸ ಫೀಚರ್ ಅಪ್‌ಡೇಟ್ ಮೂಲಕ ಲಭ್ಯವಾಗಲಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ.

ವಾಟ್ಸ್ಆ್ಯಪ್ನಲ್ಲಿ ವೋಟಿಂಗ್ ಮಾಡಿ: ಪೋಲ್ ಆಯ್ಕೆ ಬಳಸುವುದು ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.