ಬೆಂಗಳೂರು: ದೇಶದಲ್ಲಿ ಮದ್ಯ ಮಾರಾಟಕ್ಕೆ ಆಧಾರ್ ಕಾರ್ಡ್ ಬಳಕೆ ಮಾಡಬೇಕು ಮತ್ತು ಮದ್ಯ ಕೊಳ್ಳುವವರಿಗೆ ಸರ್ಕಾರದ ಆಹಾರ, ಸಬ್ಸಿಡಿ ರದ್ದುಪಡಿಸಬೇಕು ಎಂಬ ಹೇಳಿಕೆಯನ್ನು ನಾನು ಯಾವತ್ತೂ ನೀಡಿಲ್ಲ ಎಂದು ಉದ್ಯಮಿ ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.

ರತನ್ ಟಾಟಾ ಅವರ ಹೆಸರಿನಲ್ಲಿ ಸಾಮಾಜಿಕ ತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದ್ದು, ಅದರಲ್ಲಿ, ಮದ್ಯ ಖರೀದಿಸುವವರಿಗೆ ಸರ್ಕಾರದ ಆಹಾರ ಸಬ್ಸಿಡಿ ಸ್ಥಗಿತಗೊಳಿಸಬೇಕು ಎಂಬ ಹೇಳಿಕೆಯಿದೆ. ಅಲ್ಲದೆ, ಯಾರಿಗೆ ಮದ್ಯ ಕೊಳ್ಳುವ ಸಾಮರ್ಥ್ಯವಿದೆಯೋ, ಅವರು ಖಂಡಿತವಾಗಿಯೂ ಆಹಾರ ಖರೀದಿಸಲು ಸಮರ್ಥರಿರುತ್ತಾರೆ ಎಂದು ರತನ್ ಟಾಟಾ ಅವರು ಹೇಳಿದ್ದಾರೆ ಎಂದು ಬಿಂಬಿಸಲಾಗಿದೆ.

ಆದರೆ, ಈ ಸಂದೇಶ ಮತ್ತು ಫೋಟೊ ನಕಲಿಯಾಗಿದ್ದು, ಅಂತಹ ಯಾವುದೇ ಹೇಳಿಕೆ ನಾನು ನೀಡಿಲ್ಲ ಎಂದು ಸ್ವತಃ ರತನ್ ಟಾಟಾ ಅವರೇ ಸ್ಪಷ್ಟಪಡಿಸಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರೀಸ್‌ನಲ್ಲಿ ಟಾಟಾ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ಜತೆಗೆ ಇದೊಂದು ಸುಳ್ಳು ಸುದ್ದಿ ಎಂದು ಕೂಡ ಟಾಟಾ ಅವರು ಹೇಳಿದ್ದಾರೆ.

ಇದು ಚಿನ್ನದ ವಡಾ ಪಾವ್! ಬೆಲೆ ಎಷ್ಟು ಗೊತ್ತಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.