ನವದೆಹಲಿ: 2023–24ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಭಾರತಕ್ಕೆ ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಒಳಹರಿವು ಶೇ 13ರಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ಒಟ್ಟು ₹2.65 ಲಕ್ಷ ಕೋಟಿಯಷ್ಟೇ ಹರಿದು ಬಂದಿದೆ.

2022–23ರ ಇದೇ ಅವಧಿಯಲ್ಲಿ ₹3.04 ಲಕ್ಷ ಕೋಟಿ ಎಫ್‌ಡಿಐ ಭಾರತಕ್ಕೆ ಬಂದಿತ್ತು. ಕಂಪ್ಯೂಟರ್ ಹಾರ್ಡ್‌ವೇರ್, ಸಾಫ್ಟ್‌ವೇರ್, ದೂರಸಂಪರ್ಕ, ಆಟೊ ಮತ್ತು ಫಾರ್ಮ್ ವಲಯದಲ್ಲಿ ಹೂಡಿಕೆ ಕಡಿಮೆ ಆಗಿರುವುದೇ ಇಳಿಕೆಗೆ ಕಾರಣವಾಗಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತಿಳಿಸಿದೆ.

2022–23ರ ಮೂರನೇ ತ್ರೈಮಾಸಿಕದಲ್ಲಿ ₹81,500 ಕೋಟಿ ಎಫ್‌ಡಿಐ ಹರಿವು ಬಂದಿತ್ತು. ಇದಕ್ಕೆ ಹೋಲಿಸಿದರೆ ಡಿಸೆಂಬರ್ ತ್ರೈಮಾಸಿಕದಲ್ಲಿ ಒಳಹರಿವು ಶೇ 18ರಷ್ಟು ಹೆಚ್ಚಾಗಿದ್ದು, ಒಟ್ಟು ₹91,175 ಕೋಟಿಗೆ ತಲುಪಿದೆ.

ಈಕ್ವಿಟಿಯನ್ನೂ ಒಳಗೊಂಡ ಎಫ್‌ಡಿಐ ಒಳಹರಿವು ₹4.29 ಲಕ್ಷ ಕೋಟಿ ಆಗಿದೆ. 2022–23ರಲ್ಲಿ ಈ ಮೊತ್ತವು ₹4.58 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಶೇ 7ರಷ್ಟು ಕುಸಿತವಾಗಿದೆ ಎಂದು ತಿಳಿಸಿದೆ.

ಸಿಂಗಪುರ, ಅಮೆರಿಕ, ಬ್ರಿಟನ್, ಯುಎಇ ಸೇರಿದಂತೆ ಪ್ರಮುಖ ದೇಶಗಳಿಂದ ಬರುವ ಎಫ್‌ಡಿಐ ಈಕ್ವಿಟಿ ಹರಿವು ಕಡಿಮೆಯಾಗಿದೆ. ಆದರೆ, ಮಾರಿಷಸ್, ನೆದರ್ಲೆಂಡ್, ಜಪಾನ್ ಮತ್ತು ಜರ್ಮನಿಯಿಂದ ಬರುವ ಹರಿವು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.