ಹೈದರಾಬಾದ್: ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನ (ಎಂಇಐಎಲ್) ಎಂಇಐಎಲ್ ಫೌಂಡೇಶನ್ನಿಂದ ₹200 ಕೋಟಿ ದೇಣಿಗೆ ನೀಡಲಾಗುತ್ತಿದೆ.

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಶನಿವಾರ ಈ ಕುರಿತ ತಿಳಿವಳಿಕೆ ಪತ್ರಕ್ಕೆ ಕಂಪನಿಯು ಸಹಿ ಹಾಕಿದೆ. ಈ ವೇಳೆ ಎಂಇಐಎಲ್ ನಿಯೋಗದ ನೇತೃತ್ವವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣರೆಡ್ಡಿ ಇದ್ದರು.

ತೆಲಂಗಾಣ ಸರ್ಕಾರದ ಸಹಭಾಗಿತ್ವದಡಿ ಈ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಕೌಶಲ ಮತ್ತು ಉದ್ಯಮಶೀಲತೆ ಕುರಿತ ತರಬೇತಿ ಮೂಲಕ ಯುವಜನರಿಗೆ ಉಜ್ವಲ ಭವಿಷ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.

ಆಗಸ್ಟ್ನಲ್ಲಿ ಹೈದರಾಬಾದ್ ಹೊರವಲಯದ ಕಂದುಕುರು ಮಂಡಲದ ಮೀರ್ ಖಾನ್ ಪೇಟಾದ 57 ಎಕರೆ ಸ್ಥಳದಲ್ಲಿ ವಿಶ್ವವಿದ್ಯಾಲಯಕ್ಕೆ ಅಡಿಪಾಯ ಹಾಕಲಾಗಿದೆ.

ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಎಂಇಐಎಲ್ ಫೌಂಡೇಶನ್ ಯುವಕರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಹೊಸತನಕ್ಕೆ ಸಿದ್ಧವಾಗಿರುವ ಯುವಪೀಳಿಗೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷೆಗೆ ಬೆಂಬಲವಾಗಿ ನಿಂತಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.