ಒಂದು ಕೈಯಲ್ಲಿ ಕೋಳಿ ಮರಿ, ಮತ್ತೊಂದು ಕೈಯಲ್ಲಿ ₹10. ಆತಂಕ, ಮುಗ್ದತೆ, ಕರುಣೆ ಎಲ್ಲವೂ ಮನೆ ಮಾಡಿರುವ ಪುಟಾಣಿಯ ಕಂಗಳು ’ಹೇಗದರೂ ಮಾಡಿ ಈ ಮರಿಯನ್ನು ಉಳಿಸಿಕೊಡಿ...’ ಎಂದು ಕೂಗುತ್ತಿರುವಂತಿವೆ. ಮಿಜೋರಾಂನ ಈ ಹುಡುಗನ ಫೋಟೊ ಕಂಡಿರುವ ನೆಟಿಜನ್‌ಗಳು ಪರವಶರಾಗಿದ್ದಾರೆ.

ಮನೆಯ ಬಳಿ ಬೈಸಿಕಲ್ ತುಳಿಯುತ್ತಿದ್ದ 6 ವರ್ಷದ ಡೆರಿಕ್ ಸಿ ಲಾಲ್‌ಛಾನ್ಹಿಮಾ, ಅಚಾನಕ್ ಅಡ್ಡ ಬಂದ ಕೋಳಿ ಮರಿಯ ಮೇಲೆ ಚಕ್ರ ಹತ್ತಿಸಿಬಿಟ್ಟ. ಗೊತ್ತಿಲ್ಲದಂತೆ ಆದ ಅನಾಹುತವನ್ನು ಕಂಡು ಗಾಬರಿಯಾದ ಪುಟಾಣಿ ತಪ್ಪಿಸಿಕೊಂಡು ಓಡಿ ಹೋಗಲಿಲ್ಲ... ’ಅಯ್ಯೋ ಪಾಪ, ಪುಟಾಣಿ ಮರಿಗೆ ಗಾಯ ಮಾಡಿಬಿಟ್ಟೆ...ನಂಗೆ ಗೊತ್ತಾಗ್ಲೇ ಇಲ್ಲ’ ಎಂದು ಕೋಳಿ ಮರಿಯನ್ನು ಜೋಪಾನವಾಗಿ ಎತ್ತಿಕೊಂಡು ಮನೆಯೊಳಗೆ ಓಡಿದ್ದ. ’ಅಪ್ಪಾ...ಅಪ್ಪಾ...ಬೇಗ ಬಾ...ಅಪ್ಪಾ..’ ಕೂಗುತ್ತ ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಾಯಿಸಿದ. ಅಪ್ಪ, ಮಗನಿಗೆ ಏನು ಹೇಳುವುದೆಂದು ಹೊಳೆಯದೇ ತಟಸ್ಥನಾಗಿದ್ದ. ಏಕೆಂದರೆ, ಅಪ್ಪನಿಗೆ ಮಗನ ಕೈಗಳಲ್ಲಿ ಮಲಗಿರುವುದು ಸತ್ತ ಕೋಳಿ ಮರಿಯಷ್ಟೇ!

ಎರಡು ದಿನಗಳಿಂದ ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ಫೋಟೊವನ್ನು 85 ಸಾವಿರ ಜನರು ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ. ಸಂಗಾ ಸೇಸ್ ಎಂಬ ಫೇಸ್‌ಬುಕ್ ಪುಟದಲ್ಲಿ ಈ ಚಿತ್ರವನ್ನು ಪ್ರಕಟಿಸಿಕೊಳ್ಳಲಾಗಿದೆ. ಪುಟಾಣಿಯ ತಂದೆ ಘಟನೆಯ ಕುರಿತು ಹೇಳಿ, ಚಿತ್ರವನ್ನು ಹಂಚಿಕೊಂಡರೆಂದು ಸಂಗಾ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.

ತನ್ನ ಬೈಸಿಕಲ್ ಹರಿದು ಚಲನೆಯನ್ನೇ ನಿಲ್ಲಿಸಿಕೊಂಡ ಕೋಳಿ ಮರಿಯನ್ನು ಹೊತ್ತು ಮನೆಯೊಳಗೆ ಬಂದಿದ್ದ ಪುಟಾಣಿಗೆ ಆ ಮರಿ ಬದುಕಿಲ್ಲ ಎಂಬ ಅರಿವು ಇರಲಿಲ್ಲ. ’ಆಸ್ಪತ್ರೆಗೆ ಹೋಗೋಣ ಬನ್ನಿ..ಬನ್ನಿ...’ ಎಂದು ಅಪ್ಪ–ಅಮ್ಮನ ಮುಂದೆ ಗೋಗರೆಯುತ್ತಿದ್ದ. ಪಾಲಕರು ಎಷ್ಟೇ ಸಂತೈಸಿದರೂ ಕೇಳದ ಪುಟಾಣಿಗೆ ಅವನ ತಂದೆ, ’ಸರಿ, ನೀನೇ ಆಸ್ಪತ್ರೆಗೆ ತೆಗೆದುಕೊಂಡು ಹೋಗು’ ಎಂದುಬಿಟ್ಟರು. ಸಿಕ್ಕಲ್ಲೆಲ್ಲ ಹುಡುಕಾಡಿ ₹10 ತೆಗೆದುಕೊಂಡು, ಕೋಳಿ ಮರಿಯನ್ನೂ ಭದ್ರವಾಗಿ ಹಿಡಿದು ಆಸ್ಪತ್ರೆಗೆ ಹೊರಟೇ ಬಿಟ್ಟ.

‘ಈ ಮರಿಗೆ ಏನಾಗಿದೆ ನೋಡಿ..ಚಿಕಿತ್ಸೆ ಕೊಡಿ..’ ಎಂದು ಆಸ್ಪತ್ರೆಯಲ್ಲಿ ಪುಟಾಣಿ ಓಡಾಡುತ್ತಿದ್ದ. ಬಾಲಕ ಮುಗ್ದತೆ ಮತ್ತು ಮಾನವಿಯತೆಯನ್ನು ಕಂಡು ನರ್ಸ್ ಒಬ್ಬರು ಕಣ್ಣೀರಾದರು. ಅವರೇ ಕ್ಲಿಕ್ಕಿಸಿದ ಫೋಟೊ ಈಗ ಎಲ್ಲೆಡೆ ಹಂಚಿಕೆಯಾಗುತ್ತಿದೆ. ಕೋಳಿ ಮರಿಗೆ ಚಿಕಿತ್ಸೆ ಸಿಗದೆ ಬಿಕ್ಕಿಬಿಕ್ಕಿ ಅಳುತ್ತಲೇ ಆಸ್ಪತ್ರೆಯಿಂದ ಮನೆಗೆ ಬಂದ ಪುಟಾಣಿ, ಹೇಗಾದರೂ ಮಾಡಿ ಅದನ್ನು ಗುಣಪಡಿಸಲೇಬೇಕು ಎಂದು ತೀರ್ಮಾನಿಸಿದ್ದ. ಅಳುವುದನ್ನು ನಿಯಂತ್ರಿಸಿಕೊಂಡು ಮನೆಯಿಂದ ಮತ್ತೆ ಆಸ್ಪತ್ರೆ ಕಡೆಗೆ ನಡೆದ, ಈ ಬಾರಿ ಒಂದು ಕೈಯಲ್ಲಿ ಕೋಳಿ ಮರಿ, ಮತ್ತೊಂದು ಕೈಯಲ್ಲಿ ₹100 ಹಿಡಿದು.

ಅಂತಿಮವಾಗಿ ಪಾಲಕರಿಗೆ ಸತ್ಯ ಹೇಳದೆ ಬೇರೆ ವಿಧಿಯಿಲ್ಲ. ’ಕೋಳಿ ಮರಿ ಈಗ ಬದುಕಿಲ್ಲ, ಆಸ್ಪತ್ರೆಯಲ್ಲಿ ಯಾರೂ ಏನೂ ಮಾಡಲು ಆಗುವುದಿಲ್ಲ. ಅದು ಸತ್ತು ಹೋಗಿದೆ’ ಎಂದು ಪುಟಾಣಿಗೆ ನಿಧಾನವಾಗಿ ವಿವರಿಸಲು ಪ್ರಯತ್ನಿಸಿದರು.

ನೆಟಿಜನ್‌ಗಳು ಪುಟಾಣಿಯ ಮುಗ್ಧ ಮನಸು ಕಂಡು, ತಮ್ಮ ಮನಸನ್ನು ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಿದ್ದಾರೆ. ಮನಸಿಗೆ ನಾಟಿರುವ ಈ ಚಿತ್ರಕ್ಕೆ ಬಂದಿರುವ ಸಾವಿರಾರು ಕಮೆಂಟ್‌ಗಳಲ್ಲಿ ಮನುಷ್ಯತ್ವದ ಮೂಲ ಗುಣದ ದೊಡ್ಡ ಚರ್ಚೆಯೇ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.