ವಾಷಿಂಗ್ಟನ್: ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ವೀಸಾ ಮತ್ತು ಮಾಸ್ಟರ್‌ಕಾರ್ಡ್ ನಿರ್ಧಾರಗಳನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸ್ವಾಗತಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗಿನ ದೂರವಾಣಿ ಸಂಭಾಷಣೆ ವೇಳೆ ಈ ವಿಚಾರ ಮಾತನಾಡಿದ್ದಾರೆ ಎಂದು ಶ್ವೇತಭವನ ಶನಿವಾರ ತಿಳಿಸಿದೆ.

'ಯುದ್ಧ ಪೀಡಿತ ಉಕ್ರೇನ್‌ಗೆ ಭದ್ರತೆ, ಮಾನವೀಯ ಮತ್ತು ಆರ್ಥಿಕ ನೆರವನ್ನು ಹೆಚ್ಚಿಸಲು ಬೈಡೆನ್ ಅವರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ' ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ವೀಸಾ ಮತ್ತು ಮಾಸ್ಟರ್‌ಕಾರ್ಡ್ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಶನಿವಾರ ಘೋಷಿಸಿವೆ. ಅಮೆರಿಕದ ಪ್ರಮುಖ ಸಂಸ್ಥೆಗಳು ಕೈಗೊಂಡಿರುವ ಈ ನಿರ್ಧಾರ ರಷ್ಯಾ ಮೇಲೆ ಹೇರಿರುವ ನಿರ್ಬಂಧಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ತೀವ್ರ ಸ್ವರೂಪ ಮತ್ತು ಅನಿಶ್ಚಿತ ಆರ್ಥಿಕ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು 'ರಷ್ಯಾದಲ್ಲಿ ನಮ್ಮ ನೆಟ್‌ವರ್ಕ್ ಸೇವೆಗಳನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ' ಎಂದು ಮಾಸ್ಟರ್‌ಕಾರ್ಡ್ ಘೋಷಿಸಿದೆ.

ವೀಸಾ ಕೂಡ ಇದೇ ದಾರಿಯನ್ನು ಅನುಸರಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ತನ್ನ ಸೇವೆಗಳನ್ನು ನಿಷೇಧಿಸಿರುವುದಾಗಿ ಹೇಳಿದೆ. 'ಮುಂಬರುವ ದಿನಗಳಲ್ಲಿ ಎಲ್ಲಾ ವೀಸಾ ವಹಿವಾಟುಗಳನ್ನು ನಿಲ್ಲಿಸಲು ರಷ್ಯಾದೊಳಗಿನ ತನ್ನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುವುದಾಗಿ' ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.