ಖಾದಿ ಬಟ್ಟೆ ಮಹಿಳೆಯರು ರಾಷ್ಟ್ರೀಯ ಹಬ್ಬಕ್ಕಾಗಿ ಉಡುವ ಸೀರೆಯಾಗಿತ್ತು. ರಾಜಕಾರಣಿಗಳು ತೊಡುವ ಗರಿ ಗರಿ ಬಟ್ಟೆಯಾಗಿತ್ತು. ಉಳಿದಂತೆ, ಸ್ವಾತಂತ್ರ್ಯ ಹೋರಾಟಗಾರರೋ, ಗಾಂಧಿವಾದಿಗಳು ಈ ಬಟ್ಟೆ ಧರಿಸುತ್ತಿದ್ದರು ಎಂಬ ಮಾತಿತ್ತು.

ಈಗ ಅದೆಲ್ಲ ಹಳೆಯ ಮಾತಾಯಿತು. ಪ್ರಸ್ತುತ ಖಾದಿ ವಸ್ತ್ರ ಫ್ಯಾಷನ್ ಲೋಕದಲ್ಲೂ ಟ್ರೆಂಡ್ ಸೃಷ್ಟಿಮಾಡುತ್ತಿದೆ. ಕಾಲೇಜು ಯುವತಿಯರು, ಮಹಿಳಾ ರಾಜಕಾರಣಿಗಳು, ಸೆಲೆಬ್ರಟಿ ನಟಿಯರಿಗೂ ಖಾದಿ ವಸ್ತ್ರಗಳು ಅಚ್ಚುಮೆಚ್ಚಾಗುತ್ತಿದೆ. ‘ಮೇಡ್ ಇನ್ ಚೀನಾ‘ ಉತ್ಪನ್ನಗಳನ್ನು ಬಹಿಷ್ಕರಿಸಲು ಹೊರಟಿರುವ ಈ ಹೊತ್ತಿನಲ್ಲಿ ದೇಶದ ಸ್ವಾಭಿಮಾನದ ಸಂಕೇತವಾಗಿರುವ ಖಾದಿಯನ್ನು ವಸ್ತ್ರ ವಿನ್ಯಾಸಕಾರರು ನವ ನವೀನ ಡಿಸೈನ್ ಮೂಲಕ ಮುನ್ನೆಲೆಗೆ ತರುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಖಾದಿಯಲ್ಲಿ ಖಾದಿಯಲ್ಲಿ ಕುರ್ತಾ, ಟಾಪ್, ಸ್ಕರ್ಟ್, ದುಪ್ಪಟ್ಟಾ ಹೀಗೆ ಆಧುನಿಕ ವಿನ್ಯಾಸಗಳು ಬಂದಿವೆ. ಫ್ಯಾಷನ್‌ಪ್ರಿಯರಿಗೆ ಹತ್ತಿರವಾಗಿವೆ.

ಫ್ಯಾಷನ್‌ನಲ್ಲಿ ಹೊಸ ಹೆಜ್ಜೆ

ಖಾದಿ ವಸ್ತ್ರ ಎನ್ನುವುದು ಎಲ್ಲ ಕ್ಷೇತ್ರದ ಮಹಿಳೆಯರಿಗೂ ಆಪ್ತವಾಗಬೇಕು ಎಂಬ ನಿಟ್ಟಿನಲ್ಲಿ ಸೆಲೆಬ್ರಟಿ ವಸ್ತ್ರವಿನ್ಯಾಸಕಿ ಬೆಂಗಳೂರಿನ ಜಯನಗರದ ವರ್ಧಾನ್ ಕ್ರಿಯೇಶನ್ಸ್‌ನ ಪಿ.ಜೆ. ನಿವೇದಿತಾ, ಖಾದಿ ಡಿಸೈನರ್ ರವಿಕೆಗಳನ್ನು ಈಗ ಪರಿಚಯಿಸಿದ್ದಾರೆ.

ರೇಷ್ಮೆ ಸೀರೆಗಳಿಗೆ ಮುತ್ತು, ಕುಂದನ್, ಜರ್ದೋಸಿ ವರ್ಕ್‌ಗಳಿಂದ ಡಿಸೈನರ್ ರವಿಕೆ ಹೊಲಿಸಿಕೊಳ್ಳುವುದು ಫ್ಯಾಷನ್. ಇತ್ತೀಚೆಗೆ ಸೀರೆಗಿಂತ ರವಿಕೆಗಳ ವಿನ್ಯಾಸಗಳೇ ಕಣ್ಸೆಳೆಯುವಂತಿರುತ್ತವೆ. ರೇಷ್ಮೆ ಸೀರೆಯ ಡಿಸೈನರ್ ರವಿಕೆ ಟ್ರೆಂಡ್‌ನ್ನು ಖಾದಿಗೆ ವರ್ಗಾಯಿಸಿದ್ದಾರೆ ನಿವೇದಿತಾ.ಸೆಲೆಬ್ರಟಿಗಳ ಮೂಲಕವೇ ಖಾದಿ ಡಿಸೈನರ್ ಬ್ಲೌಸ್‌ಗಳನ್ನು ಜನಪ್ರಿಯಗೊಳಿಸುವ ಆಲೋಚನೆ ಅವರದು.

ಈ ಬ್ಲೌಸ್ ವಿನ್ಯಾಸ ಮಾಡುವಾಗ ಬ್ಲೌಸ್ ಬೆನ್ನಿನ ಭಾಗ ಹಾಗೂ ತೋಳಿನಲ್ಲಿ ಗಂಡಬೇರುಂಢ ಹಾಗೂ ನವಿಲಿನ ವಿನ್ಯಾಸವನ್ನು ವಿಶೇಷವಾಗಿ ಮಾಡುತ್ತಾರೆ. ನವಿಲು ನಮ್ಮ ರಾಷ್ಟ್ರಪಕ್ಷಿ ಹಾಗೂ ಗಂಡಭೇರುಂಡ ಮೈಸೂರು ಅರಸರ ಲಾಂಛನ. ಈ ಎಂಬ್ರಾಯ್ಡರಿ ವಿನ್ಯಾಸವನ್ನು ಕೈಯಿಂದಲೇ ಮಾಡುತ್ತಾರೆ. ಗ್ರಾಹಕರೂ ಇಷ್ಟಪಟ್ಟಲ್ಲಿಮುತ್ತು, ಕುಂದನ್, ಹರಳುಗಳನ್ನು ಬಳಸಿ ವಿಶೇಷವಾಗಿ ವಿನ್ಯಾಸ ಮಾಡಿಕೊಡುತ್ತಾರೆ. ಈ ಬ್ಲೌಸ್‌ಗಳು ಅದ್ದೂರಿ ವಿನ್ಯಾಸದಿಂದ ಗಮನಸೆಳೆಯುವುದರ ಜೊತೆಗೆ ಸೀರೆ ಉಟ್ಟಾಗ ಶ್ರೀಮಂತ ನೋಟ ಸಿಗುತ್ತದೆ.

ಹಿತಕರವೆನಿಸುವ ವಸ್ತ್ರ

‘ಖಾದಿ ಸೀರೆಗಳು ನೋಡಲು ಸುಂದರವಾಗಿರುವಂತೆ ಧರಿಸಲು ಅಷ್ಟೇ ಹಿತಕರವೆನಿಸುತ್ತವೆ. ಈ ಸೀರೆಗಳಿಗೆ ಇಂತಹ ಡಿಸೈನರ್ ಬ್ಲೌಸ್ ಹೊಲಿಸಿ ಕೊಂಡರೆ ಮದುವೆಯಂತಹ ಅದ್ದೂರಿ ಕಾರ್ಯಕ್ರಮಕ್ಕೂ ಸಲ್ಲುತ್ತದೆ‘ ಎಂಬುದು ನಿವೇದಿತಾ ಮಾತು. ಇದಲ್ಲದೇನಿವೇದಿತಾ ಖಾದಿಯಿಂದ ಗೌನ್, ಸ್ಕರ್ಟ್‌ನಂತಹ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಖಾದಿ ಡಿಸೈನರ್ ಬ್ಲೌಸ್ ಬೆಲೆ ₹1,500ರಿಂದ ಆರಂಭ.

ಮೊದಲೆಲ್ಲಾ ಬಿಳಿ, ಕಂದು ಸೇರಿದಂತೆ ತಿಳಿ ಬಣ್ಣದಲ್ಲಿ ಮಾತ್ರ ಖಾದಿ ಬಟ್ಟೆಗಳು ಬರುತ್ತಿದ್ದವು. ಈಗ ತಿಳಿ, ಗಾಢ ಬಣ್ಣ, ಬಗೆಬಬಗೆ ವಿನ್ಯಾಸ, ಪ್ರಿಂಟ್‌ಗಳಲ್ಲಿ ಖಾದಿ ಸೀರೆ ಲಭ್ಯವಿವೆ. ಕಾಟನ್, ಹ್ಯಾಂಡ್‌ಲೂಮ್, ಖಾದಿ ರೇಷ್ಮೆ ಕೂಡ ಸಿಗುತ್ತವೆ.ಧರಿಸಲು ಕೂಡ ಆರಾಮದಾಯಕ. ಬೆಲೆಯೂ ಕಡಿಮೆ. ಖಾದಿ ಸೀರೆ ಜೊತೆಗೆ ಜಾಕೆಟ್, ಕುರ್ತಾ ಕೂಡ ಈಗಿನ ಟ್ರೆಂಡ್. ಹೊಸ ಹೊಸ ಪ್ರಯೋಗದಿಂದ ಖಾದಿಯೂ ಹೊರತಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.