ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಅನೇಕ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಕೋರ್ಟ್ ಆದೇಶದಂತೆ ಆರೋಪಿಗಳು ಎನ್ಸಿಬಿ ಕಚೇರಿಗೆ ತೆರಳಿ ಸಹಿ ಹಾಕಬೇಕಿದೆ. ಆದರಂತೆ ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಕೂಡ ನ.26 ರಂದು (ಶುಕ್ರವಾರ) ಎನ್ಸಿಬಿ ಕಚೇರಿಗೆ ಬಂದಿದ್ದರು.

ವಿಚಾರಣೆ ಮುಗಿಸಿ ಹೊರಬಂದ ಅರ್ಬಾಜ್ ಮರ್ಚೆಂಟ್ರನ್ನು ತಂದೆ ಅಸ್ಲಂ ಮರ್ಚೆಂಟ್ ತಡೆದು ಮಾಧ್ಯಮಗಳ ಕ್ಯಾಮೆರಾಗೆ ಪೋಸ್ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಅರ್ಬಾಜ್ ‘ಸ್ಟಾಪ್ ಇಟ್’ ಎಂದು ಪ್ರತಿರೋಧ ವ್ಯಕ್ತಪಡಿಸಿ ಕಾರನತ್ತ ಹೊರಟು ಹೋಗುತ್ತಾರೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಗೆಪಾಟಲಿಗೀಡಾಗಿದೆ. ಈ ವಿಡಿಯೊಗೆ ಅನೇಕರು ಕಾಮೆಂಟ್ ಮಾಡಿದ್ದು, ವ್ಯಂಗ್ಯವಾಡಿದ್ದಾರೆ.

‘ಇದು ಅರ್ಬಾಜ್ ಮರ್ಚೆಂಟ್ ಅವರ ತಂದೆ ಅಜ್ಞಾನಿ ಎಂಬುದನ್ನು ತೋರಿಸುತ್ತದೆ. ಅಪರಾಧಿ ಮತ್ತು ನಿರಪರಾಧಿಯ ನಡುವಿನ ವ್ಯತ್ಯಾಸ ಗುರುತಿಸಲು ಅವರಿಂದ ಸಾಧ್ಯವಾಗುತ್ತಿಲ್ಲ’ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

‘ನಾಚಿಕೆಯಿಲ್ಲದ ತಂದೆ ಹಣದಿಂದ ಕುರುಡನಾಗಿ ಅನಕ್ಷರಸ್ಥನಂತೆ ವರ್ತಿಸುತ್ತಿರುವುದನ್ನು ನೋಡಿದರೆ ಆತನ ಮಗನೇ ಸ್ವಲ್ಪ ಬುದ್ಧಿವಂತ ಎನ್ನಿಸುತ್ತದೆ’ ಎಂದು ಪ್ರವೀಣ್ ಟ್ವೀಟ್ ಮಾಡಿದ್ದಾರೆ.

ಮುಂಬೈನ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಸೇರಿದಂತೆ ಸುಮಾರು 20 ಜನರನ್ನು ಮಾದಕ ಪದಾರ್ಥ ನಿಯಂತ್ರಣ ಘಟಕದ (ಎನ್ಸಿಬಿ) ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಇದನ್ನೂ ಓದಿ... ಡಗ್ಸ್ ಪ್ರಕರಣ: 22 ದಿನಗಳ ಬಳಿಕ ಜೈಲಿನಿಂದ ಆರ್ಯನ್ ಖಾನ್ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.