ನವದೆಹಲಿ: ಸಕ್ಕರೆ ವ್ಯಾಪಾರದಲ್ಲಿ ತೊಡಗಿರುವ ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನು ವಿವರವನ್ನು ಅಕ್ಟೋಬರ್ 17ರೊಳಗೆ ಆಹಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಈ ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವ್ಯಾಪಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.

ಆಹಾರ ಸಚಿವಾಲಯವು ಸೆಪ್ಟಂಬರ್ 23ರಂದು ಆದೇಶ ಜಾರಿ ಮಾಡಿ, ಸಕ್ಕರೆ ದಾಸ್ತಾನು ವ್ಯಾಪಾರದಲ್ಲಿ ತೊಡಗಿರುವ ಎಲ್ಲ ಮಾರಾಟಗಾರರು ಪ್ರತಿ ವಾರ ತಮ್ಮಲ್ಲಿರುವ ಸಕ್ಕರೆ ದಾಸ್ತಾನು ವಿವರವನ್ನು ವೆಬ್‌ಸೈಟ್‌ನಲ್ಲಿ ದಾಖಲೆ ಮಾಡುವಂತೆ ತಿಳಿಸಿತ್ತು. ಆದರೆ ಹೆಚ್ಚಿನ ವ್ಯಾಪಾರಿಗಳು ಇದುವರೆಗೂ ಸಕ್ಕರೆ ದಾಸ್ತಾನು ಮಾಹಿತಿ ಸಲ್ಲಿಸಿಲ್ಲ. ಮಾರಾಟಗಾರರು ದಾಸ್ತಾನು ಮಾಹಿತಿ ನೀಡದೆ ಇರುವುದು ಸಕ್ಕರೆ ಮಾರುಕಟ್ಟೆಯ ಸಮತೋಲನಕ್ಕೆ ಅಡ್ಡಿಯಾಗುತ್ತಿದೆ. ವ್ಯಾಪಾರಿಗಳು ಅಕ್ಟೋಬರ್ 17ರೊಳಗೆ ಸಕ್ಕರೆ ದಾಸ್ತಾನು ಮಾಹಿತಿ ನೀಡಬೇಕು. ಇದು ಅವರಿಗೆ ಕೊನೆಯ ಅವಕಾಶ. ನಿಯಮ ಉಲ್ಲಂಘಿಸಿದರೆ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಹಾರ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.