ಕೀವ್: ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.

‘ರಷ್ಯನ್ನರ ಸಂಪೂರ್ಣ ಅರ್ಥಹೀನ ದಾಳಿಯ ನಂತರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವು ಸುರಕ್ಷಿತವಾಗಿದೆ ಎಂದು ಹೇಳುವುದು ಅಸಾಧ್ಯ’ಎಂದು ಅವರು ಹೇಳಿದ್ದಾರೆ.

‘ಇದು ಯುರೋಪಿಗೆ ಸದ್ಯ ಅತ್ಯಂತ ಗಂಭೀರ ಆತಂಕವಾಗಿದೆ’ಎಂದು ಅವರು ಹೇಳಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ರಾಷ್ಟ್ರವೊಂದರ ಮೇಲೆ ನಡೆದ ಅತಿದೊಡ್ಡ ದಾಳಿ ಇದಾಗಿದ್ದು, ನೌಕಾ ದಳ, ವಾಯು ಸೇನೆ ಮತ್ತು ಭೂಸೇನೆ ಮೂರು ಮಾರ್ಗಗಳ ಮೂಲಕ ದಾಳಿ ನಡೆಸಿದ ನಂತರ ರಷ್ಯಾದ ಪಡೆಗಳು ವಿದ್ಯುತ್ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡವು.

ರಷ್ಯಾದ ಕೆಲವು ಮಿಲಿಟರಿ ಪಡೆಗಳು ಗುರುವಾರ ಮುಂಜಾನೆ ಉಕ್ರೇನ್ ಗಡಿ ದಾಟುವ ಮೊದಲೇ ಚೆರ್ನೋಬಿಲ್‌ನಲ್ಲಿ ಜಮಾವಣೆ ಆಗಿದ್ದವು ಎಂದು ರಷ್ಯಾದ ಭದ್ರತಾ ಮೂಲವು ತಿಳಿಸಿದೆ.

ನ್ಯಾಟೊಗೆ ಮಿಲಿಟರಿ ಹಸ್ತಕ್ಷೇಪ ಮಾಡದಂತೆ ಸೂಚಿಸಲು ಚೆರ್ನೋಬಿಲ್ ಪರಮಾಣು ರಿಯಾಕ್ಟರ್ ಅನ್ನು ನಿಯಂತ್ರಿಸಲು ರಷ್ಯಾ ಬಯಸಿದೆ ಎಂದು ಅದೇ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.