ನವದೆಹಲಿ: ಕಂಪನಿಗಳ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಮೈಕ್ರೊಸಾಫ್ಟ್ ಒಡೆತನದ ವೃತ್ತಿಪರರ ಜಾಲತಾಣವಾದ ಲಿಂಕ್ಡ್‌ಇನ್ ಇಂಡಿಯಾ, ಸತ್ಯ ನಾದೆಲ್ಲಾ ಸೇರಿ ಎಂಟು ಮಂದಿಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು, ₹27.10 ಲಕ್ಷ ದಂಡ ವಿಧಿಸಿದೆ.

ಕಾಯ್ದೆಯಡಿ ಲಾಭದಾಯಕ ಮಾಲೀಕತ್ವಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಹಾಗಾಗಿ, ದಂಡ ವಿಧಿಸಲಾಗಿದೆ ಎಂದು ದೆಹಲಿ ಮತ್ತು ಹರಿಯಾಣ ವಿಭಾಗದ ಕಂಪನಿಗಳ ರಿಜಿಸ್ಟ್ರಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸೆಕ್ಷನ್ 90ರ ಅನ್ವಯ ಸೀಮಿತ ಪಾಲುದಾರಿಕೆ ಕಂಪನಿಗಳು ಲಾಭದಾಯಕ ಮಾಲೀಕತ್ವ ಕುರಿತಂತೆ ಕಂಪನಿಗಳ ರಿಜಿಸ್ಟ್ರಾರ್‌ಗೆ ವರದಿ ಮಾಡಬೇಕಿರುವುದು ಕಡ್ಡಾಯ.

2020ರ ಜೂನ್ 1ರಂದು ಲಿಂಕ್ಡ್‌ಇನ್ ಕಾರ್ಪೊರೇಷನ್‌ನ ಸಿಇಒ ಆಗಿ ರಯಾನ್ ರೋಸ್ಲಾನ್ಕಿ ನೇಮಕವಾಗಿದ್ದರು. ಅಧಿಕಾರವಹಿಸಿಕೊಂಡ ದಿನದಿಂದಲೂ ಅವರು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈ ಕುರಿತು ರಿಜಿಸ್ಟ್ರಾರ್‌ಗೆ ವರದಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.