ಬೆಂಗಳೂರು: ದೇಶದ ದೂರಸಂಪರ್ಕ ಸೇವಾ ಪೂರೈಕೆದಾರ ಭಾರ್ತಿ ಏರ್ಟೆಲ್, ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 15 ಲಕ್ಷ ಮನೆಗಳಿಗೆ ಹೊಸದಾಗಿ ವೈ–ಫೈ ಸೇವೆಗಳನ್ನು ವಿಸ್ತರಿಸಿದೆ.

ಈ ವೈ–ಫೈ ಸೇವೆಯಿಂದ ಗ್ರಾಹಕರು, ವೇಗದ ಇಂಟರ್ನೆಟ್ ಸೇವೆಯ ಜೊತೆಗೆ ಅನಿಯಮಿತ ಸ್ಟ್ರೀಮಿಂಗ್, 20ಕ್ಕೂ ಹೆಚ್ಚು ಒಟಿಟಿ ಸೇವೆಗಳು, 350ಕ್ಕೂ ಅಧಿಕ ಟಿ.ವಿ ಚಾನೆಲ್ಗಳನ್ನು ವೀಕ್ಷಿಸಬಹುದಾಗಿದೆ. ಗ್ರಾಹಕರು ಈ ಸೇವೆ ಪಡೆಯಲು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ಇಲ್ಲವೇ 8130181301 ಸಂಖ್ಯೆಗೆ ಕರೆ ಮಾಡುವ ಮೂಲಕ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ರಾಜ್ಯದ ಗ್ರಾಹಕರು ಕನ್ನಡದ ಪ್ರಮುಖ ಟಿವಿ ಚಾನೆಲ್ಗಳು, ಡಿಸ್ನಿ, ಹಾಟ್ಸ್ಟಾರ್, ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ ಸೇವೆಯನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.

‘ಭಾರ್ತಿ ಏರ್ಟೆಲ್ನ ವೈ–ಫೈ ಸೇವೆ ಇಂದು ಕರ್ನಾಟಕದ ಎಲ್ಲೆಡೆ ಹರಡಿದೆ. ಅತ್ಯಧಿಕ ವೇಗದ ಈ ಸೇವೆಗೆ ಮಾಸಿಕ ದರ ₹699ರಿಂದ ಆರಂಭವಾಗಲಿದ್ದು, ಇದು ಅಗ್ಗದ ಟಾರಿಫ್ ಆಗಿದೆ’ ಎಂದು ಭಾರ್ತಿ ಏರ್ಟೆಲ್ನ ಕರ್ನಾಟಕದ ಸಿಇಒ ವಿವೇಕ್ ಮೆಹೆಂದಿರತ್ತ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.