ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರ ಕುಟುಂಬವು ಅಂಬುಜಾ ಸಿಮೆಂಟ್ಸ್‌ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಯಲ್ಲಿ ಹೆಚ್ಚುವರಿಯಾಗಿ ₹8,339 ಕೋಟಿಯನ್ನು ಹೂಡಿಕೆ ಮಾಡಿದೆ.

ಇದರಿಂದ ಕಂಪನಿಯಲ್ಲಿ ಕುಟುಂಬದ ಷೇರುಗಳ ಮೇಲಿನ ಒಡೆತನವು ಶೇ 70.3ಕ್ಕೆ ಮುಟ್ಟಿದೆ.

2022ರ ಅಕ್ಟೋಬರ್‌ನಲ್ಲಿ ಅದಾನಿ ಕುಟುಂಬವು ₹5 ಸಾವಿರ ಕೋಟಿ ಮತ್ತು ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ₹6,661 ಕೋಟಿ ಹೂಡಿಕೆ ಮಾಡಿತ್ತು. ಈಗ ಹೂಡಿಕೆ ಮೊತ್ತವು ₹20 ಸಾವಿರ ಕೋಟಿಗೆ ಮುಟ್ಟಿದೆ ಎಂದು ಕಂಪನಿ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಂಪನಿಯ ಒಟ್ಟು ಉತ್ಪಾದನಾ ಸಾಮರ್ಥ್ಯ 7.61 ಕೋಟಿ ಟನ್ ಆಗಿದೆ. ಇದನ್ನು 2028ರ ವೇಳೆಗೆ 14 ಕೋಟಿ ಟನ್‌ಗೆ ಹೆಚ್ಚಿಸಲು ಈ ಹೂಡಿಕೆಯು ನೆರವಾಗಲಿದೆ. ಜೊತೆಗೆ, ಕಂಪನಿಯ ಹಣಕಾಸು ಸ್ಥಿತಿ, ಸಾಮರ್ಥ್ಯ ಮತ್ತು ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.