ಸ್ಟಾಕ್ ಮಾರುಕಟ್ಟೆ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದೆಂದರೆ ಅತ್ಯಂತ ಅಪಾಯದ ಕೆಲಸ ಎಂಬ ಒಂದು ಕಾಲವಿತ್ತು. ಷೇರುಗಳ ಮೌಲ್ಯದ ಏರಿಳಿತವನ್ನೆಲ್ಲ ನೆನಪಿಟ್ಟುಕೊಂಡು, ಖರೀದಿ-ಮಾರಾಟದಲ್ಲಿ ತೊಡಗಿಸಿಕೊಳ್ಳುವ ಜಾಣ್ಮೆ ಇರುವವರಿಗೆ ಸಮಯ ಹೊಂದಿಸುವುದು ತ್ರಾಸದಾಯಕ. ಸ್ವಲ್ಪ ಎಚ್ಚರ ತಪ್ಪಿದರೂ ನಷ್ಟವಾಗಬಹುದು. ಸಮಯವೆಲ್ಲವನ್ನೂ ಷೇರುಗಳ ಮೌಲ್ಯದ ಮೇಲೆಯೇ ಇರಿಸಬೇಕಾಗುತ್ತಿತ್ತು. ಆದರೀಗ, ಮೊಬೈಲ್ ಫೋನ್ - ಇಂಟರ್ನೆಟ್ ಸಂಪರ್ಕ ಬೆರಳತುದಿಯಲ್ಲೇ ಇರುವಾಗ, ಷೇರು ಮಾರುಕಟ್ಟೆ ವ್ಯವಹಾರ ತೀರಾ ಸರಳವಾಗಿಬಿಟ್ಟಿದೆ. ಷೇರುಗಳಲ್ಲಿ ಹಣ ತೊಡಗಿಸುವುದು, ಅದರ ಮೌಲ್ಯ ಹೆಚ್ಚಾದಾಗ ಮಾರುವುದು, ಕಡಿಮೆಯಾದಾಗ ಖರೀದಿಸುವುದನ್ನೆಲ್ಲ ಕ್ಷಣ ಮಾತ್ರದಲ್ಲಿ ನಿಭಾಯಿಸಿಬಿಡಬಹುದು. ನಮ್ಮ ಲಾಭ ಸಂಪಾದನೆಗೆ ತಂತ್ರಜ್ಞಾನವು ನೆರವಿಗೆ ಬಂದಿದ್ದು, ‘ಮೊಬೈಲ್ ಫೋನ್’ ಎಂಬ ಅಂಗೈಯ ಅರಮನೆಯಲ್ಲಿ ಇದಕ್ಕೆ ಪೂರಕವಾದ ಆ್ಯಪ್‌ಗಳು ನಮ್ಮ ಕೆಲಸವನ್ನು ಸುಲಭವಾಗಿಸಿವೆ.

ಹಣಕಾಸು ಕ್ಷೇತ್ರವು ಆಧುನಿಕ ತಂತ್ರಜ್ಞಾನವನ್ನು ಮಿಳಿತವಾಗಿಸಿಕೊಂಡು ಬೃಹತ್ತಾಗಿ ಬೆಳೆದಿದೆ. ಜನಸಾಮಾನ್ಯರಲ್ಲಿ ಕೂಡ ‘ಮಾರುಕಟ್ಟೆ ಬಿತ್ತು’ ಎಂಬ ಬೇಸರವೂ ‘ಮಾರ್ಕೆಟ್ ಮೇಲೇರಿತು‘ ಎಂಬ ಖುಷಿಯ ಮಾತುಗಳೂ ಕೇಳಿಬರತೊಡಗಿವೆ. ಇದಕ್ಕೆ ಕಾರಣವಾಗಿದ್ದೇ ಮೊಬೈಲ್ ಫೋನ್‌ನಲ್ಲಿರುವ ಆ್ಯಪ್‌ಗಳು. ಜನಸಾಮಾನ್ಯರು ಕೂಡ ತಮ್ಮಲ್ಲಿ ಉಳಿತಾಯವಾಗಿರುವ ಹಣವನ್ನು ಬೆಳೆಸಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವತ್ತ ಮನಸ್ಸು ಮಾಡಿದ್ದಾರೆ. ತಂತ್ರಜ್ಞಾನವನ್ನು ಬಳಸಿಯೇ ಮೋಸ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಇಲ್ಲಿ ಹಣ ತೊಡಗಿಸಿ, ಹಣವನ್ನು ಕೆಲವೇ ಕ್ಷಣಗಳಲ್ಲಿ ದುಪ್ಪಟ್ಟು ಮಾಡಿಕೊಳ್ಳಿ ಎಂಬಂಥ ಬಾಯಲ್ಲಿ ನೀರೂರಿಸುವ ಆಮಿಷಕ್ಕೆ ಮರುಳಾಗುವ ನಮ್ಮ ಖಾಸಗಿ ಮಾಹಿತಿಯನ್ನು, ಬ್ಯಾಂಕಿಂಗ್ ಪಾಸ್‌ವರ್ಡ್ ಮುಂತಾದ ಸೂಕ್ಷ್ಮ ವಿಷಯಗಳನ್ನು ಕದಿಯುವ ಆ್ಯಪ್‌ಗಳೇ ಜಾಸ್ತಿ ಇರುವ ಈ ಕಾಲದಲ್ಲಿ, ಯಾವ ಆ್ಯಪ್ ಅನ್ನು ನಂಬಬೇಕು ಎಂಬ ಕುರಿತು ಹಲವರಿಗೆ ಗೊಂದಲವಿದೆ.

ಮ್ಯೂಚುವಲ್ ಫಂಡ್‌ಗಳಲ್ಲಿ ಅಥವಾ ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್‌ನ ಆ್ಯಪ್ ಸ್ಟೋರ್‌ಗಳಲ್ಲಿ ಸಾಕಷ್ಟಿವೆ. ಅವುಗಳ ನಡುವೆ ನಕಲಿ ಅಥವಾ ಆ್ಯಪ್‌ಗಳೂ ಸೇರಿಕೊಂಡಿರಬಹುದು. ಈ ಕಾರಣಕ್ಕಾಗಿ, ಈಗಾಗಲೇ ಹಣಕಾಸು ಹೂಡಿಕೆಯಲ್ಲಿ ನಿರತರಾಗಿರುವವರೊಂದಿಗೆ ಸಮಾಲೋಚಿಸಿ, ಇಲ್ಲಿ ಕೆಲವು ಆ್ಯಪ್‌ಗಳನ್ನು ಪಟ್ಟಿ ಮಾಡಲಾಗಿದೆ.

ಪ್ರಮುಖವಾಗಿ ಕೇಳಿಬರುತ್ತಿರುವ ಆ್ಯಪ್ ಹೆಸರುಗಳೆಂದರೆ ಮೋತಿಲಾಲ್ ಓಸ್ವಾಲ್ (Motilal Oswal), ಜೆರೋಧಾ ಅವರ ಕೈಟ್ (Kite by Zerodha), ಅಪ್‌ಸ್ಟಾಕ್ಸ್ (Upstox), 5 ಪೈಸಾ (5paisa), ಏಂಜೆಲ್ ಒನ್ (Angel One), ಕೊಟಕ್ ಸೆಕ್ಯುರಿಟೀಸ್ (Kotak Securities), ಐಸಿಐಸಿಐ ಡೈರೆಕ್ಟ್ ಮಾರ್ಕೆಟ್ಸ್ ಆ್ಯಪ್ (ICICI Direct Markets App), ಟ್ರೇಡಿಂಗ್ ವ್ಯೂ (TradingView), ಐಐಎಫ್ಎಲ್ (IIFL), ಶೇರ್ ಖಾನ್ (ShareKhan), ಈಡೆಲ್ವೀಸ್ (Edelweiss), ಫೈಯರ್ಸ್ (FYERS), ಗ್ರೋ (Groww), ಅಲೀಸ್‌ಬ್ಲೂ (AliceBlue) ಮುಂತಾದವು. ಅಲ್ಲದೆ, ಬಹುತೇಕ ಎಲ್ಲ ಬ್ಯಾಂಕ್‌ಗಳು ಕೂಡ ತಮ್ಮದೇ ಆದ ಟ್ರೇಡಿಂಗ್ ಆ್ಯಪ್ ಅನ್ನು ಹೊಂದಿರುತ್ತವೆ.

ಆದರೆ ನೆನಪಿಡಿ. ಆ್ಯಪ್‌ಗಳು ಉಚಿತವಾಗಿ ಲಭ್ಯವಿದ್ದರೂ, ಅದರ ಬಳಕೆ ಸಂಪೂರ್ಣ ಉಚಿತವಾಗಿರಲಾರದು. ವಹಿವಾಟಿಗೆ ತಕ್ಕಂತೆ, ಕನಿಷ್ಠ ಬ್ರೋಕರೇಜ್ ಅಥವಾ ಕಮಿಷನ್ ಅನ್ನು ಈ ಆ್ಯಪ್‌ಗಳಿಗೂ ನೀಡಬೇಕಾಗುತ್ತದೆ. ಜೊತೆಗೆ, ಪ್ರತಿಯೊಂದು ಆ್ಯಪ್‌ಗೂ ತನ್ನದೇ ಆದ ವೈಶಿಷ್ಟ್ಯಗಳಿವೆ. ಅನುಭವ, ಹೂಡಿಕೆಯ ಗುರಿ, ವಹಿವಾಟಿನ ಅಗತ್ಯಗಳಿಗೆ ಅನುಗುಣವಾಗಿ ಈ ಆ್ಯಪ್‌ಗಳನ್ನು ರೂಪಿಸಲಾಗಿದೆ. ಕೆಲವು ಆ್ಯಪ್‌ಗಳು ವಾರ್ಷಿಕ ಶುಲ್ಕವನ್ನು ಅಥವಾ ವಹಿವಾಟಿಗೆ ತಕ್ಕಂತೆ ಸೇವಾಶುಲ್ಕವನ್ನೂ ಯಾಚಿಸುತ್ತವೆ.

ದಿನದ ವೇಳೆ ಕುಳಿತಲ್ಲೇ ವಹಿವಾಟು (ಷೇರುಗಳ ಮಾರಾಟ, ಖರೀದಿ) ನಡೆಸಲು (ಇಂಟ್ರಾ ಡೇ) ನಿರ್ದಿಷ್ಟ ಶುಲ್ಕ (ಹೆಚ್ಚಿನವು ₹20, ಕೆಲವು ಆ್ಯಪ್‌ಗಳಲ್ಲಿ ಉಚಿತ) ವಿಧಿಸುತ್ತವೆ. ಅದೇ ರೀತಿ, ದೀರ್ಘಕಾಲಿಕ ಹೂಡಿಕೆಗೆ ಕೂಡ ಇಂತಿಷ್ಟು ಎಂದು ಕಮಿಷನ್ ಇರುತ್ತದೆ. ಈ ಆ್ಯಪ್‌ಗಳಲ್ಲಿ ಸೈನ್ ಇನ್ ಆಗಿ, ಡಿಮ್ಯಾಟ್ ಖಾತೆ ತೆರೆಯಲು ಸುಮಾರು ₹200ರಿಂದ ₹400ರವರೆಗೆ ಆರಂಭಿಕ ಶುಲ್ಕವನ್ನೂ ಕೆಲವು ಆ್ಯಪ್‌ಗಳು ವಿಧಿಸಬಹುದು (ಷೇರು ವಹಿವಾಟಿಗೆ ಡಿಮ್ಯಾಟ್ ಖಾತೆ ಇರುವುದು ಕಡ್ಡಾಯ; ಕೆಲವು ಬ್ಯಾಂಕುಗಳು ಉಚಿತವಾಗಿ ಮಾಡಿಕೊಡುತ್ತವೆ). ಕೆಲವು ಆ್ಯಪ್‌ಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಶುಲ್ಕ ಇರುವುದಿಲ್ಲ. ಮತ್ತೆ ಕೆಲವು ಆ್ಯಪ್‌ಗಳು, ಹೂಡಿಕೆದಾರರ ವಾರ್ಷಿಕ ಲಾಭಾಂಶ ಶೇ.10 ದಾಟಿದರಷ್ಟೇ ಶೇ.0.5ರಿಂದ ಶೇ.1ರಷ್ಟು ಕಮಿಷನ್ ಪಡೆಯುತ್ತವೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಲಾಭ ಮಾಡುವುದನ್ನು ನಿಧಾನವಾಗಿ ಕಲಿತುಕೊಂಡ ಬಳಿಕ, ಈ ಶುಲ್ಕಗಳೆಲ್ಲ ನಗಣ್ಯ ಎನ್ನಿಸಬಹುದು.

ಈ ಸ್ಟಾಕ್ ಟ್ರೇಡಿಂಗ್ ಆ್ಯಪ್‌ಗಳ ಮತ್ತೊಂದು ದೊಡ್ಡ ಅನುಕೂಲವೆಂದರೆ, ಯಾವ ಷೇರಿನ ಮೌಲ್ಯ ಇಳಿಕೆಯಾಯಿತು, ಯಾವುದರ ಮೌಲ್ಯ ಏರಿಕೆಯಾಯಿತು ಎಂದು ಆ ಕ್ಷಣದಲ್ಲೇ ತೋರಿಸುತ್ತವೆ. ಇಷ್ಟೇ ಅಲ್ಲ, ನಾವು ಯಾವುದರಲ್ಲಿ ಹೂಡಿಕೆ ಮಾಡಬಹುದು, ಯಾವಾಗ ಷೇರು ಮಾರಾಟ ಮಾಡಬಹುದು, ಯಾವಾಗ ಯಾವುದನ್ನು ಖರೀದಿಸಬಹುದು ಮುಂತಾಗಿ ತಜ್ಞಸಲಹೆಯನ್ನೂ ನೀಡುತ್ತವೆ. ಹೀಗೆ, ಷೇರು ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟವರನ್ನೂ ಮುನ್ನಡೆಸಿ, ತಾವೂ ಬೆಳೆಯುವ ಕೆಲಸವನ್ನು ಈ ಆ್ಯಪ್‌ಗಳು ಮಾಡುತ್ತವೆ.

ಆದರೆ, ಷೇರು ವಹಿವಾಟಿಗೆ ಸಂಬಂಧಿಸಿ ಮೂರು ಗಮನಿಸಲೇಬೇಕಾದ ವಿಚಾರಗಳಿವೆ:

1. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ‘ರಿಸ್ಕ್’ ಇದೆ. ಯೋಚನೆ ಮಾಡಿ ಹೂಡಿಕೆ ಮಾಡಬೇಕು.
2. ಒಂದೇ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಬಾರದು (ಎಂದರೆ ಷೇರುಗಳನ್ನು ಖರೀದಿಸಬಾರದು). ವಿಭಿನ್ನ ಕಂಪನಿಗಳ ಷೇರುಗಳನ್ನು ಖರೀದಿಸಿದರೆ, ಒಂದರಲ್ಲಿ ನಷ್ಟವಾದರೂ, ಮತ್ತೊಂದರಲ್ಲಿ ಲಾಭ ದೊರೆಯಬಹುದು.
3. ದಿಢೀರ್ ಲಾಭ ನಿರೀಕ್ಷಿಸದೆ, ತಾಳ್ಮೆಯಿಂದ ಕಾಯಬೇಕಾಗುತ್ತದೆ. ವ್ಯವಸ್ಥಿತವಾಗಿ ಹಂತಹಂತವಾಗಿ ಹೂಡಿಕೆ ಹೆಚ್ಚಿಸುತ್ತಾ ಜಾಣ್ಮೆಯಿಂದ ಆದಾಯ ಹೆಚ್ಚಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.