ನವದೆಹಲಿ: ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಕೃಷಿ ಸೆಸ್, ಸುಂಕ ಹೆಚ್ಚಳ ಜಾರಿಯಾಗುತ್ತಿರುವುದರಿಂದ ಹಲವು ವಸ್ತುಗಳ ಬೆಲೆ ದಿಢೀರ್ ಏರಿಕೆಯಾಗಲಿದೆ. ಈ ಸಾಲಿನ ಬಜೆಟ್ನಲ್ಲಿ ಬೆಲೆ ಇಳಿಕೆಗಿಂತ ದುಬಾರಿಯಾಗಿರುವ ವಸ್ತುಗಳ ಪಟ್ಟಿಯೇ ದೊಡ್ಡದಿದೆ.

ಚಾರ್ಜರ್ ಅಥವಾ ಅಡಾಪ್ಟರ್ನ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮೇಲಿನ ಸುಂಕ ಶೇ 10ರಿಂದ ಶೇ 15ಕ್ಕೆ ಏರಿಕೆ ಮಾಡಲಾಗಿದೆ. ಶೂನ್ಯ ಸುಂಕವಿದ್ದ ಮೊಬೈಲ್ ಫೋನ್ನ ಕೆಲವು ಬಿಡಿ ಭಾಗಗಳಿಗೆ ಶೇ 2.5ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದರಿಂದಾಗಿ ಮೊಬೈಲ್ ಫೋನ್ಗಳ ಬೆಲೆ, ಆಮದು ಮಾಡಿಕೊಳ್ಳುವ ಚಾರ್ಜರ್ಗಳ ಬೆಲೆ ಏರಿಕೆಯಾಗಬಹುದಾಗಿದೆ.

ಇದನ್ನೂ ಓದಿ–ಬಜೆಟ್ 2021: ಕೋವಿಡ್ ಲಸಿಕೆಗೆ ₹ 35,000 ಕೋಟಿ, ಆರೋಗ್ಯಕ್ಕಾಗಿ ₹ 64,180 ಕೋಟಿ

ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಸೀಮಾ ಸುಂಕವನ್ನು ಶೇ 12.5ರಿಂದ ಶೇ 7.5ಕ್ಕೆ ಇಳಿಕೆ ಮಾಡಲಿದೆ. ಭಾರತವು ಅಗತ್ಯಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ ಆಮದು ಮಾಡಿಕೊಳ್ಳುತ್ತದೆ. 2019ರಲ್ಲಿ ಸುಂಕ ಶೇ 10ರಿಂದ ಶೇ 12.5ಕ್ಕೆ ಏರಿಕೆಯಾದ ಪರಿಣಾಮ ಈ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು. ಈ ಮತ್ತೆ ಚಿನ್ನ–ಬೆಳ್ಳಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಯಾವುದು ದುಬಾರಿ:

* ಆಮದು ಮಾಡಿಕೊಳ್ಳುವ ಮೊಬೈಲ್
* ಆಮದು ಮಾಡಿಕೊಳ್ಳುವ ಉಡುಪು
* ಆಮದು ಮಾಡಿಕೊಳ್ಳುವ ಹರಳುಗಳು
* ವಾಹನ ಬಿಡಿಭಾಗ
* ಹುರಿಗಡಲೆ
* ಹತ್ತಿ
* ಸೂರ್ಯಕಾಂತಿ ಎಣ್ಣೆ
* ಕೆಲವು ರಸಗೊಬ್ಬರ
* ಪೆಟ್ರೋಲ್ ಮತ್ತು ಡೀಸೆಲ್
* ಕಾಬೂಲಿ ಕಡಲೆ
* ಸೇಬು
* ಮದ್ಯ

ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ರದ್ದು ಇಲ್ಲ: ಅಂಕಿ ಅಂಶದೊಡನೆ ಸ್ಪಷ್ಟನೆ ನೀಡಿದ ಕೇಂದ್ರ

ಯಾವುದು ಇಳಿಕೆ?

* ಚಿನ್ನ ಮತ್ತು ಬೆಳ್ಳಿ
* ನೈಲಾನ್ ಚಿಪ್ಸ್ ಮತ್ತು ನೈಲಾನ್ ಫೈಬರ್

ಬಜೆಟ್ 2021 Infographic: ಅನುದಾನ ಹಂಚಿಕೆಯಾಗಿರುವ ಪ್ರಮುಖ ಯೋಜನೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.