ಬೆಂಗಳೂರು: ಆರ್ಥಿಕ ಪ್ರಗತಿ ಉತ್ತೇಜನದ ಜತೆಗೆ ವಿವಿಧ ಸಾಮಾಜಿಕ ಕಲ್ಯಾಣ, ಆರೋಗ್ಯ ಯೋಜನೆಗಳನ್ನು ಪ್ರಸ್ತುತ ಬಜೆಟ್ನಲ್ಲಿ ಹಣಕಾಸು ಸಚಿವರು ಘೋಷಿಸಿದ್ದಾರೆ. ಅದರ ಜತೆಗೆ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅತ್ಯಂತ ಮಹತ್ವದ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ಅಂದರೆ, ಇನ್ನು ದೇಶಾದ್ಯಂತ ಒಂದೇ ಪಡಿತರ ಕಾರ್ಡ್ ಯೋಜನೆ ಜಾರಿಗೆ ಬರಲಿದೆ. ಶೀಘ್ರದಲ್ಲೇ 32 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಪಡಿತರ ವ್ಯವಸ್ಥೆ ಬರಲಿದೆ.

ಅಸಂಘಟಿತ ವಲಯದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಸಹಿತ ವಿವಿಧ ವಲಯದ ಜನರಿಗೆ ಇದರಿಂದ ಅನುಕೂಲವಾಗಲಿದೆ. ಪ್ರತಿ ತಿಂಗಳ ಪಡಿತರವನ್ನು ಓರ್ವ ವ್ಯಕ್ತಿ ಯಾವುದೇ ರಾಜ್ಯದಲ್ಲಾದರೂ ಪಡೆಯಬಹುದು.

ಅಂದರೆ, ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿ ಜತೆಗೆ ವಲಸೆ ಕಾರ್ಮಿಕರು ಕೂಡ ಯಾವುದೇ ಸಮಸ್ಯೆಯಿಲ್ಲದೆ ಪಡಿತರ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಇದನ್ನೂ ಓದಿ:Union Budget 2021 Highlights:75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಐಟಿ ರಿಟರ್ನ್ಸ್ ಸಲ್ಲಿಕೆ ಇಲ್ಲ Live

ಜತೆಗೆ ಮನೆ ಬದಲಾಯಿಸಿದ್ದರೆ, ಮನೆಯಿಂದ ಪಡಿತರ ಕೇಂದ್ರ ದೂರದಲ್ಲಿದ್ದರೂ, ಮನೆಗೆ ಸಮೀಪದ ಯಾವುದೇ ಕೇಂದ್ರದಿಂದ ಪಡಿತರವನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಹಕಾರಿಯಾಗಲಿದೆ.

ಇದನ್ನೂ ಓದಿ:Budget 2021: ರೈಲ್ವೆಗೆ ದಾಖಲೆಯ ₹1.1 ಲಕ್ಷ ಕೋಟಿ ಅನುದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.