ನವದೆಹಲಿ: ಏರ್‌ಏಷ್ಯಾ ಇಂಡಿಯಾ ಕಂಪನಿಯಲ್ಲಿ ತಾನು ಹೊಂದಿರುವ ಪಾಲನ್ನು ಏರ್ ಇಂಡಿಯಾ ಕಂಪನಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿರುವುದಾಗಿ ಮಲೇಷ್ಯಾದ ಏರ್‌ಏಷ್ಯಾ ಬುಧವಾರ ತಿಳಿಸಿದೆ.

ಟಾಟಾ ಸಮೂಹ ಮತ್ತು ಏರ್‌ಏಷ್ಯಾ ಮಾಲೀಕತ್ವದ ‘ಏರ್‌ಏಷ್ಯಾ ಇಂಡಿಯಾ’ ವಿಮಾನಯಾನ ಕಂಪನಿಯು 2014ರ ಜೂನ್‌ನಲ್ಲಿ ಆರಂಭವಾಗಿದೆ. ಈ ಕಂಪನಿಯಲ್ಲಿ ಟಾಟಾ ಸನ್ಸ್ ಶೇ 83.67ರಷ್ಟು ಷೇರುಗಳನ್ನು ಹಾಗೂ ಏರ್‌ಏಷ್ಯಾ ಶೇ 16.33ರಷ್ಟು ಷೇರುಗಳನ್ನು ಹೊಂದಿದೆ.

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ವಿಸ್ತಾರಾ, ಏರ್‌ಏಷ್ಯಾ ಇಂಡಿಯಾ ವಿಮಾನಯಾನ ಕಂಪನಿಗಳು ಟಾಟಾ ಸಮೂಹಕ್ಕೆ ಸೇರಿವೆ. ವಿಸ್ತಾರಾ ಕಂಪನಿಯಲ್ಲಿ ಸಿಂಗಪುರ ಏರ್‌ಲೈನ್ಸ್ ಕೂಡ ಪಾಲು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.