ಒಟಿಟಿ ಸೇವೆ ನೀಡುವ ನೆಟ್‌ಫ್ಲಿಕ್ಸ್ ಕೆಲವೊಂದು ಬಳಕೆದಾರರಿಗೆ ಮೆಸೇಜ್ ಕಳುಹಿಸಿ, ಅವರು ಇತರರೊಡನೆ ಪಾಸ್‌ವರ್ಡ್ ಮತ್ತು ಖಾತೆ ವಿವರವನ್ನು ಹಂಚಿಕೊಂಡಿದ್ದಾರೆಯೇ ಎಂದು ಪರಿಶೀಲಿಸುತ್ತಿದೆ. ನೆಟ್‌ಫ್ಲಿಕ್ಸ್ ಒಂದೇ ಖಾತೆಯನ್ನು ಹಲವರು ಬಳಸುತ್ತಿದ್ದು, ಆ ಬಗ್ಗೆ ದೃಢಪಡಿಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದೆ.

ನೆಟ್‌ಫ್ಲಿಕ್ಸ್ ಖಾತೆ ಹೊಂದಿರುವವರಿಗೆ ಮೆಸೇಜ್ ಇಲ್ಲವೇ ಇ ಮೇಲ್ ಕಳುಹಿಸಿ, ಅದರಲ್ಲಿ ಖಾತೆದಾರರ ವಿವರ ಭರ್ತಿ ಮಾಡುವಂತೆ ಸಂಸ್ಥೆ ಕೆಲವು ಬಳಕೆದಾರರನ್ನು ಕೋರುತ್ತಿದೆ.

ಬಳಕೆದಾರರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸಿ ವೀಕ್ಷಣೆ ಮುಂದುವರಿಸಬಹುದಾದರೂ, ಮತ್ತೊಮ್ಮೆ ನೆಟ್‌ಫ್ಲಿಕ್ಸ್ ತೆರೆದಾಗ ಸಂದೇಶ ಕಾಣಿಸಬಹುದು. ಹೀಗಾಗಿ ಅಲ್ಲಿ ಲಾಗಿನ್ ಆಗಬೇಕಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್‌ಫ್ಲಿಕ್ಸ್ ವಕ್ತಾರರು, ನೆಟ್‌ಫ್ಲಿಕ್ಸ್ ಖಾತೆದಾರರ ವಿವರ ದೃಢಪಡಿಸಿಕೊಳ್ಳಲು ಮತ್ತು ಅಧಿಕೃತವಾಗಿರುವುದನ್ನು ಪರಿಶೀಲಿಸಲು ಈ ಕ್ರಮ ಎಂದಿದ್ದಾರೆ.

ಜಗತ್ತಿನ ಅತಿ ದೊಡ್ಡ ಸ್ಟ್ರೀಮಿಂಗ್ ಸೇವಾದಾರ ಸಂಸ್ಥೆ ನೆಟ್‌ಫ್ಲಿಕ್ಸ್, ಸದಾ ಹೊಸ ಹೊಸ ಫೀಚರ್‌ಗಳನ್ನು ಪರಿಶೀಲಿಸುತ್ತಿರುತ್ತದೆ. ಅಲ್ಲದೆ, ಮುಂದೆ ಖಾತೆದಾರರ ವಿವರ ದೃಢೀಕರಣವನ್ನು ಎಲ್ಲ ಬಳಕೆದಾರರಿಗೂ ವಿಸ್ತರಿಸುವ ಸಾಧ್ಯತೆಯಿದೆ.

ಜತೆಗೆ ಬಳಕೆದಾರರು ಒಂದೇ ಮನೆಯಲ್ಲಿದ್ದರೆ ಮಾತ್ರ, ಅಕೌಂಟ್ ಮತ್ತು ಪಾಸ್‌ವರ್ಡ್ ಹಂಚಿಕೊಳ್ಳಬಹುದು ಎಂದು ನೆಟ್‌ಫ್ಲಿಕ್ಸ್ ನಿಯಮಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.