ವಾಷಿಂಗ್ಟನ್/ನ್ಯೂಯಾರ್ಕ್: ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್,10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತನ್ನ ಬಡ್ಡಿ ದರದಲ್ಲಿ ಕಡಿತ ಮಾಡಲಿದೆ ಎಂದು ಹೂಡಿಕೆದಾರರು ನಿರೀಕ್ಷಿಸಿದ್ದಾರೆ.

ಫೆಡರಲ್ ರಿಸರ್ವ್ ಮಂಗಳವಾರ ಮತ್ತು ಬುಧವಾರ ಬಡ್ಡಿದರ ಪರಾಮರ್ಶೆ ನಡೆಸಲಿದೆ.

ನಿರುದ್ಯೋಗ ದರ 50 ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾದ ಶೇ 3.7ರಷ್ಟಿದೆ. ಹಣದುಬ್ಬರವು ಕೇಂದ್ರೀಯ ಬ್ಯಾಂಕ್ ನಿಗದಿ ಮಾಡಿರುವ ಶೇ 2ಕ್ಕಿಂತಲೂ ಕಡಿಮೆ ಅಂದರೆ ಶೇ 1.8ರಲ್ಲಿದೆ. ಗ್ರಾಹಕರ ಖರೀದಿ ಸಾಮರ್ಥ್ಯದಲ್ಲಿ ಏರಿಕೆ ಕಂಡುಬರುತ್ತಿದೆ. ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿಯ ವೇಗ ತಗ್ಗಿದ್ದರೂ ಸುಸ್ಥಿರ ಪ್ರಗತಿಗಿಂತಲೂ ಉತ್ತಮವಾಗಿಯೇ ಇದೆ. ಹೀಗಿರುವಾಗ ಬಡ್ಡಿದರ ಕಡಿತದ ತುರ್ತು ಅಗತ್ಯವೇನೂ ಕಂಡುಬರುತ್ತಿಲ್ಲ ಎನ್ನುವುದು ಕೆಲವು ಪರಿಣತರ ಅಭಿಪ್ರಾಯವಾಗಿದೆ.

‘ಸಣ್ಣ ಪ್ರಮಾಣದ ಬಡ್ಡಿದರ ಕಡಿತ ಸಾಕಾಗುವುದಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.