ಭಾರತವನ್ನು ಈ ಬಜೆಟ್ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲಿದೆ. ದೂರದೃಷ್ಟಿಯ ಈ ಬಜೆಟ್ ಸಮಾಜದ ಎಲ್ಲ ವರ್ಗಗಳನ್ನು ಬಲಪಡಿಸುತ್ತದೆ. ಉದ್ಯೋಗಾವಕಾಶಗಳಿಗೆ ಭಾರಿ ಉತ್ತೇಜನ ನೀಡುತ್ತದೆ. ಇದು ಮಹಿಳಾ ಮತ್ತು ಅಭಿವೃದ್ಧಿ ಕೇಂದ್ರಿತ ಬಜೆಟ್.
-ನರೇಂದ್ರ ಮೋದಿ, ಪ್ರಧಾನಮಂತ್ರಿ
ಇದು ಕೇಂದ್ರ ಸರ್ಕಾರದ ‘ಕುರ್ಚಿ ಬಚಾವೊ ಬಜೆಟ್’. ಇತರ ರಾಜ್ಯಗಳ ವೆಚ್ಚದಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷಗಳಿಗೆ ‘ಪೊಳ್ಳು ಭರವಸೆ’ಗಳನ್ನು ನೀಡಿದೆ. ಅಲ್ಲದೆ ಈ ಬಜೆಟ್, ನಮ್ಮ ಕಾಂಗ್ರೆಸ್ ಪಕ್ಷದ 2024ರ ಚುನಾವಣಾ ಪ್ರಣಾಳಿಕೆಯ ‘ಕಾಪಿ ಪೇಸ್ಟ್’ ಆಗಿದೆ.
–ರಾಹುಲ್ ಗಾಂಧಿ, ಲೋಕಸಭಾ ವಿರೋಧ ಪಕ್ಷದ ನಾಯಕ
ಧರ್ಮ, ಜಾತಿ ಮತ್ತು ಪಂಥವನ್ನು ಲೆಕ್ಕಿಸದೆ ಎಲ್ಲ ಭಾರತೀಯರ ಜೀವನದ ಗುರಿ ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಗಣನೀಯ ಪ್ರಗತಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ‘ವಿಕಸಿತ ಭಾರತ’ಕ್ಕೆ ಸಂಬಂಧಿಸಿದಂತೆ ಮಧ್ಯಂತರ ಬಜೆಟ್‌ನಲ್ಲಿ ರೂಪಿಸಲಾದ ಕಾರ್ಯತಂತ್ರಕ್ಕೆ ಅನುಗುಣವಾಗಿ, ಈ ಬಜೆಟ್‌ನಲ್ಲಿ ಎಲ್ಲರಿಗೂ ಹಲವು ಅವಕಾಶಗಳನ್ನು ಒದಗಿಸಿದ್ದೇವೆ.
-ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
ರಾಜ್ಯದ ಅಗತ್ಯಗಳೇನು ಎಂಬುದನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ ಕೇಂದ್ರ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ. ಈ ಉದ್ದೇಶಪೂರ್ವ ನಿರ್ಲಕ್ಷ್ಯ ಮತ್ತು ತಾರತಮ್ಯವನ್ನು ಖಂಡಿಸುತ್ತೇವೆ. ಪ್ರತಿಭಟನಾರ್ಥಕವಾಗಿ ಇದೇ 27ರಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುತ್ತೇವ.