ಬೆಂಗಳೂರು: ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಸಂಸ್ಥೆಯಾದ ಎಂಟಿಆರ್ ಫುಡ್ಸ್ ತನ್ನ ನೂರನೇ ವರ್ಷಾಚರಣೆ ಅಂಗವಾಗಿ ಶನಿವಾರ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

16.68 ಮೀಟರ್ (54 ಅಡಿ 8.69 ಇಂಚು) ಉದ್ದದ ದೋಸೆಯು ಇಲ್ಲಿಯವರೆಗಿನ ದಾಖಲಾಗಿತ್ತು. ನಗರದ ಬೊಮ್ಮಸಂದ್ರದಲ್ಲಿ ಇರುವ ಕಂಪನಿಯ ಫ್ಯಾಕ್ಟರಿಯಲ್ಲಿ ಈ ದೋಸೆ ತಯಾರಿಸಲು ತನ್ನದೇ ಉತ್ಪನ್ನವಾದ ಸಿಗ್ನೇಷರ್ ರೆಡ್ ಬ್ಯಾಟರ್ ಅನ್ನು ಬಳಸಿಕೊಂಡಿದೆ.

ಎಂಟಿಆರ್‌ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾರ್ಗದರ್ಶನದಡಿ ಆಹಾರ ತಜ್ಞರು ಮತ್ತು ಪಾಕಶಾಲೆಯ ಸಿಬ್ಬಂದಿ ಒಳಗೊಂಡ 75 ಬಾಣಸಿಗರ ತಂಡವು ದೋಸೆ ತಯಾರಿಸಿತು. ದಾಖಲೆ ನಿರ್ಮಿಸಿದ ಬಳಿಕ ಎಂಟಿಆರ್ ಉದ್ಯೋಗಿಗಳ ಜೊತೆಗೆ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಇದನ್ನು ಹಂಚಲಾಯಿತು.

ಈ ವೇಳೆ ಮಾತನಾಡಿದ ಎಂಟಿಆರ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್, ‘ನಾವು 100 ಅಡಿ ಉದ್ದದ ದೋಸೆ ತಯಾರಿಸಲು ಪ್ರಯತ್ನಿಸಿದ್ದೆವು. ಅದನ್ನು ಮೀರಿ 123 ಅಡಿ ಉದ್ದದ ದೋಸೆ ತಯಾರಿಸಿದ್ದೇವೆ. ಇದು ಹೆಮ್ಮೆಯ ಕ್ಷಣವಾಗಿದೆ’ ಎಂದರು.

ದೋಸೆಯು ಮೊದಲಿನಿಂದಲೂ ಎಂಟಿಆರ್ ಪರಂಪರೆಯ ಭಾಗವಾಗಿದೆ. ಇಂದಿಗೂ ಗ್ರಾಹಕರು ಬಯಸುವ ಕಂಪನಿಯ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಈ ಖಾದ್ಯವು ವಿಶ್ವದಾದ್ಯಂತ ಗುರುತಿಸಲ್ಪಟ್ಟಿದೆ ಎಂದು ಹೇಳಿದರು.

ಲೋರ್ಮನ್ ಕಿಚನ್ ಎಕ್ವಿಪ್ಮೆಂಟ್ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಮೌಳಿ ಮಾತನಾಡಿ, ‘ವಿಶ್ವದ ಅತಿ ಉದ್ದನೆಯ ಈ ದೋಸೆ ತಯಾರಿಕೆಗೆ ಕಂಪನಿಯಿಂದ ವಿಶೇಷವಾದ ಇಂಡಕ್ಷನ್ ಸ್ಟೌ ನಿರ್ಮಿಸಲಾಗಿತ್ತು. ಇದು ಲೋರ್ಮನ್ ನಿರ್ಮಿಸಿದ ಅತಿ ಉದ್ದನೆಯ ಸ್ಟೌ ಕೂಡ ಆಗಿದೆ’ ಎಂದು ತಿಳಿಸಿದರು.
.ವಿಶ್ವ ದೋಸೆ ದಿನ: ವ್ಯಕ್ತಿಯೊಬ್ಬನಿಂದ ವರ್ಷದಲ್ಲಿ 447 ಬಾರಿ ಆರ್ಡರ್: Swiggy.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.