ಬೆಂಗಳೂರು: ಗೂಗಲ್‌ನ ‘ಜಾಬ್ ಕಟ್’ ಪ್ರಕ್ರಿಯೆ ಮುಂದುವರಿದಿದ್ದು, ಜಾಹೀರಾತು ಮಾರಾಟ ವಿಭಾಗದಿಂದ (advertising sales team) ನೂರಾರು ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದಾಗಿ ಮಂಗಳವಾರ ಹೇಳಿದೆ.

ಪುನರ್‌ರಚನಾ ಅಂಗವಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಗೂಗಲ್‌ನ ಚೀಫ್ ಬ್ಯುಸಿನೆಸ್ ಆಫೀಸರ್ ಫಿಲಿಪ್ ಶಿಂಡ್ಲರ್ ಅವರು ಉದ್ಯೋಗಿಗಳಿಗೆ ಕಳುಹಿಸಿದ ಮೆಮೊದಲ್ಲಿ ತಿಳಿಸಿದ್ದಾರೆ ಎಂದು ‘ಬ್ಯುಸಿನೆಸ್ ಇನ್‌ಸೈಡರ್’ ವರದಿ ಮಾಡಿದೆ.
.ಭಾರತದಲ್ಲಿ ಕ್ರೋಮ್ಬುಕ್ ತಯಾರಿಕೆ: ಎಚ್ಪಿ–ಗೂಗಲ್ ಒಪ್ಪಂದ.
ಹಾರ್ಡ್‌ವೇರ್, ಸೆಂಟ್ರಲ್ ಎಂಜಿನಿಯರಿಂಗ್ ಹಾಗೂ ಗೂಗಲ್ ಅಸಿಸ್ಟೆಂಟ್ ತಂಡದಿಂದ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.

ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್ ಹಾಗೂ ಕೆಲಸದ ಹೊರೆಗಳನ್ನು ಕಡಿಮೆಗೊಳಿಸಲು ಸ್ವಯಂಚಾಲಿತ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಕಂಪನಿ ಮುಂದಾಗಿದ್ದು, ಕೆಲಸದಿಂದ ನೌಕರರು ವಜಾ ಮಾಡುವ ಈ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ಇದೆ.
.ಡಿಜಿಟಲ್ ವಂಚನೆ: ಗೂಗಲ್ ಪ್ಲೆಸ್ಟೋರ್ನಿಂದ 17 ಆ್ಯಪ್ಗಳು ಡಿಲೀಟ್ .
ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಬೆಂಬಲ ನೀಡುವ ಸಲುವಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಗೂಗಲ್ ಹೇಳಿದೆ. ಈ ಬದಲಾವಣೆಯಿಂದಾಗಿ ಕಂಪನಿಯು ಹೆಚ್ಚಿನ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅಲ್ಲದೆ ‘ಸಪೋರ್ಟ್ ಟೀಂ’ನ ನೇಮಕಾತಿ ಈ ವರ್ಷ ಹೆಚ್ಚಾಗುವ ಸಂಭವವಿದೆ.

ಜಾಗತಿಕವಾಗಿ 12,000 ಮಂದಿಯನ್ನು ಉದ್ಯೋಗದಿಂದ ಕಿತ್ತು ಹಾಕುವುದಾಗಿ ಕಳೆದ ವರ್ಷ ಜನವರಿಯಲ್ಲಿ ಗೂಗಲ್ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.