ಎಷ್ಟೋ ಸಲ ಒಳ್ಳೆಯ ಮಾತು, ಬೋಧನೆ, ಪ್ರವಚನ ಪರಿಣಾಮ ಬೀರದೆಯೂ ಇರಬಹುದು. ಆದರೆ ಒಂದೇ ಒಂದು ಚುಚ್ಚುಮಾತು ದೊಡ್ಡ ಬದಲಾವಣೆಯನ್ನೇ ತರಬಹುದು. ಪ್ರತಿ ಚುನಾವಣೆ ಸಮಯದಲ್ಲಿ ಮತದಾನ ಹೆಚ್ಚಳ ಮತ್ತು ನಿಷ್ಪಕ್ಷಪಾತ ಮತ್ತು ನಿರ್ಭೀತ ವಾತಾವರಣ ಸೃಷ್ಟಿಗೆ ಚುನಾವಣಾ ಆಯೋಗವು ಹಲವು ಬಗೆಯ ಕಸರತ್ತುಗಳನ್ನು ಮಾಡುತ್ತದೆ. ಅದರ ಮತ್ತೊಂದು ಭಾಗ ವ್ಯಂಗ್ಯಚಿತ್ರಗಳ ಬಳಕೆ.

ವ್ಯಂಗ್ಯಭರಿತ ಚಿತ್ರಗಳು ತತ್‌ಕ್ಷಣಕ್ಕೆ ಮುಖದ ಮೇಲೆ ನಗೆ ತರಿಸುತ್ತವೆ. ತನ್ನ ಡೊಂಕುರೇಖೆಗಳಿಂದ ವಿಷಯದ ಮಗ್ಗಲುಗಳನ್ನು ಅನಾವರಣ ಮಾಡುತ್ತವೆ. ಮನಸ್ಸಿಗೆ ಆಳವಾಗಿ ನಾಟುವ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುತ್ತವೆ. ಜನರಲ್ಲಿ ಅರಿವು ಮೂಡಿಸಲು ವ್ಯಂಗ್ಯಚಿತ್ರವೂ ಪ್ರಬಲ ಮಾಧ್ಯಮವಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಡಿಜಿಟಲ್ ರೂಪದಲ್ಲಿ ಅಥವಾ ಮುದ್ರಣ ಮಾಧ್ಯಮದಲ್ಲಿ ವ್ಯವಸ್ಥಿತವಾಗಿ ಇರಿಸಿ, ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಚುನಾವಣಾ ಆಯೋಗವು ಅರ್ಹ ಮತದಾರರು ಮತದಾನ ಮಾಡುವಂತೆ ಪ್ರೇರೇಪಿಸಲು ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು, ಮತದಾನದ ಮಹತ್ವ ಸಾರುವ ವ್ಯಂಗ್ಯಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿಭಿನ್ನವಾಗಿ ಯೋಚಿಸಿ ವ್ಯಂಗ್ಯಚಿತ್ರ ರಚಿಸುವ ವ್ಯಂಗ್ಯಚಿತ್ರಕಾರರ ಕೌಶಲ, ಚಾಕಚಕ್ಯತೆಯನ್ನು ಮೆಚ್ಚಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.